ನಕಲಿ ರಸಗೊಬ್ಬರ ತಯಾರಕರ, ಮಾರುವವರ ವಿರುದ್ಧ ಕ್ರಮಕ್ಕೆ ಆಗ್ರಹ

| Published : Jun 20 2025, 12:34 AM IST / Updated: Jun 20 2025, 12:35 AM IST

ನಕಲಿ ರಸಗೊಬ್ಬರ ತಯಾರಕರ, ಮಾರುವವರ ವಿರುದ್ಧ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲಾದ್ಯಂತ ಡಿಎಪಿ ನಕಲಿ ರಸಗೊಬ್ಬರ ಪೂರೈಕೆ ಹಾವಳಿ ನಡೆಯುತ್ತಿದ್ದು, ನಕಲಿ ರಸಗೊಬ್ಬರ ತಯಾರಕರ ಹಾಗೂ ಪೂರೈಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಜಿಲ್ಲಾದ್ಯಂತ ಡಿಎಪಿ ನಕಲಿ ರಸಗೊಬ್ಬರ ಪೂರೈಕೆ ಹಾವಳಿ ನಡೆಯುತ್ತಿದ್ದು, ನಕಲಿ ರಸಗೊಬ್ಬರ ತಯಾರಕರ ಹಾಗೂ ಪೂರೈಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಆಗ್ರಹಿಸಿದ್ದಾರೆ.

ಗುರುವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ರಸಗೊಬ್ಬರ ಪೂರೈಸುವ ಸಮಯದಲ್ಲಿ ಪೂರೈಕೆದಾರರನ್ನು ರೈತ ಸಂಘಟನೆಗಳು ಹಿಡಿದು ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಂದ ಪ್ರಕರಣ ದಾಖಲಾಗಿದೆ. ಈ ರೀತಿ ಅನಕ್ಷರಸ್ಥರು ರೈತರು ನಕಲಿ ರಸಗೊಬ್ಬರವನ್ನು ಬೆಳೆಗಳಿಗೆ ಹಾಕುವುದರಿಂದ ಬೆಳೆ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದ ಅವರು, ಡಿಎಪಿ ನಕಲಿ ರಸಗೊಬ್ಬರ ತಯಾರಕರ ಹಾಗೂ ಪೂರೈಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಬಸವರಾಜ ಗೋನಾಳ, ಪರಶುರಾಮ ಮಂಟೂರ, ಮಲ್ಲಪ್ಪ ಗಾಣಗೇರ, ಅರುಣ ಕಟ್ಟಿಮನಿ, ಸಿದ್ರಾಮ ಮತ್ತಿತರರು ಉಪಸ್ಥಿತರಿದ್ದರು.