ಅನ್ಯ ಜಾತಿಗಳಿಗೆ ಎಸ್ಟಿ ಪ್ರಮಾಣ ಪತ್ರ ನೀಡಬೇಡಿ

| Published : Feb 21 2024, 02:04 AM IST

ಸಾರಾಂಶ

ವಿಜಯಪುರ: ಗಂಗಾಮತ, ಅಂಬಿಗ, ಡೋರ, ಟೋಕರೆ ಕೋಳಿ, ಗೊಂಡಾ ರಾಜಗೊಂಡ, ಕುರುಬ, ಅನ್ಯ ಜಾತಿಗಳಿಗೆ ಎಸ್ಟಿ ಜಾತಿ ಪ್ರಮಾಣ ಪತ್ರವನ್ನು ನೀಡಲು ಆದೇಶ ನೀಡಿದ್ದನ್ನು ತಕ್ಷಣ ರಾಜ್ಯ ಸರ್ಕಾರ ಹಿಂಪಡೆಯಬೇಕು. ಅನ್ಯ 39 ಜಾತಿಗಳನ್ನು ಪರಿಶಿಷ್ಟ ಪಂಗಡದ ಎಸ್.ಟಿ. ಜಾತಿಗಳಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸರ್ಕಾರ ಶಿಫಾರಸ್ಸು ಮಾಡಿದ್ದನ್ನು ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ

ಗಂಗಾಮತ, ಅಂಬಿಗ, ಡೋರ, ಟೋಕರೆ ಕೋಳಿ, ಗೊಂಡಾ ರಾಜಗೊಂಡ, ಕುರುಬ, ಅನ್ಯ ಜಾತಿಗಳಿಗೆ ಎಸ್ಟಿ ಜಾತಿ ಪ್ರಮಾಣ ಪತ್ರವನ್ನು ನೀಡಲು ಆದೇಶ ನೀಡಿದ್ದನ್ನು ತಕ್ಷಣ ರಾಜ್ಯ ಸರ್ಕಾರ ಹಿಂಪಡೆಯಬೇಕು. ಅನ್ಯ 39 ಜಾತಿಗಳನ್ನು ಪರಿಶಿಷ್ಟ ಪಂಗಡದ ಎಸ್.ಟಿ. ಜಾತಿಗಳಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸರ್ಕಾರ ಶಿಫಾರಸ್ಸು ಮಾಡಿದ್ದನ್ನು ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ರಾಜ್ಯದಲ್ಲಿ ನಕಲಿ ಎಸ್.ಟಿ. ಪ್ರಮಾಣ ಪತ್ರಗಳ ತನಿಖೆಗೆ ಕ್ರಿಯಾ ಸಮಿತಿಯನ್ನು ರಚಿಸಬೇಕು. ಕಲಬುರ್ಗಿ ಅಹಿಂದ ಸಮಾವೇಶದಲ್ಲಿ ನೀಡಿರುವ ಹೇಳಿಕೆಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ನೀಡಿರುವ ಆಡಿ ಹೇಳಿಕೆಯನ್ನು ತಮ್ಮ ಸರ್ಕಾರ ವಾಪಸು ಪಡೆಯಬೇಕು. ಹರಿಹರ ವಾಲ್ಮೀಕಿ ಜಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಅಸಂವಿಧಾನಿಕ ಹೇಳಿಕೆಯನ್ನು ಹಿಂಪಡೆಯಬೇಕು. ಸದರಿ ಹೇಳಿಕೆಯಿಂದ ರಾಜ್ಯದಲ್ಲಿ ಇನ್ನಷ್ಟು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಸರ್ಕಾರವೇ ಅವಕಾಶ ನೀಡಿದಂತಾಗುತ್ತದೆ. ಇದರಿಂದ ವಾಲ್ಮೀಕಿ ಸಮಾಜಕ್ಕೆ ತುಂಬಾ ಅನ್ಯಾಯವಾಗುತ್ತದೆ ಎಂದು ದೂರಿದರು.

ಎಸ್ಟಿ ಶೇ.7% ಮೀಸಲಾತಿ ಇನ್ನು ಜಾರಿಯಾಗಿಲ್ಲ. ತಕ್ಷಣ 9 ಶೆಡ್ಯೂಲ್‌ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಆದೇಶ ಮಾಡಬೇಕು. ವಾಲ್ಮೀಕಿ ಸಮಾಜದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಹೋರಾಟಕ್ಕೆ ಬೆಂಬಲ ನೀಡಬೇಕು. ಒಂದು ವೇಳೆ ಬೆಂಬಲ ನೀಡದಿದ್ದರೆ ಎಸ್ಟಿ ಮೀಸಲು ಕ್ಷೇತ್ರದಿಂದ ಆರಿಸಿ ಬಂದ ಎಲ್ಲರೂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೇ, ಹಿಂದುಳಿದ ವರ್ಗದ 2ಎ ದಲ್ಲಿ ಬರುವ ಕುರುಬ ಜಾತಿಯವರು ಗೊಂಡ, ಕಾಡು ಕುರುಬ, ರಾಜಗೊಂಡ ಜಾತಿಯ ಹೆಸರಿನಲ್ಲಿ ಹಾಗೂ ಪ್ರವರ್ಗ-1ರಲ್ಲಿ ಬರುವ ಕಬ್ಬಲಿಗ ಮತ್ತು ಗಂಗಾ ಮತಸ್ಥ ಜಾತಿಯವರು ಪರಿವಾರ ಮತ್ತು ತಳವಾರ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆದವರ ಮತ್ತು ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಮೂಲಕ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ತಡೆಯಬೇಕು. ರಾಜ್ಯದ ಪ್ರತಿ ತಾಲೂಕಿಗೆ 1ರಂತೆ ವಸತಿ ಸಹಿತ ಏಕಲವ್ಯ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಶೈಕ್ಷಣಿಕ ಅಭಿವೃದ್ದಿಗೆ ಅನುವು ಮಾಡಿಕೊಡಬೇಕು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರುದ್ಧ ಸ್ವಯಂ ದೂರಗಳನ್ನು ದಾಖಲಿಸಿಕೊಳ್ಳುವ ಮತ್ತು ಸ್ವತಂತ್ರವಾಗಿ ತನಿಖೆ ಮಾಡುವ ಅಧಿಕಾರವನ್ನು ಪುನಃ ನೀಡಬೇಕು ಮತ್ತು ದೂರುಗಳು ಶೀಘ್ರ ವಿಲೇವಾರಿಯಾಗಲು ಸಿಬ್ಬಂದಿ ನೇಮಿಸಬೇಕು. ಕೊಪ್ಪಳ ಜಿಲ್ಲೆಯ ಗಂಗಾವತಿಯ ತಾಲ್ಲೂಕಿನ ಐತಿಹಾಸಿಕ ಗುಮ್ಮಟ ದುರ್ಗ ಪ್ರದೇಶವನ್ನು ಕಿಮ್ಮಿಂದ ಅಭಿವೃದ್ಧಿ ಪ್ರಾಧಿಕಾರ ಪ್ರದೇಶವೆಂದು ಘೋ?ಣೆ ಮಾಡಿ ಅದನ್ನು ಅಭಿವೃದ್ಧಿ ಪಡಿಸಬೇಕು. ರಾಯಚೂರು ವಿಶ್ವವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ರವರ ಹೆಸರನ್ನು ಹಾಗೂ ರಾಜ್ಯದ ಯವುದಾದರೂ ಒಂದು ವಿಮಾನ ನಿಲ್ದಾಣಕ್ಕೆ ವೀರ ಮದಕರಿನಾಯಕರ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಮರಾಯ ಜಿಗಜಿಣಗಿ, ರವಿ ನಾಯ್ಕೋಡಿ, ಈರಪ್ಪ ಯಡಹಳ್ಳಿ, ಲಕ್ಷ್ಮಣ ಕೊಳೂರಗಿ, ಪ್ರಶಾಂತ ದಳವಾಯಿ ಶರಣಗೌಡ ಪಾಟೀಲ ಮತ್ತಿತರರು ಇದ್ದರು.