ಪ್ರತಿಯೊಬ್ಬರೂ ರಕ್ತದಾನದ ಮೂಲಕ ಜೀವದಾನ ಮಾಡಿ: ಚನ್ನಬಸವಣ್ಣEveryone should donate life by donating blood: Channabasavanna

| Published : Oct 09 2025, 02:00 AM IST

ಪ್ರತಿಯೊಬ್ಬರೂ ರಕ್ತದಾನದ ಮೂಲಕ ಜೀವದಾನ ಮಾಡಿ: ಚನ್ನಬಸವಣ್ಣEveryone should donate life by donating blood: Channabasavanna
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ತಾರತಮ್ಯವಿಲ್ಲದೆ ನೀಡಬಹುದಾದ ಶ್ರೇಷ್ಠದಾನವೇ ರಕ್ತದಾನ ಇದರಿಂದ ಅಮೂಲ್ಯ ಜೀವವನ್ನು ಉಳಿಸಬಹುದು.

ಕನ್ನಡಪ್ರಭ ವಾರ್ತೆ ಮೈಸೂರುನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಗಾಂಧಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.ಬುನಾದಿ ತರಬೇತಿ ಪಡೆಯುತ್ತಿರುವ 46ನೇ ತಂಡದ ಪಿ.ಎಸ್.ಐ ಪ್ರಶಿಕ್ಷಣಾರ್ಥಿಗಳ ಪ್ರೈಡ್ ಇನ್ ಸರ್ವೀಸ್ ಕ್ಲಬ್ ತಂಡದ ಸದಸ್ಯರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಎಂ.ಎಂ.ಸಿ.ಆರ್.ಐ (ಎಂಎಂಸಿಆರ್‌ಐ) ಸಹಯೋಗದಲ್ಲಿ ಕೆ.ಪಿ.ಎ ಮಹಾ ರಕ್ತದಾನ ಶಿಬಿರ-2025 ನ್ನು ಆಯೋಜಿಸಿತ್ತು.ರಕ್ತದಾನ ಶಿಬಿರವನ್ನು ಕೆ.ಪಿ.ಎ. ನಿರ್ದೇಶಕ ಎಸ್.ಎಲ್‌. ಚನ್ನಬಸವಣ್ಣ ಉದ್ಘಾಟಿಸಿ ಮಾತನಾಡಿ, ರಕ್ತದಾನದ ಮೂಲಕ ನಾವು ಅಪಘಾತದಲ್ಲಿ ಗಾಯಗೊಂಡವರಿಗೆ ಹಾಗ ವಿವಿಧ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿವವರಿಗೆ ಜೀವದಾನ ಮಾಡಿದಂತಾಗುತ್ತದೆ. ಇದು ಮಾನವೀಯತೆಯನ್ನು ಎತ್ತಿಹಿಡಿಯುವ ಪೊಲೀಸ್ ಕರ್ತವ್ಯದ ಭಾಗವಾಗಿ ಪ್ರಶಿಕ್ಷಣಾರ್ಥಿಗಳ ಪ್ರೈಡ್ ಇನ್ ಸರ್ವೀಸ್ ಕ್ಲಬ್ ನವರು ಹಮ್ಮಿಕೊಂಡಿರುವುದು ಬಹಳ ಅರ್ಥಪೂರ್ಣ ವಿಚಾರವಾಗಿದೆ ಎಂದು ತಿಳಿಸಿದರು.ರೆಡ್‌ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ವೈದ್ಯನಾಥ ಮಾತನಾಡಿ, ಯಾವುದೇ ತಾರತಮ್ಯವಿಲ್ಲದೆ ನೀಡಬಹುದಾದ ಶ್ರೇಷ್ಠದಾನವೇ ರಕ್ತದಾನ ಇದರಿಂದ ಅಮೂಲ್ಯ ಜೀವವನ್ನು ಉಳಿಸಬಹುದು ಎಂದು ತಿಳಿಸಿದರು.ಕೆಪಿಎ ಸಹಾಯಕ ನಿರ್ದೇಶಕ ಎಸ್.ಎನ್. ಸಂದೇಶ ಕುಮಾರ್, ಎಚ್‌.ಎಸ್. ರೇಣುಕಾರಾಧ್ಯ, ಎಸ್. ವೆಂಕಟೇಶ್, ಎಂ.ಎಚ್. ಖಾನ್, ಎನ್. ಸುದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಕ್ತದಾನ ಮಾಡಿದರು.ಒಟ್ಟು 130 ಯೂನಿಟ್ಸ್ (ಸುಮಾರು 45 ಲೀಟರ್) ರಕ್ತವನ್ನು ಶಿಬಿರದಲ್ಲಿ ಸಂಗ್ರಹಿಸಲಾಗಿದೆ. ಶಿಬಿರವನ್ನು ತುಂಬಾ ಅಚ್ಚುಕಟ್ಟಾಗಿ ಕೆ.ಪಿ.ಎ ವೈದ್ಯ ಡಾ. ಕರುಣಾಕರ ಹಾಗೂ ರಕ್ತನಿಧಿ ಬ್ಯಾಂಕ್ ಕೆ.ಆರ್. ಆಸ್ಪತ್ರೆ ವೈದ್ಯರಾದ ಡಾ. ಕುಸುಮಾ. ಪ್ರೊಬೇಷನರಿ ಪಿಎಸ್‌ಐಗಳು ಆಯೋಜಿಸಿದ್ದರು.