ಸಾರಾಂಶ
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಎಲ್ಲರೂ ಹೆಚ್ಚು ಹೆಚ್ಚು ಗಿಡ ಬೆಳೆಸಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕೆಂದು ಬಾಗಲಕೋಟೆ ಎಎಸ್‌ಪಿ ಪ್ರಸನ್ನ ದೇಸಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಎಲ್ಲರೂ ಹೆಚ್ಚು ಹೆಚ್ಚು ಗಿಡ ಬೆಳೆಸಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕೆಂದು ಬಾಗಲಕೋಟೆ ಎಎಸ್‌ಪಿ ಪ್ರಸನ್ನ ದೇಸಾಯಿ ಹೇಳಿದರು.ಬಾಗಲಕೋಟೆ ಗ್ರಾಮೀಣ ಠಾಣೆ ಹಾಗೂ ನಗರ ಠಾಣೆ ವ್ಯಾಪ್ತಿಯ ಜಾಗಯಲ್ಲಿ ಗಿರೀಶ ಫೌಂಡೇಶನ್ ಹಾಗೂ ಅರಣ್ಯ ಇಲಾಖೆ ಸಹಯೋಗದ ವೃಕ್ಷೋತ್ಥಾನ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.
ಗಿರೀಶ ಫೌಂಡೇಶನ್ ಹಾಗೂ ಬಾಗಲಕೋಟೆ ಅರಣ್ಯ ಇಲಾಖೆ ಸಹಯೋಗದಲ್ಲಿ 360 ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು.ಬಾಗಲಕೋಟೆ ಡಿವೈಎಸ್ ಪಿ ಪಂಪನಗೌಡ, ಗ್ರಾಮೀಣ ಠಾಣೆ ಸಿಪಿಐ ಎಚ್.ಆರ್.ಪಾಟೀಲ್, ನಗರಠಾಣೆ ಸಿಪಿಐ ಗುರುನಾಥ ಚವ್ಹಾಣ, ಗಿರೀಶ ಫೌಂಡೇಶನ್ ಅಧ್ಯಕ್ಷ ಗಿರೀಶ ಭಾಂಡಗೆ ಉಪಸ್ಥಿತರಿದ್ದರು.