ಸಾರಾಂಶ
ರೈತಾಪಿ ವರ್ಗದವರು ಪಟ್ಟಣ, ನಗರಗಳ ಸಂಪರ್ಕಿಸಿ ವ್ಯಾಪಾರ ವಹಿವಾಟು ಮಾಡಲು ಸಹಾಯಕವಾಗಿರುವುದರಿಂದ ರಸ್ತೆಗಳ ಅಭಿವೃದ್ಧಿಯಿಂದ ನಮ್ಮ ರೈತರ ಪ್ರಗತಿಯೂ ಸಾಧ್ಯ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ರೈತಾಪಿ ವರ್ಗದವರು ಪಟ್ಟಣ, ನಗರಗಳ ಸಂಪರ್ಕಿಸಿ ವ್ಯಾಪಾರ ವಹಿವಾಟು ಮಾಡಲು ಸಹಾಯಕವಾಗಿರುವುದರಿಂದ ರಸ್ತೆಗಳ ಅಭಿವೃದ್ಧಿಯಿಂದ ನಮ್ಮ ರೈತರ ಪ್ರಗತಿಯೂ ಸಾಧ್ಯ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು. ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರಿನಿಂದ-ಚಿಕ್ಕಂದವಾಡಿ ಮಾರ್ಗದಲ್ಲಿ 10.86 ಕೋಟಿ ರು. ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ಕೆಲಸಗಳ ಮಾಡಿ ಜನರ ಮನ ಗೆಲ್ಲಬೇಕು. ಸುಸಜ್ಜಿತ ರಸ್ತೆಗಳಿಂದ ನಗರ ಪಟ್ಟಣಗಳಿಗೆ ಸಂಪರ್ಕ ಸರಾಗವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ರೈತರು ನಗರಗಳಿಗೆ ಹೋಗಿ ದವಸ, ಧಾನ್ಯ ಮಾರಾಟ ಮಾಡಲು ಸಹಾಯಕವಾಗುವುದು ಎಂದರು. ನಾನು ಯಾವುದೇ ಹಳ್ಳಿಗೆ ಹೋದರು ಮೊದಲು ನೋಡುವುದೇ ರಸ್ತೆಗಳ ಗುಣಮಟ್ಟ. ಗುಂಡಿ ಬಿದ್ದ ರಸ್ತೆ ಕಂಡರೆ ತಕ್ಷಣವೇ ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸುತ್ತೇನೆ ಎಂದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಸಿ ಮೋಹನ್ ಹಾಗೂ ಕುಮಾರ ಆರಾಧ್ಯ ಮಾತನಾಡಿದರು. ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜಲಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಶಿಕಲಾ ನಾಗರಾಜ್ , ಮುಖಂಡರಾದ ಪಿ.ಎಸ್ ಮೂರ್ತಿ, ಸದಸ್ಯರಾದ ನಾಗರತ್ನ ಪುಟ್ಟಸ್ವಾಮಿ, ಪುಷ್ಪ, ರಘು, ಲಕ್ಷ್ಮಿ, ರುದ್ರೇಶ್, ಶ್ರೀಕಾಂತ್, ಗಂಗಾಧರ್, ರಾಜು , ಎಇಇ ಕಾಂತರಾಜ್, ಮಾಜಿ ಅಧ್ಯಕ್ಷ ಆನಂದಪ್ಪ, ಚಿಕ್ಕಂದವಾಡಿ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು . ಚಿಕ್ಕಜಾಜೂರು ಗ್ರಾ.ಪಂ. ಸದಸ್ಯರು ಗ್ರಾಮಸ್ಥರು ಇದ್ದರು. ಈಶ್ವರ್ ಗ್ರೂಪ್‌ನಿಂಂದ ಶಾಸಕರರನ್ನು ಸನ್ಮಾನಿಸಲಾಯಿತು .