ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು-ಶಾಸಕ ಸಿ.ಸಿ. ಪಾಟೀಲ

| Published : Jan 27 2024, 01:15 AM IST

ಸಾರಾಂಶ

ಭಾರತ ದೇಶವು ಜಗತ್ತಿನಲ್ಲಿ ಸದ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ನಾಗರಿಕರು ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನರಗುಂದ: ಭಾರತ ದೇಶವು ಜಗತ್ತಿನಲ್ಲಿ ಸದ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ನಾಗರಿಕರು ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು. ಅವರು ಶುಕ್ರವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 75ನೇ ಪ್ರಜಾರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇಶ ಸಂವಿಧಾನದ ಕಾನೂನು ರಚನೆ ಮಾಡಿದ ಡಾ. ಬಿ.ಆರ್.ಅಬೇಡ್ಕರ್ ಅವರನ್ನು ನಾವು ನೀವು ಅವರನ್ನು ಇಂದು ಸ್ಮರಿಸಬೇಕು, ಈ ಪ್ರಜಾಪ್ರಭುತ್ವ ದೇಶದಲ್ಲಿ ಸರ್ವ ಜನಾಂಗಕ್ಕೆ ಸಮಾನತೆ ಕಾನೂನು ರಚಿಸಿದ್ದಾರೆ ಎಂದರು. ಈ ಮೊದಲು ಈ ದೇಶದ 5ನೇ ಬಡ ರಾಷ್ಟ್ರವಾಗಿತ್ತು. ಆದರೆ ನರೇಂದ್ರ ಮೋದಿವರು ಪ್ರಧಾನಿಗಳಾದ ನಂತರ ಇಂದು ಇಡೀ ಜಗತ್ತಿನಲ್ಲಿ ಭಾರತವು ಅಭಿವೃದ್ಧಿಯಲ್ಲಿ 5ನೇ ಸ್ಥಾನ ಹೊಂದಿರುವುದು ನಮಗೆ ಬಹಳ ಹೆಮ್ಮೆಯಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಬಡವರು ಅಭಿವೃದ್ಧಿಯಾಗಬೇಕೆಂದು ಬ್ಯಾಂಕ್‌ಗಳಲ್ಲಿ ಜೀರೋ ಖಾತೆ ತೆರೆಯಲು ಅನುಕೂಲ ಕಲ್ಪಿಸಿದರೆ, ಉಜ್ಜಲ ಯೋಜನೆಯಲ್ಲಿ ಉಚಿತ ಗ್ಯಾಸ್, ಶುದ್ಧ ಕುಡಿಯುವ ನೀರು, ಮುದ್ರಾ, ಆಯುಷ್ಯಮಾನ ಯೋಜನೆ ಸೇರಿದಂತೆ ವಿವಿಧ ಯೋಜನೆ ಜಾರಿಗೆ ತಂದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದರು. ಅಕ್ರಮ ಮರಳು ದಂಧೆ ತಡೆಯಿರಿ

ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಆದ್ದರಿಂದ ತಾಲೂಕಿನ ಅಧಿಕಾರಿಗಳು ಇದನ್ನು ತಡೆದು ನಮ್ಮ ಸಂಪತ್ತು ಕಾಪಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಜಗತ್ತಿನಲ್ಲಿ ಭಾರತ ದೇಶ ಸದ್ಯ ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಆದ್ದರಿಂದ ನಾವು ಮುಂದಿನ 2047ಕ್ಕೆ ಅಭಿವೃದ್ಧಿಯಲ್ಲಿ ದೊಡ್ಡಣ್ಣವಾಗಬೇಕೆಂದರೆ ಈ ದೇಶದ ಯುವಕರು, ಜನರು ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.

ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಭಾರತದ ಸಂವಿಧಾನದಲ್ಲಿ ಸರ್ವ ಧರ್ಮದವರಿಗೆ ಸಮಾನತೆಯಿಂದ ಜೀವನ ಮಾಡಲು ನಮ್ಮ ಸಂವಿಧಾನದಲ್ಲಿ ಕಾನೂನು ರಚನೆ ಮಾಡಿದ್ದಾರೆ. ಆದ್ದರಿಂದ ನಾವು ಸಮಾಜದಲ್ಲಿ ಜಾತಿ ಭೇದ ಎನ್ನದೆ ಸಮಾನತೆ ಜೀವನ ಮಾಡೋಣವೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪಟ್ಟಣದ ವಿವಿಧ ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿವಾನಂದ ಮುತ್ತವಾಡ, ಅಜ್ಜಪ್ಪ ಹುಡೇದ, ಬಿ.ಬಿ.ಐನಾಪೂರ, ಚಂದ್ರಶೇಖರ ದಂಡಿನ, ಮಲ್ಲಪ್ಪ ಮೇಟಿ, ಫಕೀರಪ್ಪ ಹಾದಿಮನಿ, ಪವಾಡಪ್ಪ ಅಬ್ಬಗೇರಿ, ಚಂದ್ರಗೌಡ ಪಾಟೀಲ, ಮಂಜು ಮೆಣಸಗಿ, ಸಿದ್ದು ಹೂಗಾರ, ಮಾರುತಿ ಅರ್ಬನ, ಪುರಸಭೆ ಅಧಿಕಾರಿ ಅಮೀತಾ ತಾರದಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುನಾಥ ಹೂಗಾರ, ತಾಪಂ ಅಧಿಕಾರಿ ಎಸ್.ಕೆ.ಇನಮದಾರ, ಡಾ. ವೆಂಕತೇಶ ಸಣ್ಣಬಿದರಿ, ಬಡಿಗೇರ, ರಾಘವೇಂದ್ರ ಸಜ್ಜನರ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.