ತರಕಾರಿ ಮಾರಾಟಗಾರರ ಬೇಡಿಕೆ ಈಡೇರಿಸಲು ಒತ್ತಾಯ

| Published : Jan 31 2024, 02:16 AM IST

ಸಾರಾಂಶ

ಸುರಪುರದಲ್ಲಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಬೀದಿಬದಿ ವ್ಯಾಪಾರಿಗಳು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಬೀದಿಬದಿ ವ್ಯಾಪಾರಿಗಳು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ನಗರಸಭೆಯಿಂದ ನಗರದ ಮಧ್ಯೆದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿದರೂ ಕೆಲವರು ಗಾಂಧಿ ವೃತ್ತ, ಬಸ್ ನಿಲ್ದಾಣ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮುಂಜಾನೆ ಮತ್ತು ಸಂಜೆ ತುಂಬಾ ಜನದಟ್ಟಣಿಯಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರದ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ತರಕಾರಿ ಮಾರಾಟ ಮಾಡುತ್ತಿರುವುದು ಅಧಿಕವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ನಗರಸಭೆ ವಿಫಲವಾಗಿದೆ. ಇದರಿಂದ ತರಕಾರಿ ಮಾರುಕಟ್ಟೆಯಲ್ಲಿ ಕೊಠಡಿ ಬಾಡಿಗೆ ಪಡೆದು ಮಾರಾಟು ಮಾಡುವವರು ಹಲವಾರು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಆದ್ದರಿಂದ ರಸ್ತೆ ಬದಿಯಲ್ಲಿ ಕುಳಿತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದ ಸರ್ದಾರ್ ವಲಭಬಾಯಿ ಪಟೇಲ್ ವೃತ್ತ, ಗಾಂಧಿ ವೃತ್ತ ಮುಂದುಗಡೆ ರಸ್ತೆ, ಬಸ್ ನಿಲ್ದಾಣ, ಹಳೆಯ ಕೋರ್ಟ್ ಹತ್ತಿರ ತರಕಾರಿ ಹರಾಜು ಮಾಡುವ ಸಮಯ ಬೆಳಗ್ಗೆ 3 ಗಂಟೆ ಬದಲು ಬೆಳಗ್ಗೆ 6.30ರಿಂದ 7:30ರ ವೇಳೆಗೆ ಮಾಡಬೇಕು. ತರಕಾರಿ ಮಾರುಕಟ್ಟೆ, ಖಾಸಗಿಯವರಿಂದ ಬಾಡಿಗೆ ಪಡೆದಂತಹ ಅಂಗಡಿಗಳಲ್ಲಿ ಮಾತ್ರ ತರಕಾರಿ ಮಾರಾಟ ಮಾಡಲು ಅವಶಕಾಶ ನೀಡಬೇಕು, ರಸ್ತೆ ಬದಿಯಲ್ಲಿ ಯಾವುದೇ ಕಾರಣಕ್ಕೂ ತರಕಾರಿ ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಬೀದಿಬದಿ ವ್ಯಾಪಾರಿಗಳಾದ ರೇಣುಕಾ, ಸುರೇಖಾ, ಮಹಾದೇವಿ, ಪಾರಮ್ಮ, ಶಾಂತಮ್ಮ, ರೇಣುಕಾ ಚಳ್ಳಿಗಿಡ, ಮಹಾದೇವಿ ದಾಸರು, ಶಾಂತಾ, ಲಕ್ಷ್ಮಿ, ಶಶಿಕಲಾ, ಸಾಬವ್ವ, ತಿಪ್ಪವ್ವ, ಗಂಗವ್ವ, ಸುಬ್ಬವ್ವ, ಮಾನವ್ವ, ಶೋಭಾ, ವಿಜಯಲಕ್ಷ್ಮಿ, ಭೀಮರಾಯ ದಾಸರ, ಶರಣು ದೊಣ್ಣಿಗೇರಿ, ನಾಗಪ್ಪ ಸಿದ್ದಾಪುರ, ಶರ್ಲುದ್ದೀನ್, ರಹಮಾನ್ ಸೇರಿದಂತೆ ಇತರರಿದ್ದರು.