ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮೀಣ ರೈತಾಪಿ ಜನರು ಹಾಗೂ ಮಹಿಳೆಯರು ಸಹಕಾರ ಸಂಘಗಳಲ್ಲಿಯೇ ವ್ಯವಹಾರ ನಡೆಸುವ ಮೂಲಕ ಸಂಘದ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿಯಮಿತ ಅಧ್ಯಕ್ಷ ಗುರುರಾಜ್ ಹೇಳಿದರು.ಪಟ್ಟಣದ ತಾಲೂಕು ಶ್ರೀಶಿವಾಜಿ ಗಾಣಿಗರ ಸೌಹಾರ್ದ ಸಹಕಾರಿ ನಿಯಮಿತ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ ಮಾತನಾಡಿ, ಕೇವಲ 450ಕ್ಕೂ ಹೆಚ್ಚಿನ ಷೇರುದಾರರನ್ನು ಹೊಂದಿರುವ ಶ್ರೀಶಿವಾಜಿ ಗಾಣಿಗರ ಸೌಹಾರ್ದ ಸಹಕಾರ ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪತದತ್ತ ಸಾಗುತ್ತಿದೆ ಎಂದರು.
ಸಹಕಾರ ಸಂಘದಿಂದ ಸಾಲವನ್ನು ಪಡೆದುಕೊಂಡ ಷೇರುದಾರರು ಹಾಗೂ ಸಹಕಾರಿಗಳು ಸಾಲ ಪಡೆದ ಹಣವನ್ನು ಸದ್ವಿನಿಯೋಗ ಮಾಡಿಕೊಂಡು ನಿಗದಿತ ಅವಧಿ ಒಳಗೆ ಸಾಲದ ಬಾಕಿ ಹಣದ ಕಂತನ್ನು ಸಂಪೂರ್ಣ ಪಾವತಿಸುವ ಮೂಲಕ ಸುಸ್ತಿಯಿಂದ ಹೊರಬಂದು ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.ಸಂಘದಲ್ಲಿ ಕೇವಲ ಕೆಲವೇ ದಾಖಲೆಗಳನ್ನು ಪಡೆದು ತುರ್ತಾಗಿ ಸಾಲ ಸೌಲಭ್ಯ ನೀಡುವುದರಿಂದ ರೈತರು ಬ್ಯಾಂಕುಗಳಿಗೆ ಹಾಗೂ ಹೆಚ್ಚಿನ ಬಡ್ಡಿ ತೇರುವ ಲೇವಾದಾರರ ಹತ್ತಿರ ಹೋಗುವುದನ್ನು ತಪ್ಪಿಸಿದಂತಾಗುವುದು. ಮನೆ ಬಾಗಿಲಿನಲ್ಲಿಯೇ ಇರುವ ಸಹಕಾರ ಸಂಘಗಳ ಮೂಲಕ ವ್ಯವಹಾರ ಮಾಡುವಂತೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಸಾರಂಗಿ ನಾಗಣ್ಣ ಮಾತನಾಡಿ, ಸಂಘದ ನಿಯಮ ನಿಬಂಧನೆಗಳನ್ನು ಉಲ್ಲಂಘಿಸಿ ಸುಸ್ತಿದಾರರಾಗಿರುವ ಈ ಷೇರುದಾರರು ಕೂಡಲೇ ಸಾಲದ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿ ಮಾಡದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹಾಕಲು ಸಂಘದ ಸರ್ವ ಸದಸ್ಯರು ಸಹಕರಿಸಬೇಕು ಎಂದು ಸಭೆ ಒಪ್ಪಿಗೆ ಪಡೆದುಕೊಂಡರು.ಸಭೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಸಿದ್ಧಲಿಂಗಯ್ಯ, ರೀ ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ಎಸ್.ಕೆ.ರಾಮಯ್ಯ, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಅಗ್ರಹಾರಬಾಚಹಳ್ಳಿ ಗ್ರಾಪಂ ಸದಸ್ಯ ಆರ್ ಶ್ರೀನಿವಾಸ್, ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಮಂಜು ಶೆಟ್ಟಿ, ಪವನ್ ಕುಮಾರ್, ಪ್ರಮೋದ, ವಿಶ್ವನಾಥ, ದೇವಮ್ಮ, ಶೋಭಾ, ರವಿ, ಸೋಮಶೇಖರ್, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿಲ್ಪಾ, ಕಂಪ್ಯೂಟರ್ ಅಕೌಂಟೆಂಟ್ ಶಾಲಿನಿ, ಪಿಗ್ಮಿ ಸಂಗ್ರಾಹಕಿ ಸರೋಜಾ ಇದ್ದರು.
ಇದೇ ವೇಳೆ ಸಂಘಕ್ಕೆ ನಿಯಮಿತವಾಗಿ ಸಾಲ ಮರುಪಾವತಿ ಮಾಡಿ ಸಹಕಾರಿಗಳು, ಫಿಕ್ಸೆಡ್ ಡಿಪಾಸಿಟ್ ಉಳಿತಾಯ ಮಾಡಿರುವ ಷೇರುದಾರರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕಗಳಿಸಿರುವ ಷೇರುದಾರರ ಮಕ್ಕಳನ್ನು ಇ ಸನ್ಮಾನಿಸಿ ಗೌರವಿಸಲಾಯಿತು.;Resize=(128,128))
;Resize=(128,128))
;Resize=(128,128))