ನಾಳೆಯಿಂದ ದೇವನಗರಿ ಪ್ರೋ ಇಮೇಜ್‌-2024: ಶ್ರೀನಾಥ ಅಗಡಿ

| Published : Aug 23 2024, 01:10 AM IST

ಸಾರಾಂಶ

ಜಿಲ್ಲಾ ಫೋಟೋಗ್ರಾಫರ್ಸ್‌ ಮತ್ತು ವೀಡಿಯೋಗ್ರಾಫರ್ಸ್‌ ಸಂಘ, ಫೋಟೋಗ್ರಾಫರ್ಸ್‌ ಯೂತ್ ವೆಲ್‌ಫೇರ್‌ ಅಸೋಯೇಷನ್‌ ವತಿಯಿಂದ ಆ.24 ಮತ್ತು 25ರಂದು ಬೆಳಗ್ಗೆ 10.30 ಗಂಟೆಗೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ದೇವನಗರಿ ಪ್ರೋ ಇಮೇಜ್‌-2024 ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ ಪಿ. ಅಗಡಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, ಸನ್ಮಾನ, ಕಾರ್ಯಾಗಾರ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲಾ ಫೋಟೋಗ್ರಾಫರ್ಸ್‌ ಮತ್ತು ವೀಡಿಯೋಗ್ರಾಫರ್ಸ್‌ ಸಂಘ, ಫೋಟೋಗ್ರಾಫರ್ಸ್‌ ಯೂತ್ ವೆಲ್‌ಫೇರ್‌ ಅಸೋಯೇಷನ್‌ ವತಿಯಿಂದ ಆ.24 ಮತ್ತು 25ರಂದು ಬೆಳಗ್ಗೆ 10.30 ಗಂಟೆಗೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ದೇವನಗರಿ ಪ್ರೋ ಇಮೇಜ್‌-2024 ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ ಪಿ. ಅಗಡಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.24ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಬಸವರಾಜ ವಿ. ಶಿವಗಂಗಾ, ಸಂಘದ ಜಿಲ್ಲಾಧ್ಯಕ್ಷ ವಿಜಯ ಜಾಧವ್‌, ಶಿವಮೊಗ್ಗ ಅಧ್ಯಕ್ಷ ಕೆ.ಟಿ. ಶ್ರೀನಿವಾಸ, ಹಾವೇರಿ ಅಧ್ಯಕ್ಷ ರಾಜೇಂದ್ರ ರಿತ್ತಿ, ಗದಗ ಅಧ್ಯಕ್ಷ ಪವನ್ ಕೆ. ಮೆಹರವಾಡೆ, ಚಿತ್ರದುರ್ಗ ಅಧ್ಯಕ್ಷ ಸೈಯದ್ ರಹಮತ್ತುಲ್ಲಾ, ವಿಜಯನಗರ ಅಧ್ಯಕ್ಷ ಕೆ.ರಾಮಣ್ಣ, ಕೊಪ್ಪಳ ಅಧ್ಯಕ್ಷ ವಿಜಯಕುಮಾರ ವಸ್ತ್ರದ್ ಭಾಗವಹಿಸುವರು ಎಂದರು.

ಪ್ರತಿವರ್ಷ ಸಂಘದಿಂದ ಜಿಲ್ಲಾಮಟ್ಟದ ಸಮಾರಂಭ ಆಯೋಜಿಸಲಾಗುತ್ತಿದೆ. ಈ ಸಲ ಅಂತರ ರಾಷ್ಟ್ರೀಯಮಟ್ಟದಲ್ಲಿ ಸಮಾರಂಭ ಆಯೋಜಿಸುವ ಸದುದ್ದೇಶದಿಂದ ಏಳು ಜಿಲ್ಲೆಗಳ ಸಹಯೋಗದಲ್ಲಿ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಸುಮಾರು ₹45 ಅಂತರ ರಾಷ್ಟ್ರೀಯ ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಆ.24ರಂದು ಸಂಜೆ 5.30ಕ್ಕೆಛಾಯಾ ಸಾಧಕರಿಗೆ ಸನ್ಮಾನ ಹಾಗೂ ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಎಸ್.ಆರ್. ತಿಪ್ಪೇಸ್ವಾಮಿ, ಎಸ್.ದುಗ್ಗಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪಾಲಿಕೆ ನಾಮನಿರ್ದೇಶಕ ಸದಸ್ಯರಾದ ಸುರಭಿ ಎಸ್. ಶಿವಮೂರ್ತಿ, ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಡಿ.ಕುಮಾರ ಅವರನ್ನು ಸಂಘದಿಂದ ಗೌರವಿಸಲಾಗುವುದು. ಹಿರಿಯ ಛಾಯಾಗ್ರಾಹಕರಾದ ಬಸವರಾಜ ಬೆಳ್ಳೂಡಿ, ಬೂಸ್ನೂರು ಜೆ.ನಾಗರಾಜ, ಬಿ.ವಿನಾಯಕ, ಮನೋಜಕುಮಾರ ಅವರನ್ನು ಸಹ ಸನ್ಮಾನಿಸಲಾಗುವುದು ಎಂದರು.

ಪ್ರದರ್ಶನದಲ್ಲಿ ನವೀನ ತಂತ್ರಜ್ಞಾನ ಪರಿಚಯ, ಉಚಿತ ಕಾರ್ಯಾಗಾರ, ಉಚಿತ ಕ್ಯಾಮರಾ ತಪಾಸಣೆ, ಆರೋಗ್ಯ ತಪಾಸಣೆ, ಅಂಚೆ ಇಲಾಖೆ ಸೌಲಭ್ಯ, ಇ-ಶ್ರಮ ಕಾರ್ಡ್‌ ನೋಂದಣಿ ಮಾಡಲಾಗುವುದು. ಸುಮಾರು 5 ಸಾವಿರ ಛಾಯಾಗ್ರಾಹಕರು ಎರಡೂ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಸಂಘದ ವಿಜಯಕುಮಾರ ಜಾಧವ್, ದುಗ್ಗಪ್ಪ ಪಿ,ಎನ್.ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ, ಎನ್.ಕೆ.ಕೊಟ್ರೇಶ, ತಿಲಕ್, ಶಂಭು, ನಾಗರಾಜ, ಕೆ.ಪಿ,ಅರುಣಕುಮಾರ, ಮಿಥುನ್ ಇತರರು ಇದ್ದರು.

- - - -21ಕೆಡಿವಿಜಿ2:

ದಾವಣಗೆರೆಯಲ್ಲಿ ಆ.24ರಿಂದ 2 ದಿನಗಳ ಕಾಲ ನಡೆಯುವ ದೇವನಗರಿ ಪ್ರೋ ಇಮೇಜ್ 2024ರ ಕುರಿತ ಪೋಸ್ಟರ್ ಅನ್ನು ಶ್ರೀನಾಥ ಅಗಡಿ, ವಿಜಯ್ ಜಾಧವ್ ಇತರರು ಬಿಡುಗಡೆಗೊಳಿಸಿದರು.