ಸಂಸದ ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ

| Published : Mar 19 2024, 12:45 AM IST

ಸಾರಾಂಶ

ಅನಂತಕುಮಾರ ಹೆಗಡೆ ಸಂವಿಧಾನದ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಸಂವಿಧಾನ ವಿರೋಧಿ ಕೃತ್ಯವೆಸಗುತ್ತಿದ್ದಾರೆ.

ಮುಂಡಗೋಡ: ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ಮತ್ತು ಮಾಧ್ಯಮದವರಿಗೆ ಅವಮಾನ ಮಾಡಿದ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಸೋಮವಾರ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸಂವಿಧಾನದಡಿಯಲ್ಲಿಯೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಸಂವಿಧಾನವನ್ನು ಎತ್ತಿ ಹಿಡಿಯುತ್ತೇನೆಂದು ಪ್ರತಿಜ್ಞೆ ಸ್ವೀಕಾರ ಮಾಡಿದ ಅನಂತಕುಮಾರ ಹೆಗಡೆ ಸಂವಿಧಾನದ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಸಂವಿಧಾನ ವಿರೋಧಿ ಕೃತ್ಯವೆಸಗುತ್ತಿದ್ದಾರೆ. ಅಲ್ಲದೇ ಮಾಧ್ಯಮ ಪ್ರತಿನಿಧಿಗಳಿಗೆ ಕೆಟ್ಟ ಪದಗಳನ್ನು ಬಳಸಿ ಅವಮಾನ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಜೂಜೆ ಸಿದ್ದಿ, ಜಿಲ್ಲಾ ಸಂಚಾಲಕ ಗೋಪಾಲ ನಡಕಿನಮನಿ, ಜಿಲ್ಲಾ ಸಂಘಟನಾ ಸಂಚಾಲಕ ಹನುಮಂತ ಕಟ್ಟಿಮನಿ, ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಸಂಗೀತಾ ವಾಸ್ಕೋರೆ, ಸಂತೋಷ ಕಟ್ಟಿಮನಿ, ಹುಲಗಪ್ಪ ಭೋವಿವಡ್ಡರ, ರಾಘವೇಂದ್ರ ಹರಿಜನ, ಬಸವರಾಜ ಹಳ್ಳಮ್ಮನವರ್, ನಿಂಗಪ್ಪ ಮೇತ್ರಿ, ರಮೇಶ ಖಾತೆದಾರ, ವಿರೂಪಾಕ್ಷಯ್ಯ ಹಿರೇಮಠ, ಲಕ್ಷ್ಮಣ ಭೋವಿವಡ್ಡರ, ಹನುಮಂತ ಹರಿಜನ, ಪ್ರಭು ಅರಶಿಣಗೇರಿ, ಪರಶುರಾಮ ಪೂಜಾರ, ಶಿವಾನಂದ ಪೂಜಾರ, ಕೋಟೆಪ್ಪ ಹರಿಜನ, ದೀಪಕ ವಡ್ಡರ, ಫಕ್ಕೀರಪ್ಪ ಹರಿಜನ, ಸಂತೋಷ ಆಲೂರ ಮುಂತಾದವರಿದ್ದರು.