ಸಾರಾಂಶ
ಹೊಸಕೋಟೆ: ಪ್ರಸ್ತುತ ದಿನಗಳಲ್ಲಿ ಮನುಷ್ಯನಲ್ಲಿ ಓದುವ ಹವ್ಯಾಸ ಕಡಿಮೆ ಆಗುತ್ತಿದ್ದು, ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಪ್ರೊ.ನಾಗರಾಜ್ ಹೇಳಿದರು.
ನಗರದ ಎಂಡಿಪಿ ಕಾಫಿ ಹೌಸ್ ಆವರಣದಲ್ಲಿ ನಡೆದ ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ಅವರ ಅನುವಾದದ ವನಮಾಲಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆಧುನಿಕತೆ, ಬೆಳೆಯುತ್ತಿರುವ ತಂತ್ರಜ್ಞಾನದ ನಡುವೆ ಜನರು ಟಿವಿ, ಮೊಬೈಲ್‌ಗಳ ವಿಕ್ಷಣೆಗೆ ಒತ್ತು ನೀಡುತ್ತಿದ್ದು, ಕ್ಷಣಕ್ಷಣದ ಮಾಹಿತಿ ಮೊಬೈಲ್‌ನಲ್ಲೆ ಪಡೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಪತ್ರಿಕೆ, ಪುಸ್ತಕ ಓದುವ ಹವ್ಯಾಸವನ ಸಂಪೂರ್ಣವಾಗಿ ಬದಿಗೊತ್ತಿದ್ದಾರೆ. ಆದ್ದರಿಂದ ಹೊಸಹೊಸ ಪುಸ್ತಕಗಳ ಮುದ್ರಣಕ್ಕೂ ಅವಕಾಶ ಇಲ್ಲದಂತಾಗಿದೆ. ಇದರ ನಡುವೆ ಬಾಗೇಪಲ್ಲಿ ಕೃಷ್ಣಮೂರ್ತಿ ಅನುವಾದದ ತ್ರಿಮಿಕ್ರಮನಾಗಿ ಕಾರ್ತಿಕ ಪ್ರಕಾಶನದ ಗುರು ರವೀಂದ್ರರ ದಿ ಗಾರ್ಡೇನಿಯರ್ ಆಂಗ್ಲ ಭಾಷೆ ಕೃತಿಯ ಭವಾನುವಾದ ಮಾಡಿ ಪುಸ್ತಕ ವನಮಾಲಿಯನ್ನು ಲೋಕಾರ್ಪಣೆ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ಮಾತನಾಡಿ, ಸಹಸ್ರಾರು ಇಂಗ್ಲೀಷ್ ಕೃತಿಗಳು ಅನುವಾದವನ್ನೆ ಕಾಣದೆ ಹಾಗೆ ಉಳಿದಿವೆ. ಇದರ ನಡುವೆ ರವೀಂದ್ರರ ದಿ ಗಾರ್ಡೆನಿಯರ್ ಆಂಗ್ಲಭಾಷೆ ಕೃತಿಯನ್ನು ಹಲವಾರು ವರ್ಷಗಳ ಬಳಿಕ ಅನುವಾದ ಮಾಡಿ ಮುದ್ರಣ ಮಾಡಿ ಓದುಗರ ಮುಂದೆ ತಂದಿದ್ದೇನೆ. ಆದ್ದರಿಂದ ಓದುಗರು ಪುಸ್ತಕವನ್ನು ಕೊಂಡು ಓದಬೇಕು. ಇದರಿಂದ ಮತ್ತಷ್ಟು ಪುಸ್ತಕಗಳನ್ನು ಹೊರತರಲು ಸಾಧ್ಯವಾಗುತ್ತದೆ ಎಂದ ಅವರು, ಪ್ರತಿಯೊಬ್ಬರೂ ಪುಸ್ತಕ ಓದಿ ಲೇಖಕರನ್ನು ಪ್ರೋತ್ಸಾಹಿಸಬೇಕೆಮದು ಹೇಳಿದರು.ಕಾರ್ಯಕ್ರಮದಲ್ಲಿ ಸಾಹಿತಿ ನಗರಕೆರೆ ರಮೇಶ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ಫೋಟೋ : 7 ಹೆಚ್‌ಎಸ್‌ಕೆ 2ಹೊಸಕೋಟೆಯಲ್ಲಿ ನಡೆದ ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ಅವರ ಅನುವಾದದ ವನಮಾಲಿ ಪುಸ್ತಕವನ್ನು ಪ್ರೊ.ನಾಗರಾಜ್ ಲೋಕಾರ್ಪಣೆ ಗೊಳಿಸಿದರು.