ಎಲ್ಲ ರೋಗಗಳಿಗೆ ಮೂಲ ಸಕ್ಕರೆ ಕಾಯಿಲೆ

| Published : Nov 30 2023, 01:15 AM IST

ಎಲ್ಲ ರೋಗಗಳಿಗೆ ಮೂಲ ಸಕ್ಕರೆ ಕಾಯಿಲೆ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ರೋಗಗಳಿಗೆ ಮೂಲ ಸಕ್ಕರೆ ಕಾಯಿಲೆ

ಇಳಕಲ್ಲ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಕಾಟವಾ

ಕನ್ನಡಪ್ರಭ ವಾರ್ತೆ ಇಳಕಲ್ಲ

ಜನರಿಗೆ ಸಕ್ಕರೆ ಕಾಯಿಲೆ ಮಾರಕವಾಗಿದೆ. ಇದು ಎಲ್ಲ ರೋಗಗಳಿಗೆ ಮೂಲ ಎಂದು ಇಳಕಲ್ಲ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಕಾಟವಾ ತಿಳಿಸಿದರು. ನಗರದ ಅಲಂಪೂರ ಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಳಕಲ್ಲ ಲಯನ್ಸ್ ಸಂಸ್ಥೆಯವರು ಆಯೋಜಿಸಿದ್ದ ಮಧುಮೇಹ ತಪಾಸಣೆ ಉಚಿತ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಕ್ಕರೆ ರೋಗ ಬಂದರೆ ಮನುಷ್ಯ ಮಾನಸಿಕವಾಗಿ ಕುಗ್ಗುತ್ತಾನೆ. ಈಗಿನ ಆಧುನಿಕ ಯುಗದಲ್ಲಿ ಸಕ್ಕರೆ ರೋಗ ನಿಯಂತ್ರಣಕ್ಕೆ ಸಾಕಷ್ಟು ಔಷಧಿಗಳು ಬಂದಿವೆ. ಸಕ್ಕರೆ ರೋಗ ಬಂದವರು ಅಂಜಬಾರದು ಎಂದರು. ಈ ಭಾಗದ ಬಡ ಜನರಿಗಾಗಿ ಸಕ್ಕರೆ ರೋಗ ಉಚಿತ ತಪಾಷಣೆ ಕಾರ್ಯ ಮಾಡುತ್ತಿದ್ದೇವೆ. ಜನರು ಇದರ ಸದುಪಯೋಗ ಪಡೆದಯಬೇಕು ಎಂದು ತಿಳಿಸಿದರು. ವೈದ್ಯ ಡಾ. ಸುನೀಲ ಬೈರಗೊಂಡ, ಡಾ.ವಿಠಲ ಶ್ಯಾವಿ ಇತರರು ಮಾತನಾಡಿದರು. ವೇದಿಕೆಯಲ್ಲಿ ಲಯನ್ಸ್‌ ಸಂಸ್ಥೆ ಕಾರ್ಯದರ್ಶಿ ಕಾಶಿಂ ಕಂದಗಲ್ಲ, ಕೋಶಾಧ್ಯಕ್ಷ ಏಕನಾಥ ರಾಜೋಳ್ಳಿ, ಶಾಲೆಯ ಅಧ್ಯಕ್ಷ ಇನಾಮದಾರ, ಮುಖ್ಯ ಶಿಕ್ಷಕಿ ಕೆ.ಜಿ.ಸಯ್ಯದ ಅಮಿನ್‌ ಇತರರು ಇದ್ದರು. 150ಕ್ಕೂ ಹೆಚ್ಚು ಜನರ ಸಕ್ಕರೆ ರೋಗ ತಪಾಸಣೆ ಮಾಡಲಾಯಿತು. ಡಾ.ಟಿಪ್ಪು ಸುಲ್ತಾನ ಭಂಡಾರಿ, ಬಸವರಾಜ ಮಠದ, ಮುರುಗೇಶ ಪಾಟೀಲ, ರಾಜೇಂದ್ರ ಜುಂಜಾ, ರವಿ ಬಸವಾ ಇತರರು ಉಪಸ್ಥಿತರಿದ್ದರು.