ಸಾರಾಂಶ
ಗಂಗಾವತಿ ನಗರದ ಜುಲೈನಗರ ಸರ್ಕಲ್‌ನಿಂದ ಹಿಡಿದು ಇಸ್ಲಾಂಪುರ ಸರ್ಕಲ್ ವರೆಗೆ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಧಾರ್ಮಿಕ ಸಂಕೇತ ತೆರವುಗೊಳಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಗಂಗಾವತಿ: ನಗರದ ಜುಲೈನಗರ ಸರ್ಕಲ್‌ನಿಂದ ಹಿಡಿದು ಇಸ್ಲಾಂಪುರ ಸರ್ಕಲ್ ವರೆಗೆ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಧಾರ್ಮಿಕ ಸಂಕೇತ ತೆರವುಗೊಳಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಈ ಬೀದಿದೀಪದ ಕಂಬಗಳಿಗೆ ಗದೆ, ಬಿಲ್ಲು-ಬಾಣ ಹಾಗೂ ತಿರುಪತಿ ವೆಂಕಟಸ್ವಾಮಿಯ ಸಂಕೇತವಿದೆ. ಒಂದೇ ಧರ್ಮದ ಸಂಕೇತ ಇದರಲ್ಲಿ ಇರುವುದರಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ. ಕಾರಣ ಇವಗಳನ್ನು ತೆರವುಗೊಳಿಸಬೇಕು ಎಂದು ಕೋರಿದ್ದಾರೆ.ಗಂಗಾವತಿ ನಗರವು ಈಗಾಗಲೇ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಹಲವು ಬಾರಿ ಸಣ್ಣ ಸಣ್ಣ ವಿಚಾರಕ್ಕೆ ನಗರದಲ್ಲಿ ಗಲಭೆಗಳು ಉಂಟಾಗಿವೆ. ಆದುದರಿಂದ ಇಂತಹ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವ ವಿದ್ಯುತ್ ದೀಪಗಳನ್ನು ತೆರವುಗೊಳಿಸುವ ಆದೇಶ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮುಖಾಂತರ ನಗರದಲ್ಲಿ ಶಾಂತಿ ಕಾಪಾಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹಮ್ಮದ್ ಅಲಿ, ಉಪಾಧ್ಯಕ್ಷ ಫಯಾಜ್ ಅಹ್ಮದ್, ಕಾರ್ಯದರ್ಶಿ ಚಾಂದ್ ಸಲ್ಮಾನ್, ಜತೆ ಕಾರ್ಯದರ್ಶಿಯಾದ ಅಲ್ತಾಫ್ ಹುಸೈನ್, ಅಜರುದ್ದೀನ್ ಇತರರ ಉಪಸ್ಥಿತರಿದ್ದರು.ಗಂಗಾವತಿ ನಗರದ ಜುಲೈ ನಗರದಿಂದ ಇಸ್ಲಾಂಪುರದ ರಸ್ತೆ ಮಧ್ಯೆ ಹಾಕಿರುವ ವಿದ್ಯುತ್ ಕಂಬಗಳು ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ್ದು. ತಮಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದ್ದಾರೆ. ಈಗ ಇಂತಹ ದೀಪಗಳನ್ನು ಅಳವಡಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಗಂಗಾವತಿ ಪೌರಾಯುಕ್ತ ವಿರೂಪಾಕ್ಷಮೂರ್ತಿ ಹೇಳಿದರು.