ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಪೌರಕಾರ್ಮಿಕರಿಗೆ ಮಳೆಗಾಲದ ಹಿನ್ನೆಲೆಯಲ್ಲಿ ವೈಯಕ್ತಿಕ ಸುರಕ್ಷತೆ ಹಿತದೃಷ್ಟಿಯಿಂದ ಜಾಕೆಟ್‌ಗಳನ್ನು ವಿತರಿಸಲಾಯಿತು.ಉಪವಿಭಾಗಾಧಿಕಾರಿ, ಪುರಸಭೆ ಆಡಳಿತಾಧಿಕಾರಿ ಪ್ರಭಾವತಿ ಫಕೀರಪೂರ, ಶಾಸಕ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾತ್ಕಾಲಿಕ ಅನುಮೋದನೆ ನೀಡಿರುವ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ ಪರಿಷ್ಕೃತ-2ರ ಅಂತಿಮ ಅನುಮೋದನೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು. ಮುಖ್ಯಾಧಿಕಾರಿ ವಿರೇಶ ಹಸಬಿ, ಪುರಸಭೆ ಸದಸ್ಯರುಗಳಾ ಬಸವರಾಜ ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ವಿಜಯ ಬೋಳನ್ನವರ, ಶಿವಬಸಪ್ಪ ಕುಡಸೋಮಣ್ಣವರ, ಗುರಪ್ಪ ಮೆಟಗುಡ್ಡ, ಉಳವಪ್ಪ ಬಡ್ಡಿಮನಿ, ಅರ್ಜುನ ಕಲಕುಟಕರ, ಬಸಪ್ಪ ಕೋಲಕಾರ, ಸಾಗರ ಭಾವಿಮನಿ, ಜಗದೀಶ ಜಂಬಗಿ, ವಾಣಿಶ್ರೀ ಪತ್ತಾರ, ಶಶಿಕಲಾ ಕಲ್ಲೊಳ್ಳಿ, ಲಕ್ಷ್ಮೀ ಬಡ್ಲಿ, ಪ್ರೇಮಾ ಪಾಂಡಪ್ಪ ಇಂಚಲ, ಶ್ರೀದೇವಿ ದೇವಲಾಪೂರ, ಅಂಜನಾ ಮನೋಹರ ಬೋಂಗಾಳೆ, ಅಮೀರಬಿ ಬಾಗವಾನ, ಹೇಮಲತಾ ಹಿರೇಮಠ, ದಿಲಶಾದ ನದಾಫ ಮತ್ತು ಬೆಳಗಾವಿ ನಗರ ಯೋಜನಾ ಪ್ರಾಧಿಕಾ ಸಹಾಯಕ ನಿರ್ದೇಶಕರು ಶ್ರೀಮತಿ ಬಳ್ಳಾರಿಮಠ ನಗರ ಯೋಜಕರು ರಕ್ಷಿತ ಸೋಮಣ್ಣವರ ಮತ್ತು ಪುರಸಭೆಯ ಕಿರಿಯ ಅಭಿಯಂತ ಜಿ.ಜಿ.ಮಹಾಳಂಕ ಇತರರು ಉಪಸ್ಥಿತರಿದ್ದರು.