ಸಾರಾಂಶ
ರೋಣ: ಗಿಡ, ಮರಗಳನ್ನು ಹೇರಳವಾಗಿ ಬೆಳೆಸುವುದರೊಂದಿಗೆ ಎಲ್ಲಡೆ ಹಸಿರುಕರಣಗೊಳಿಸುವಲ್ಲಿ ಎಲ್ಲರೂ ಶಪಥ ಮಾಡಬೇಕು. ಹಸಿರಾದರೇ ಮಾತ್ರ ಉಸಿರು ಇರುವದು, ಜೀವ ಸಂಕುಲ ಉಳಿಯುವದು ಎಂದು ತಹಸೀಲ್ದಾರ್ ನಾಗರಾಜ ಕೆ. ಹೇಳಿದರು. ಅವರು ಶುಕ್ರವಾರ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ಪುರಸಭೆ, ತಾಪಂ, ವಿವಿಧ ಇಲಾಖೆ ಸಂಯುಕ್ತಾಶ್ರಯದಲ್ಲಿ ಜರುಗಿದ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಕ್ಕಳ ಭವಿಷ್ಯಕ್ಕಾಗಿ ನಾವಿಂದು ಪರಿಸರವನ್ನು ಕಾಪಾಡಬೇಕಿದೆ. ಮನೆ, ರಸ್ತೆ ಬದಿ ಗಿಡ, ಜಮೀನು ಬದುವಿನಲ್ಲಿನಗಿಡ, ಮರಗಳನ್ನು ನೆಟ್ಟು ಬೆಳೆಸಬೇಕು. ಇದರಿಂದ ಸಕಾಲಕ್ಕೆ ಮಳೆಯಾಗುವದರ ಜೊತೆಗೆ, ಶುದ್ಧ ವಾತಾವರಣ ಸೃಷ್ಟಿಯಾಗುವುದು. ಆದ್ದರಿಂದ ಗಣರಾಜ್ಯೋತ್ಸವ ಸಾಕ್ಷಿಗಾಗಿ ನಾವೆಲ್ಲರೂ ಇಂದಿನಿಂದ ಪರಿಸರ ರಕ್ಷಣೆ ಜವಾಬ್ದಾರಿ ಹೊಂದಬೇಕು. ಜೊತೆಗೆ ಬಯಲು ಶೌಚ ಮುಕ್ತ ಗ್ರಾಮ, ಪಟ್ಟಣಗಳನ್ನಾಗಿಸುವಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಿ, ಅದರ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕು. ಅಂದಾಗ ಪರಿಸರ ಸೌಂದರ್ಯ ವೃದ್ಧಿಯಾಗುವುದು. ಭಾರತದ ಸಂವಿಧಾನದಡಿ ನಮಗೆ ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ. ಆದರೆ ಸಮಾಜದ ಒಳಿತಿಗಾಗಿ ಸದಾ ಕರ್ತವ್ಯನಿಷ್ಠರಾಗಬೇಕು. ಸಮಗ್ರ ಹಸಿರುಕರಣಕ್ಕೆ ಹಾಗೂ ಬಯಲು ಶೌಚ ಮುಕ್ತ ಗ್ರಾಮ, ತಾಲೂಕನ್ನಾಗಿಸುವಲ್ಲಿ ಸರ್ಕಾರದ ಜೊತೆಗೆ ಎಲ್ಲರು ಕೈಜೋಡಿಸಬೇಕು ಎಂದು ಕರೆ ನೀಡಿದರು.ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಮಾತನಾಡಿ, ಸಮಾನತೆ, ಶಿಕ್ಷಣ ಹಕ್ಕನ್ನು ಸಂವಿಧಾನ ನಮಗೆ ಕೊಟ್ಟಿದೆ.ಸಂವಿಧಾನದ ಆಶೋತ್ತರಗಳನ್ನು ಎತ್ತಿ ಹಿಡಿಯಬೇಕು. ದೇಶದ ಸುಭದ್ರತೆಗೆ ಪ್ರತಿಯೊಬ್ಬರ ಜವಾಬ್ದಾರಿ ಅತೀ ಮುಖ್ಯವಾಗಿದ್ದು, ಭವ್ಯ ರಾಷ್ಟ್ರ ನಿರ್ಮಾಣ ನಮ್ಮ ಧ್ಯೇಯವಾಗಬೇಕು ಎಂದರು. ಸಾರ್ವಜನಿಕರಿಗೆ ಸರ್ಕಾರಿ ಯೋಜನೆ ತಲುಪಿಸುವಲ್ಲಿ ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಾದ ಆರ್.ಎಫ್.ಬೋದ್ಲೇಖಾನ, ಎ.ವ್ಹಿ. ಹಾದಿಮನಿ, ಪಿ.ಡಿ. ಪಾಟೀಲ, ಅಶೋಕ ನಸಬಿ, ಬಸವರಾಜ ಅಂಗಡಿ, ಮಹಾದೇವಪ್ಪ ಎಚ್., ಚಂದ್ರಕಲಾ, ಅಲ್ಲಿಸಾಬ ನದಾಫ, ಶಿವಪುತ್ರ ಕುಮಸಗಿ , ಕೆ.ಎ. ಹಾದಿಮನಿ, ನಾಗರಾಜ ಅಥಣಿ, ಎಚ್.ಎಚ್. ಕರಡ್ಡಿ, ನೇತ್ರಾವತಿ ಪಟ್ಟೇದ, ಸಂತೋಷ ಸುಭಾಸ, ಕುಮಾರ ತಿಗರಿ, ಸೋಮಶೇಖರ ಸುರಕೋಡ, ಎಂ.ಡಿ. ಚಕಾರಿ ಆಫ್ರೀನಾ ಮುಲ್ಲಾ, ಮಂಜುಳಾ ಗೊನಾರಿ, ಎಸ್.ಆರ್. ಕರಿಗೌಡ್ರ, ಶಂಕರಗೌಡ ಪಾಟೀಲ, ಬಿ.ಆರ್. ಕುಂಬಾರ, ಚಂದ್ರಶೇಖರ ಪಾಗದ, ಯಲ್ಲಪ್ಪ ಚಲವಾದಿ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.ಮಾಜಿ ಸೈನಿಕ ರುದ್ರಯ್ಯ ಹಿರೇಮಠ, ಅಂದಾನಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗಿದವು. ತಾಪಂ ಇಒ ರವಿ.ಎ.ಎನ್, ಲೋಕೋಪಯೋಗಿ ಎಇಇ ಬಲವಂತ ನಾಯಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ವೀರಣ್ಣ ಶೆಟ್ಟರ, ರವೀಂದ್ರಗೌಡ ಪಾಟೀಲ, ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ, ಜಿಪಂ ಎಇಇ ಜಗದೀಶ ಮಡಿವಾಳರ, ಯೂಶೂಪ ಇಟಗಿ, ಪುರಸಭೆ ಮುಖ್ಯಾಧಿಕಾರಿ ರಮೇಶ ಗೊಂದಕರ, ಪುರಸಭೆ ಸದಸ್ಯ ಸಂಗಪ್ಪ ಜಿಡ್ಡಿಬಾಗೀಲ, ಕೆ.ಎ. ಹಾದಿಮನಿ, ದುರ್ಗಪ್ಪ ಹಿರೇಮನಿ, ಎಂ.ಎ. ಫಣಿಬಂಧ, ಬಾವಾಸಾಬ ಬೇಟಗೇರಿ, ನಾಗಪ್ಪ ದೇಶಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಬಿಇಒ ರುದ್ರಪ್ಪ ಹುರಳಿ ಸ್ವಾಗತಿಸಿದರು. ಅಕ್ಷರ ದಾಸೋಹ ಸಹಾಯಕ ತಾಲೂಕು ನಿರ್ದೇಶಕ ಬಸವರಾಜ ಅಂಗಡಿ ನಿರೂಪಿಸಿ, ವಂದಿಸಿದರು.