ಸಾರಾಂಶ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪನಾ ದಿನಾಚರಣೆ, ಹವಾ ನಿಯಂತ್ರಿತ ಸಭಾಂಗಣ ಮತ್ತು ನೂತನ ಸೌರ ವಿದ್ಯುತ್ ಘಟಕ ಉದ್ಘಾಟನಾ ಸಮಾರಂಭವು ಪಡೀಲಿನ ಆತ್ಮಶಕ್ತಿ ಸೌಧದಲ್ಲಿ ಜರುಗಿತು. ಮಾಜಿ ಸಚಿವ ರಮಾನಾಥ ರೈ ಅವರು ನೂತನ ಸೌರ ವಿದ್ಯುತ್ ಘಟಕದ ಉದ್ಘಾಟನೆ ನೆರವೇರಿಸಿ, ಅಲ್ಪಾವಧಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆಯು ಅಪಾರವಾದದ್ದು, ಈ ಸಂಘವು ಮಹಿಳಾ ಸಬಲೀಕರಣಕ್ಕೆ ತುಂಬಾ ಒತ್ತು ನೀಡುತ್ತಿದೆ ಹಾಗೂ ಜನರ ವಿಶ್ವಾಸ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ಹವಾ ನಿಯಂತ್ರಿತ ಸಭಾಂಗಣವನ್ನು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿ, ಸಂಘದ ಸಭಾಂಗಣವು ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಬಡ ಜನರಿಗೆ ಅವಕಾಶ ಕಲ್ಪಿಸಿಕೊಡುವಂತಾಗಲಿ ಎಂದರು. ಮುಖ್ಯ ಅತಿಥಿ, ನಝೀಮಾ ಇನ್ಸುಟ್ಯೂಟ್ ಅಧ್ಯಕ್ಷ ಯು.ಟಿ.ಝುಲ್ಫಿಕರ್ ಅಹಮದ್ ಅವರು ಸಂಘದ ಪಿಗ್ಮಿ ಸಂಗ್ರಾಹಕರಿಗೆ ಉಚಿತ ಆರೋಗ್ಯ ವಿಮಾ ಕಾರ್ಡ್ ವಿತರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ವಹಿಸಿದ್ದರು ಸಂಘದ ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ್ ಎನ್., ರಮಾನಾಥ ಸನಿಲ್, ಚಂದ್ರಹಾಸ ಮರೋಳಿ, ಬಿ.ಪಿ.ದಿವಾಕರ್, ಗೋಪಾಲ್ ಎಂ. ಮತ್ತು ಉಮಾವತಿ ಹಾಗೂ ಸಂಘದ ಸಲಹೆಗಾರ ಅಶೋಕ್ ಕುಮಾರ್, ಸಂಘದ ಪಿಗ್ಮಿ ಏಜೆಂಟರು, ಸಿಬ್ಬಂದಿ ಇದ್ದರು.ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ ಸ್ವಾಗತಿಸಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೌಮ್ಯ ವಿಜಯ್ ವಂದಿಸಿದರು. ಶಾಖಾಧಿಕಾರಿ ಧನಲಕ್ಷ್ಮಿ ನಿರೂಪಿಸಿದರು.