ಗ್ಯಾರಂಟಿಗಳಿಂದ ಜನರಿಗೆ ಬರ ಎದುರಿಸುವ ಶಕ್ತಿ: ಶಾಸಕ ಟಿ.ಬಿ.ಜಯಚಂದ್ರ

| Published : Apr 15 2024, 01:21 AM IST

ಗ್ಯಾರಂಟಿಗಳಿಂದ ಜನರಿಗೆ ಬರ ಎದುರಿಸುವ ಶಕ್ತಿ: ಶಾಸಕ ಟಿ.ಬಿ.ಜಯಚಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನ ಐದು ಗ್ಯಾರಂಟಿಗಳಿಂದ ಜನರಲ್ಲಿ ಬರ ಎದುರಿಸುವ ಶಕ್ತಿ ಬಂದಿದೆ. ಈ ಯೋಜನೆಗಳಿಗೆ ರಾಜ್ಯ ಸರ್ಕಾರ ಒಂದು ವರ್ಷಕ್ಕೆ 56,೦೦೦ ಕೋಟಿ ರು. ನೀಡುತ್ತಿದೆ

ಕನ್ನಡಪ್ರಭ ವಾರ್ತೆ ಶಿರಾಕಾಂಗ್ರೆಸ್‌ನ ಐದು ಗ್ಯಾರಂಟಿಗಳಿಂದ ಜನರಲ್ಲಿ ಬರ ಎದುರಿಸುವ ಶಕ್ತಿ ಬಂದಿದೆ. ಈ ಯೋಜನೆಗಳಿಗೆ ರಾಜ್ಯ ಸರ್ಕಾರ ಒಂದು ವರ್ಷಕ್ಕೆ 56,೦೦೦ ಕೋಟಿ ರು. ನೀಡುತ್ತಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಪ್ರಚಾರ ಪೂರ್ವಭಾವಿ ಸಭೆ, ಬಿಎಲ್ಎಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 133 ವರ್ಷಗಳ ಹಿಂದೆ ಬಂದಿದ್ದ ಬರಗಾಲ ಮತ್ತೆ ಬಂದಿದೆ. ಇಂತಹ ಸಮಯದಲ್ಲಿ 5 ಗ್ಯಾರಂಟಿಗಳು ಜನರಿಗೆ ತಲುಪದಿದ್ದರೆ ಜೀವನ ಕಷ್ಟವಾಗುತ್ತಿತ್ತು. ಈ ಯೋಜನೆಗಳಿಂದ ಮಹಿಳೆಯರಿಗೆ ಶಕ್ತಿ ಬಂದಿದೆ. ಶಿರಾ ತಾಲೂಕಿಗೆ 10 ತಿಂಗಳಲ್ಲಿ 196 ಕೋಟಿ ರು. ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿದೆ ಎಂದರು.ಗೋವಿಂದ ಕಾರಜೋಳಗೆ ಅಭಿವೃದ್ಧಿ ಇಚ್ಚಾಶಕ್ತಿ ಇಲ್ಲ: ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಕ್ಷೇತ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ. ಈ ಹಿಂದೆ ಲೋಕಸಭಾ ಸದಸ್ಯರಾಗಿದ್ದ ವೇಳೆ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಸಮಸ್ಯೆಗೆ ಸ್ಪಂದಿಸಿದ್ದರು. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 600 ಕಿ.ಮೀ. ದೂರದಿಂದ ಬಂದು ಸ್ಪರ್ಧಿಸಿದ್ದಾರೆ. ಇವರಿಗೆ ಅಭಿವೃದ್ಧಿಯ ಇಚ್ಚಾಶಕ್ತಿ ಇಲ್ಲ. ರಾಜಕೀಯ ಉದ್ದೇಶಕ್ಕೆ ಮಾತ್ರ ಸೀಮತರಾಗಿದ್ದಾರೆ ಎಂದು ಟಿ.ಬಿ.ಜಯಚಂದ್ರ ಹೇಳಿದರು. ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಸರಳ ವ್ಯಕ್ತಿಯಾಗಿದ್ದಾರೆ. ಜನಸಾ ಮಾನ್ಯರ ಕಷ್ಟ ಆಲಿಸುತ್ತಾರೆ. ಮತದಾರರು ಬಿ.ಎನ್.ಚಂದ್ರಪ್ಪರನ್ನು ಆಯ್ಕೆ ಮಾಡಬೇಕು ಎಂದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಶಿರಾ ತಾಲೂಕು ನನಗೆ ಅತ್ಯಂತ ಹತ್ತಿರವಾದ ಕ್ಷೇತ್ರವಾಗುತ್ತಿದೆ. ಇದೇ ತಾಲೂಕಿನ ವ್ಯಕ್ತಿಗೆ ನನ್ನ ಮಗಳನ್ನು ಕೊಟ್ಟು ವಿವಾಹ ಮಾಡುತ್ತಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಮಾಜಿ ಶಾಸಕ ಸಾ. ಲಿಂಗಯ್ಯ, ಜಿಪಂ ಮಾಜಿ ಸದಸ್ಯ ಕೆಂಚಮಾರಯ್ಯ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಉಪಾಧ್ಯಕ್ಷ ಹನುಮಂತಯ್ಯ, ಶಿರಾ ಯೋಜನಾ ಪ್ರಾಧಿಕಾರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಹದೇವಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ಸುನಿಲ್, ಮಹೇಂದ್ರಗೌಡ, ತಾಲೂಕು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಗೋಮಾರದಹಳ್ಳಿ ಮಂಜುನಾಥ್ ಇದ್ದರು.