ಸಾರಾಂಶ
ಮುಧೋಳದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಿದ್ದ ಒಂದು ತಿಂಗಳವರೆಗೆ ಇಂಗ್ಲಿಷ್ ವ್ಯಾಕರಣ ಅಧ್ಯಯನ ಕಾರ್ಯಕ್ರಮದಲ್ಲಿ ಆಂಗ್ಲ ಭಾಷಾ ಉಪನ್ಯಾಸಕ ಎಲ್.ಎಂ.ಅಂಟಿನ ಮಾತನಾಡಿ, ಜಾಗತಿಕ ವಿದ್ಯಾಮಾನದಲ್ಲಿ ಇಂಗ್ಲಿಷ್ ಭಾಷೆ ಬಹಳಷ್ಟು ಮಹತ್ವದ ಪಾತ್ರವಹಿಸುತ್ತಿದೆ. ಇಂದು ಇಂಗ್ಲಿಷ್ ಅಂತರಾಷ್ಟ್ರೀಯ ಸಂವಹನ ಮಾಧ್ಯಮವಾಗಿದೆ ಎಂದರು.
ಕನ್ನಡ ಪ್ರಭ ವಾರ್ತೆ ಮುಧೋಳ
ಜಾಗತಿಕ ವಿದ್ಯಾಮಾನದಲ್ಲಿ ಇಂಗ್ಲಿಷ್ ಭಾಷೆ ಬಹಳಷ್ಟು ಮಹತ್ವದ ಪಾತ್ರವಹಿಸುತ್ತಿದೆ. ಇಂದು ಇಂಗ್ಲಿಷ್ ಅಂತರಾಷ್ಟ್ರೀಯ ಸಂವಹನ ಮಾಧ್ಯಮವಾಗಿದೆ. ಆದ್ದರಿಂದ ಇಂಗ್ಲಿಷ್ ಕಲಿಕೆ ಬಹಳ ಅವಶ್ಯಕವಾಗಿದೆ ಎಂದು ಯಡಹಳ್ಳಿ ಗ್ರಾಮದ ಎಸ್.ಬಿ.ಹೊರಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಎಲ್.ಎಂ.ಅಂಟಿನ ಹೇಳಿದರು.ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಿದ್ದ ಒಂದು ತಿಂಗಳವರೆಗೆ ಇಂಗ್ಲಿಷ್ ವ್ಯಾಕರಣ ಅಧ್ಯಯನ ಕಾರ್ಯಕ್ರಮ ಉಧ್ಘಾಟಿಸಿ ಮಾತಮಾಡಿದ ಅವರು, ವ್ಯಾಕರಣಾತ್ಮವಾಗಿ ಇಂಗ್ಲಿಷ್ ಬಳಷ್ಗೆ ಕಲಿಕಾ ಜ್ಞಾನವಿರುವುದು ಅತ್ಯಾವಶ್ಯಕ. ಹೀಗಾಗಿ ತಾವುಗಳು ಇಂತಹ ಕಾರ್ಯ ಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಂಗ್ಲಭಾಷೆಯು ಪ್ರಸ್ತುತ ದಿನಗಳಲ್ಲಿ ವ್ಯವಹಾರಿಕ, ವಾಣಿಜ್ಯ, ವೈಜ್ಞಾನಿಕ, ಸಂಶೋಧನಾತ್ಮಕ ಹಾಗೂ ಅಂತಾರಾಷ್ಟ್ರೀಯ ಭಾಷೆಯಾಗಿ ಹೊರಹೊಮ್ಮಿದೆ. ಹೀಗಾಗಿ ಇಂಗ್ಲಿಷ್ ವಿಷಯದ ವ್ಯಾಕರಣಬದ್ದ ಕಲಿಕೆ ಅತ್ಯವಶ್ಯಕವಾಗಿದೆ ಎಂದು ಕಿವಿಮಾತು ಹೇಳಿದರು.ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಅಶ್ವಿನಿ ಸಿ. ಕೆರೂರ ಸ್ವಾಗತಿಸಿದರು, ಪ್ರೊ.ಎಂ.ಎಸ್.ಗಡ್ಡಿ ವಂದಿಸಿದರು, ವಿದ್ಯಾರ್ಥಿನಿ ದೀಪಾ ಹುದ್ದಾರ ನಿರೂಪಿಸಿದರು, ಕಾಲೇಜಿನ ಎಲ್ಲ ಬೋಧಕ - ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.