ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳ ಆರೋಗ್ಯದೊಂದಿಗೆ ಮುಂದಿನ ಅವರ ಜೀವನದ ಉಜ್ವಲ ಭವಿಷ್ಯ ಕಂಡುಕೊಳ್ಳಲು ಶಾಲೆಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಎಲೆರಾಂಪುರ ಕುಂಚಿಟಿಗರ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತೆರೆಸಾ ಸ್ಕೂಲ್ ಏರ್ಪಡಿಸಿದ್ದ ಅನುಬಂಧಗಳ ಪರ್ವ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಶೈಕ್ಷಣಿಕ ಚಟುವಟಿಕೆ ಜೊತೆಗೆ ಮಕ್ಕಳ ಬೆಳವಣಿಗೆಗೆ ಪೂರಕವಾದ ಪಠ್ಯೇತರ ಚಟುವಟಿಕೆಗಳ ಕಡೆ ಸಹ ಗಮನ ಹರಿಸುವುದು ಬಹು ಮುಖ್ಯವಾಗುತ್ತದೆ. ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಗಳಲ್ಲಿ ಪೋಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರಿತಿಸುವ ಕೆಲಸ ಮಾಡಬೇಕು, ಮಕ್ಕಳಲ್ಲಿನ ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಹಾಗೂ ಮಕ್ಕಳೂ ಸಹ ಇಂತಹ ವೇದಿಕೆಗಳ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾನಿಲಯ ಜೆ.ಬಿ. ಕ್ಯಾಂಪಾಸ್ ಡೀನ್ ಶಿಕ್ಷಣ ಉಪನ್ಯಾಸಕಿ ಪ್ರೊ.ಡಾ. ಹಸೀನ್ ತಾಜ್ ಮಾತನಾಡಿ, ಪೋಷಕರಾದ ನಾವು ಸಮಾನ್ಯವಾಗಿ ಮಕ್ಕಳ ಓದಿನ ಬಗ್ಗೆ ಮಾತ್ರ ಒತ್ತಡ ಹಾಕುತ್ತೇವೆ. ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ, ಸೃಜನಶೀಲತೆಯನ್ನು ಸಹ ಪಠ್ಯ ಚಟುವಟಿಕೆಗಳಾ ಸಂಗೀತ, ಸಾಹಿತ್ಯ, ಕ್ರೀಡೆ, ನೃತ್ಯ ಸೇರಿದಂತೆ ಇತರೆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.ಬೆಂಗಳೂರು ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಕೇಂದ್ರ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಡಾ.ಎನ್. ಶೇಕ್ ಮಸ್ತಾನ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ತನ್ನದೇ ಆದ ಪ್ರತಿಭೆಯು ಅಡಗಿದ್ದು, ಆ ಪ್ರತಿಭೆಯನ್ನು ಹೊರಹಾಕಲು ಸೂಕ್ತವಾದ ಸಮಯ ಮತ್ತು ವೇದಿಕೆ ಸಹಕಾರಿಯಾಗುತ್ತದೆ, ಅಂತಹ ವೇದಿಕೆಯಲ್ಲಿ ಪ್ರತಿಯೊಂದು ಮಗು ಭಾಗವಹಿಸಿ ತನ್ನ ಪ್ರತಿಭೆಯನ್ನು ತೋರಿಸಬೇಕು, ಮಕ್ಕಳಲ್ಲಿನ ಪ್ರತಿಭೆಯನ್ನು ಪಾಲಕರು ಹಾಗೂ ಶಿಕ್ಷಕರು ಗುರುರ್ತಿಸಿ ಪ್ರೋತ್ಸಾಹ ನೀಡಬೇಕು, ವಿದ್ಯಾರ್ಥಿಗಳಿಗೆ ಪಠ್ಯದ ಜೋತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಶಾಲೆಗಳಲ್ಲಿ ಶಿಕ್ಷಕರು ಮನೆಯಲ್ಲಿ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿ ಮತ್ತು ನೃತ್ಯಗಳ ನಡೆದು ಮೆಚ್ಚುಗೆಗೆ ಪಾತ್ರವಾದವು, ವೇದಿಕೆಯಲ್ಲಿ ಪಟ್ಟಣ ಪಂವಾಯಿತಿ ಮಾಜಿ ಅಧ್ಯಕ್ಷೆ ಬರ್ಜಿಸ್ ಮಕ್ತಿಯಾರ್ ಅಹಮದ್, ಪ.ಪಂ.ಸದಸ್ಯ ಕೆ.ಎನ್. ಲಕ್ಷ್ಮಿನಾರಾಯಣ್, ಭಾಗ್ಯ ಗಣೇಶ್, ಗಣೇಶ್, ಕಾರ್ಯನಿತರ ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ. ಪುರುಷೊತ್ತಮ್, ಜಾಮೀಯಾ ಮಸೀದಿ ಅಧ್ಯಕ್ಷ ಹಿದಾಯತ್ ಉಲ್ಲಾ, ಕಾಂಗ್ರೆಸ್ ಮುಖಂಡ ಮಕ್ತಿಯಾರ್ ಅಹಮದ್, ವಜೀರ್ ಸಾಬ್, ತೆರೇಸಾ ಸ್ಕೂಲ್‌ನ ಆಡಳಿತ ಮಂಡಲಿ ಕಾರ್ಯದರ್ಶಿ ಹಾಗೂ ಮುಖ್ಯಶಿಕ್ಷಕಿ ಅಸ್ಕಾ ಬಿ, ಖಜಾಂಚಿ ಎಂ. ಮುಜಾಹಿದ್ ಸನಾಜ್ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಹಾಜರಿದ್ದರು.