ಕೆಆರ್‌ಪಿ ಪಕ್ಷಕ್ಕೆ ಒಂದು ವರ್ಷ, ಅಂಜನಾದ್ರಿಯಲ್ಲಿ ಸಂಭ್ರಮಾಚರಣೆ

| Published : Dec 26 2023, 01:30 AM IST

ಕೆಆರ್‌ಪಿ ಪಕ್ಷಕ್ಕೆ ಒಂದು ವರ್ಷ, ಅಂಜನಾದ್ರಿಯಲ್ಲಿ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಜನಾರ್ದನ ರೆಡ್ಡಿ ಅಭಿಮಾನಿಗಳು ಆಂಜನೇಯನ ಪಾದುಕೆ ಪೂಜೆ ಮಾಡಿದರು. ಸ್ವಚ್ಛತಾ ಅಭಿಯಾನ ನಡೆಸಿದರು.

ಗಂಗಾವತಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಡಿ. 25ಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಂಜನಾದ್ರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ನೇತೃತ್ವದ ಕೆಆರ್‌ಪಿ ಪಕ್ಷ ಸ್ಥಾಪನೆಗೊಂಡ ಹಿನ್ನೆಲೆಯಲ್ಲಿ ರೆಡ್ಡಿ ಅವರ ಆಶಯದಂತೆ ವಾರ್ಷಿಕೋತ್ಸವ ಆಚರಿಸಿದರು. ಅಂಜನಾದ್ರಿಯಲ್ಲಿ ಆಂಜನೇಯನ ಪಾದುಕೆಗಳಿಗೆ ಪೂಜೆ ನೆರವೇರಿಸಿ, ಕೇಕ್ ಕತ್ತರಿಸಿದರು. ಈ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.

ಶಾಸಕ ಜಿ. ಜನಾರ್ದನ ರೆಡ್ಡಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಕಾರ್ಯಕರ್ತರು ಸಂಕಲ್ಪ ಮಾಡಿದರು. ರಾಜ್ಯ ಉಪಾಧ್ಯಕ್ಷ, ಕೊಪ್ಪಳ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಮನೋಹರ ಗೌಡ ಹೇರೂರು, ಕೊಪ್ಪಳ ಜಿಲ್ಲಾಧ್ಯಕ್ಷ ಸಂಗಮೇಶ್ ಬಾಗವಾಡಗಿ, ಮುಖಂಡರಾದ ರಾಜೇಶ್ ರೆಡ್ಡಿ, ಚನ್ನವೀರನಗೌಡ ಕೋರಿ, ದುರುಗಪ್ಪ ಆಗೋಲಿ, ವೀರೇಶ್ ಬಲಕುಂದಿ, ಬೆಟ್ಟಪ್ಪ ಬೆಣಕಲ್, ಮಲ್ಲಿಕಾರ್ಜುನ ಸ್ವಾಮಿ ಆನೆಗುಂದಿ, ಮಂಜುಗೊಂದಿ, ಗಂಗಾಧರ, ಶರಣು ಓಜನಹಳ್ಳಿ, ಗೀತಾ, ವಿಜಯಲಕ್ಷ್ಮಿ, ಸುಮಂಗಲಮ್ಮ ಇನ್ನಿತರರು ಭಾಗವಹಿಸಿದ್ದರು.

ಕೆಆರ್‌ಪಿಪಿ ಸಂಸ್ಥಾಪನಾ ದಿನಾಚರಣೆ: ಕುಷ್ಟಗಿ ತಾಲೂಕಿನ ಮೆಣೆದಾಳ ಆಂಜನೇಯ ದೇವಸ್ಥಾನದ ಹತ್ತಿರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಥಮ ವರ್ಷದ ಸಂಸ್ಥಾಪನ ದಿನದ ಅಂಗವಾಗಿ ಸಸಿ ನೆಡಲಾಯಿತು.ಯುವ ಮುಖಂಡ ಚಂದ್ರಶೇಖರ ರೆಡ್ಡಿ ಮಾತನಾಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಕನಸಿನ ಕೂಸು. ಸಸಿ ಬೆಳೆಯುವ ರೀತಿಯಲ್ಲಿ ಪಕ್ಷವು ಇನ್ನೂ ಎತ್ತರಕ್ಕೆ ಬೆಳೆಯಲಿ. ಜನಾರ್ದನ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವಂತಾಗಬೇಕು ಎಂದರು.

ಪಕ್ಷದ ಯುವ ಕಾರ್ಯಕರ್ತರಾದ ಪುಟ್ಟರಾಜ, ಸಂತೋಷ್, ಶ್ಯಾಮೂರ್ತಿ, ವೀರೇಶ್, ವಿಠೋಬಾ, ಚಿದಾನಂದ ಉಪಸ್ಥಿತರಿದ್ದರು.