ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಬೇಡಿಕೆ

| Published : Jul 17 2024, 12:46 AM IST

ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಶಾಲೆಗಳಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿರುವವರು 1,20,000ಕ್ಕೂ ಮೇಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಸಂಸದ ರಾಧಾಕೃಷ್ಣ ದೊಡ್ಮನಿ ಅವರನ್ನು ಭೇಟಿ ಮಾಡಿದ ನಿಯೋಗದ ಮುಖಂಡರು ಶಾಲೆಗಳಲ್ಲಿ ಅಡುಗೆ ತಯಾರಿಸುವ ಬಿಸಿಊಟ ತಯಾರಿಕರಿಗೆ ವೇತನ ಹೆಚ್ಚಿಸುವಂತೆ ಕೇಂದ್ರದ ಮೇಲೆ ಒತ್ತಡ ತರುವತೆ ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಸಂಸದರನ್ನು ಕಂಡು ಮಾತುಕತೆ ನಡೆಸಿರುವ ಫೆಡರೇಷನ್‌ ಸದಸ್ಯರು, ದೇಶಾದ್ಯಂತ ಮಧ್ಯಾಹ್ನ ಉಪಾಹಾರ ಯೋಜನೆ ಅಡಿಯಲ್ಲಿ ಶಾಲೆಗಳಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅಡುಗೆ ಸಿಬ್ಬಂದಿಯವರಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಶಾಲೆಗಳಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿರುವವರು 1,20,000ಕ್ಕೂ ಮೇಲಿದ್ದಾರೆ.

ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಅಡಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಊಟ ತಯಾರಿಕೆ ಮಹಿಳೆಯರಿಗೆ, ಕೇಂದ್ರ ಸರ್ಕಾರ ಬಿಸಿಊಟ ಯೋಜನೆಗೆ 60-40 ಅನುಪಾತದಲ್ಲಿ ರಾಜ್ಯ ಸರ್ಕಾರಕ್ಕೆ ಅನುದಾನ ನೀಡುತ್ತಿದೆ. ಈ ಅನುದಾನದಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ಸಿಬ್ಬಂದಿಗೆ ಒಬ್ಬರಿಗೆ ಮಾಸಿಕ 600 ರೂಗಳನ್ನು ಮಾತ್ರ ಕೇಂದ್ರ ಸರ್ಕಾರ ಗೌರವ ಸಂಬಾವನೆಯಾಗಿ ನೀಡುತ್ತಿದೆ. ಈ ಸಂಭಾವನೆಯಲ್ಲಿ ಬಿಸಿಊಟ ತಯಾರಕರು ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ.

ಆದ್ದರಿಂದ ಕಲಬುರಗಿ ಲೋಕ ಸಭಾ ಕ್ಷೇತ್ರದ ಸಂಸದರಾದ ತಾವುಗಳು ಪ್ರಧಾನ ಮಂತ್ರಿಯವರ ಮೇಲೆ ಒತ್ತಾಯ ತಂದು ಬಿಸಿಊಟ ತಯಾರಿಕರ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿ ಮಾಡಬೇಕು.

ಬಿಸಿಊಟ ತಯಾರಿಕರಿಗೆ ಕೆಲಸದ ಭದ್ರತೆ ಒದಗಿಸುವುದು ಸೇರಿದಂತೆ ಕಾರ್ಮಿಕ ಕಾಯ್ದೆ ಅಡಿಯಲ್ಲಿ ದೊರಕುವ ಇತರೆ ಎಲ್ಲಾ ಸವಲತ್ತುಗಳನ್ನು ಬಿಸಿಯೂಟ ತಯಾರಿಕೆ ಮಹಿಳೆಯರಿಗೆ ಒದಗಿಸುವಂತೆಸದನದಲ್ಲಿ ಕೇಂದ್ರ ಸರ್ಕಾರಕ್ಕೆ ತಾವು ಒತ್ತಾಯ ತರಬೇಕೆಂದು ನಿಯೋಗದಲ್ಲಿದ್ದಂತಹ ಪ್ರಭುದೇವ ಯಳಸಂಗಿ, ಮಹಾಲಿಂಗಮ್ಮ ಲೇಗಟಿಕರ್, ಮಾಹಾದೇವಿ ಜಾಧವ್, ಬಿಸಿಯೂಟ ತಯಾರಕರ ಫೆಡರೇಷನ್‌ ಯಶೋಧಾ ರಾಠೋಡ ಕುಸುನೂರ, ಅನೀತಾ ಸೊಂತ, ಶಿವಲಿಂಗಮ್ಮ ಸಾವಳಗಿ, ಮಲ್ಲಮ್ಮ ಜಗತ್, ಅಂಬವ್ವ ಸರಡಗಿ, ಸಾಬಮ್ಮಾ ಹೊನ್ನಕಿಣ್ಣಗಿ ಸೇರಿದಂತೆ ಪ್ರಮುಖರು ಆಗ್ರಹಿಸಿದ್ದಾರೆ.