ಸಾರಾಂಶ
ಸುತಗಟ್ಟಿ ಮತ್ತು ಗಂಜಿಗಟ್ಟಿ ಗ್ರಾಮದಲ್ಲಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಯ ಜನರು ಸಾಗುವಳಿದಾರರ ಮೇಲೆ ದೌರ್ಜನ್ಯ ಮಾಡುತ್ತಾ ಬೆಳೆದ ಬೆಳೆ ನಾಶ ಪಡಿಸಿದ್ದಾರೆ ಮತ್ತು ಈ ಹಿಂದೆ ಕೊಡ ಹಲವಾರು ಬಾರಿ ದೌರ್ಜನ್ಯ ಎಸಗುತ್ತಾ ಬಂದಿರುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ರಾಜ್ಯ ಸರ್ಕಾರಕ್ಕೆ ತಾಲೂಕಿನ ತಹಸೀಲ್ದಾರ್ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಾಗುವಳಿ ಚೀಟಿ ನೀಡಲು ಮನವಿ ಮಾಡಿದ್ದೇವೆ.
ಕಲಘಟಗಿ: ತಾಲೂಕಿನ ಸುತಗಟ್ಟಿ ಮತ್ತು ಗಂಜಿಗಟ್ಟಿ ಗ್ರಾಮದಲ್ಲಿರುವ ಸರ್ವೇ ನಂ. 231 ಮತ್ತು 133 ಹಾಗೂ 99 ರಲ್ಲಿ ಸಾಗುವಳಿ ಜಮೀನಲ್ಲಿ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಯನ್ನ ಅದೇ ಗ್ರಾಮದ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ನಾಶ ಮಾಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಾದೇವ ಮಾದರ ದೂರಿದರು.
ಅವರು ಗುರುವಾರ ಪ್ರತಿಭಟನೆ ಮಾಡುತ್ತಾ ತಹಸೀಲ್ದಾರ್ ಕಚೇರಿಗೆ ತೆರಳಿ ಗ್ರೇಡ್- 2 ತಹಸೀಲ್ದಾರ್ ಬಸವರಾಜ ಹೊಂಕಣದವರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗು ಹಿಂದುಳಿದ ವರ್ಗದ ಬಡ ಕೃಷಿ ಕೂಲಿ ಕಾರ್ಮಿಕರು ಹಲವಾರು ವರ್ಷಗಳಿಂದ ಭೂಮಿ ಉಳಿಮೆ ಮಾಡುತ್ತಾ ಬಂದಿರುತ್ತಾರೆ. ಅದೇ ಗ್ರಾಮದ ಕೆಲವು ಪಟ್ಟಭದ್ರ ಹಿತಾಸಕ್ತಿಯ ಜನರು ಸಾಗುವಳಿದಾರರ ಮೇಲೆ ದೌರ್ಜನ್ಯ ಮಾಡುತ್ತಾ ಬೆಳೆದ ಬೆಳೆ ನಾಶ ಪಡಿಸಿದ್ದಾರೆ ಮತ್ತು ಈ ಹಿಂದೆ ಕೊಡ ಹಲವಾರು ಬಾರಿ ದೌರ್ಜನ್ಯ ಎಸಗುತ್ತಾ ಬಂದಿರುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ರಾಜ್ಯ ಸರ್ಕಾರಕ್ಕೆ ತಾಲೂಕಿನ ತಹಸೀಲ್ದಾರ್ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಾಗುವಳಿ ಚೀಟಿ ನೀಡಲು ಮನವಿ ಮಾಡಿದ್ದೇವೆ. ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಗಮನಕ್ಕೆ ಇರುವುದಲ್ಲದೆ ಮೇಲಾಗಿ ಸಾಗುವಳಿದಾರರ ಪರವಾಗಿ ಧಾರವಾಡ ಉಚ್ಚ ನ್ಯಾಯಾಲಯ ಮದ್ಯಂತರ ತಡೆಯಾಜ್ಞೆ ನೀಡಿರುತ್ತದೆ.ಘನ ನ್ಯಾಯಾಲಯದ ಆಜ್ಞೆಯನ್ನು ಧಿಕ್ಕರಿಸಿ ಕೆಲವರು ಸೇರಿಕೊಂಡು ದನಕರುಗಳನ್ನು ಬಿಟ್ಟು ಬೆಳೆಗಳನ್ನು ಸಂಪೂರ್ಣವಾಗಿ ನಾಶಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಕೂಡಲೇ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.