ಸಾರಾಂಶ
ಕಬ್ಬಿಗೆ ಆಕಸ್ಮಿಕ ಬೆಂಕಿ: ರೈತನಿಗೆ ಸಂಕಷ್ಟ
ಬಸವನಬಾಗೇವಾಡಿ: ತಾಲೂಕಿನ ಕರಭಂಟನಾಳ ಗ್ರಾಮದ ಹತ್ತಿರವಿರುವ ಸಿ.ಬಿ.ಪಾಟೀಲ ಎಂಬುವವರ ತೋಟದಲ್ಲಿರುವ ಕಟಾವಿಗೆ ಬಂದಿದ್ದ ಕಬ್ಬಿಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಎಂಟು ಎಕರೆ ಕಬ್ಬಿನಲ್ಲಿ ಸುಮಾರು ಮೂರು ಎಕರೆಯಷ್ಟು ಕಬ್ಬು ಬೆಂಕಿಯಿಂದಾಗಿ ಹಾನಿಯಾಗಿದೆ. ಎಂಟು ಎಕರೆಯಲ್ಲಿ ಕಬ್ಬು ಬೆಳೆಯಲಾಗಿತ್ತು. ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಭೀಮಾಶಂಕರ ಮಾದರ, ಸಿಬ್ಬಂದಿಗಳಾದ ಸುಭಾಸ ಹಾದಿಮನಿ, ಅಶೋಕ ನಾಯಕ, ಮುತ್ತಣ್ಣ ಲಮಾಣಿ, ಶರಣಪ್ಪ ಹೂಗಾರ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಉಳಿದ ಕಬ್ಬನ್ನು ರಕ್ಷಿಸಿದ್ದಾರೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜೆ ತಿಳಿಸಿದರು.