ಸಾರಾಂಶ
ಅತ್ಯಂತ ಪುರಾತನವಾದ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಜಾನಪದ ಕಲೆಗೆ ತನ್ನದೇ ಆದ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ಜಾನಪದ ಕಲೆಗಳಲ್ಲಿ ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಜಾನಪದ ಕಲೆಗಳು ಹಳ್ಳಿಯಲ್ಲಿ ಜೀವಂತವಾಗಿವೆ. ಹಳ್ಳಿಗಳಲ್ಲಿ ಯುವಕರು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳು ನಾಶವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಜಾನಪದ ಕಲೆಗೆ ತನ್ನದೇ ಇತಿಹಾಸವಿದ್ದು, ಅದನ್ನು ಉಳಿಸಿ ಬೆಳೆಸುವುದು ಮುಖ್ಯವಾಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಮಂಜುಳಾ ಸಲಹೆ ನೀಡಿದರು.ತಾಲೂಕಿನ ಸಂತೆಕಸಲಗೆರೆ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸಂತೆ ಕಸಲಗೆರೆ ಶಿವಗಂಗಾ ಸಾಂಸ್ಕೃತಿಕ ಯುವಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜನಪದ ಸುಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಂತ ಪುರಾತನವಾದ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಜಾನಪದ ಕಲೆಗೆ ತನ್ನದೇ ಆದ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ಜಾನಪದ ಕಲೆಗಳಲ್ಲಿ ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಜಾನಪದ ಕಲೆಗಳು ಹಳ್ಳಿಯಲ್ಲಿ ಜೀವಂತವಾಗಿವೆ. ಹಳ್ಳಿಗಳಲ್ಲಿ ಯುವಕರು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳು ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಜಾನಪದ ಅಂದರೆ ವ್ಯಕ್ತಿತ್ವ ಆದ್ದರಿಂದ ಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ ಕುರಿತು ಅವರ ಜೀವನ ಚರಿತ್ರೆ, ಕಥೆಯ ಜಾನಪದವನ್ನು ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿ ಮನೆಯವರಿಗೂ ಗೊತ್ತು ಇಂತಹ ಪವಾಡ ಪುರುಷರ ಜಾನಪದವನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಜಾನಪದ ಕಲೆಯನ್ನು ದ್ವಿತೀಯ ದರ್ಜೆಯ ಕಲೆಯಾಗಿ ಪರಿಗಣಿಸುತ್ತಿರುವುದು ದುರಂತ. ಕಲೆಯ ಮೂಲವಾದ ಜಾನಪದವನ್ನು ಸಾಂಸ್ಕೃತಿಕವಾಗಿ ಸಮಾನತೆ ಕಾಣಬೇಕು ಸರ್ಕಾರಗಳು ಕಲೆ ಉಳಿವಿಗೆ ಮುಂದಾಗಬೇಕು ಎಂದರು.ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿದರು. ಎಸ್.ರಾಜಣ್ಣ ಮತ್ತು ತಂಡದವರಿಂದ ಸುಗಮ ಸಂಗೀತ, ಬಸವರಾಜು ಮತ್ತು ತಂಡದವರಿಂದ ಮೂಲದಾಟಿ ಜನಪದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಿವಗಂಗಾ ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷ ಸಂತೆ ಕಸಲಗೆರೆ ಬಸವರಾಜು, ಮುಖ್ಯ ಶಿಕ್ಷಕ ಎಸ್.ಕೆ.ನಾಸೀರ್ ಹುಸೇನ್, ಪ್ರಾಂಶುಪಾಲ ಎಂ.ಸಿ.ಮಹೇಂದ್ರ, ಕಲಾವಿದ ಕೊತ್ತತ್ತಿ ರಾಜು ಭಾಗವಹಿಸಿದ್ದರು.