ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಿ: ಡಾ.ಟಿ.ಎನ್. ಪ್ರಕಾಶ್‌ ಕಮ್ಮರಡಿ

| Published : Mar 23 2024, 01:12 AM IST

ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಿ: ಡಾ.ಟಿ.ಎನ್. ಪ್ರಕಾಶ್‌ ಕಮ್ಮರಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು ಅದು ರೈತರಿಗೆ ಲಾಭದಾಯಕವಾಗುತ್ತಿ ದ್ದು, ಇದನ್ನು ಕಾನೂನಿನ ಚೌಕಟ್ಟಿನೊಳಗೆ ತರಬೇಕು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್‌ಕಮ್ಮರಡಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು ಅದು ರೈತರಿಗೆ ಲಾಭದಾಯಕವಾಗುತ್ತಿ ದ್ದು, ಇದನ್ನು ಕಾನೂನಿನ ಚೌಕಟ್ಟಿನೊಳಗೆ ತರಬೇಕು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್‌ಕಮ್ಮರಡಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಬೆಳೆಗೆ ಲಾಭದಾಯಕ ಕಾನೂನಿನ ಖಾತ್ರಿಯ ಬೆಂಬಲ ಬೆಲೆ ನೀಡುವಂತೆ ರೈತರ ಹೊಸ ಹಕ್ಕೊತ್ತಾಯ ಇಂದು ದೇಶದಾದ್ಯಂತ ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇದನ್ನು ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ಬಿಜೆಪಿ ಬೆಳೆ ವೈವಿಧ್ಯಗೊ ಳಿಸುವುದಾದರೆ ಹಾಗೂ ನೋಂದಾಯಿಸಿದ ರೈತರಿಂದ ಬೆಂಬಲ ಬೆಲೆಯಲ್ಲೇ ದ್ವಿದಳ ಧಾನ್ಯ ಜೋಳ, ಹತ್ತಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಭಾವನಾತ್ಮಕ ವಿಚಾರಗಳು, ವಿಭಜಕ ನಿರೂಪ ಣೆಗಳಿಂದ ರೈತರು ಹಿಂದೆ ಸರಿದು ಗಂಭೀರ ಸಮಸ್ಯೆಗಳು ಮುನ್ನೆಲೆಗೆ ತರುವ ಬಗ್ಗೆ ಚಿಂತಿಸಬೇಕಿದೆ ಎಂದರು.

ಕರ್ನಾಟಕ ಕೃಷಿ ಬೆಲೆ ಆಯೋಗ ಬೆಂಬಲ ಬೆಲೆ ಖಾತರಿಸುವ ನಿಟ್ಟಿನಲ್ಲಿ ವಿವರ ಅಧ್ಯಯನ ನಡೆಸಿ 2018ರ ವಿಸ್ತ್ರತವಾದ ವರದಿ ಸರ್ಕಾರಕ್ಕೆ ಸಲ್ಲಿಸಿದೆ. ಇದರ ಅನುಷ್ಠಾನಕ್ಕೆ ತಗಲುವ ಹೊರೆ ಅಧಿಕವೇನು ಆಗಲಾರದೆಂದು ಲೆಕ್ಕಾಚಾರ ಹಾಕಿದ್ದು, ಸರ್ಕಾರ ಸಕಾಲದಲ್ಲಿ ಮಧ್ಯಪ್ರವೇಶಿಸಿ ಕ್ರಮ ಕೈಗೊಂಡಲ್ಲಿ ರೈತರಿಗೆ ಬೆಂಬಲ ಬೆಲೆ ಸಿಗುವಂತೆ ಮಾಡುವುದು ಕಷ್ಟ ಸಾಧ್ಯ ವಲ್ಲ ಎಂದು ಸ್ಪಷ್ಟಪಡಿಸಿರುತ್ತದೆ. ಹಾಗೆಯೇ ಖರೀದಿಸುವುದನ್ನು ಸದುಪಯೋಗಪಡಿಸಿಕೊಳ್ಳುವ ದಾರಿಯನ್ನು ಸೂಚಿಸಲಾಗಿ ರುತ್ತದೆ ಎಂದು ತಿಳಿಸಿದರು.

ಬೆಂಬಲ ಬೆಲೆ ನೀಡುವುದು ಸರ್ಕಾರಗಳ ನೈತಿಕ ಹೊಣೆಯಾಗಿದ್ದು, ಕೃಷಿ ಉತ್ಪನ್ನಗಳ ನೀತಿಯನ್ನು ಗಂಭೀರವಾಗಿ ಪರಿಗಣಿ ಸಬೇಕಾಗಿದೆ. ಸರ್ಕಾರಿ ಬೆಲೆ ಘೋಷಿಸುವ ಅಧಿಕಾರ ರೈತನಿಗೆ ಇರುವುದಿಲ್ಲ. ರೈತನಿಂದ ಖರೀದಿಯಾದ ಆಹಾರ ಉತ್ಪನ್ನ ಆಹಾರ ಭದ್ರತೆ ಕಾಯ್ದೆಯಡಿ ಅಂಗನವಾಡಿ ಶಾಲೆ ಮೂಲಕ ಹಂಚಿಕೆ ಮಾಡಲಾಗುತ್ತಿದ್ದು, ರೈತರು ಬೆಳೆಯುವ ಬೆಳೆಗೆ ವಿಮೆ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಪ್ರಧಾನಿ ಮೋದಿ ಆಡಳಿತ ರೈತ ಸಮು ದಾಯವನ್ನು ನಿರ್ಲಕ್ಷ್ಯ ಮಾಡಿದ್ದು, ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೊರೇಟ್ ವಲಯಗಳನ್ನಾಗಿ ಮಾಡುತ್ತಿದೆ. ಇದರ ವಿರುದ್ಧವಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಸುಮಾರು 400ಕ್ಕೂ ಹೆಚ್ಚು ರೈತ ಸಂಘಗಳು ಕೃಷಿ ವಿರೋಧಿ ಜನವಿರೋಧಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಿದ್ದನ್ನುಇಡೀ ದೇಶ ನೋಡಿದೆ. ಆದರೂ ಸರ್ಕಾರ ರೈತರ ಸಮಸ್ಯೆ ಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದರು.

ಪ್ರಗತಿಪರ ಚಿಂತಕ ಹಾಗೂ ಗಾಂಧಿ ಸಹಜ ಬೇಸಾಯ ಶಾಲೆಯ ಮುಖ್ಯಸ್ಥ ಯತಿರಾಜ್‌ ಮಾತನಾಡಿ, ದೆಹಲಿ ಹೋರಾಟದ ಬಗ್ಗೆ ಅನೇಕ ವರದಿಗಳು ಬಂದಿವೆ. ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಖಾತ್ರಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಸರ್ಕಾರ ಕಾನೂನಿನ ಚೌಕಟ್ಟಿನ ಒಳಗೆ ಗುರುತಿಸಬೇಕು. ಪ್ರಸ್ತುತ ಚುನಾವಣೆಯಲ್ಲಿ ಪಕ್ಷಗಳು ತಮ್ಮ ಪ್ರಣಾಳಿಕೆ ಮತ್ತು ನಿಲುವುಗಳು ರೈತರ ಪರವಾಗಿರುವಂತೆ ಗಮನ ಹರಿಸಬೇಕು ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ರವೀಶ್‌, ರೈತ ಕಾರ್ಮಿಕ ಸಂಘದ ಎನ್‌ ಎಸ್ ಸ್ವಾಮಿ ಸೇರಿ ಇತರರು ಉಪಸ್ಥಿತರಿದ್ದರು.