ಸಾರಾಂಶ
ಚನ್ನರಾಯಪಟ್ಟಣದ ಶಾಲಿನಿ ಶಾಲೆಯ ಸುಮಾರು ೪೦೦ ಮಕ್ಕಳಿಗೆ ಉಚಿತ ದಂತ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ನೀಡಿ ಮಕ್ಕಳಿಗೆ ಉಚಿತವಾಗಿ ಪೇಸ್ಟ್ ಮತ್ತು ಬ್ರಶ್ ನೀಡಲಾಯಿತು. ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರೊಫೆಸರ್ ರಂಜಿತ್, ಪ್ರೊಫೆಸರ್ ಕವಿತಾ ಹಾಗೂ ಪ್ರೊಫೆಸರ್ ಪ್ರಭುದೇವರವರು ಸುಮಾರು ೪೦೦ ಮಕ್ಕಳ ದಂತವನ್ನು ಪರೀಕ್ಷೆ ಮಾಡಿ ಚಿಕಿತ್ಸೆಯನ್ನು ನೀಡಲಾಯಿತು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಹಾಗೂ ಶಾಲಿನಿ ವಿದ್ಯಾಸಂಸ್ಥೆ ಮತ್ತು ಶ್ರೀ ಆದಿಚುಂಚನಗಿರಿ ಮಹಾವಿದ್ಯಾಲಯ ವತಿಯಿಂದ ಶಾಲಿನಿ ಶಾಲೆಯ ಸುಮಾರು ೪೦೦ ಮಕ್ಕಳಿಗೆ ಉಚಿತ ದಂತ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ನೀಡಿ ಮಕ್ಕಳಿಗೆ ಉಚಿತವಾಗಿ ಪೇಸ್ಟ್ ಮತ್ತು ಬ್ರಶ್ ನೀಡಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ವೈದ್ಯಾಧಿಕಾರಿಗಳಾದ ಡಾ. ಮಹೇಶ್‌ರವರು ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಜಮೀರ್‌ರವರು ಮಕ್ಕಳಿಗೆ ಹಲ್ಲನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿಯನ್ನು ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡುತ್ತಾರೆ. ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರೊಫೆಸರ್ ರಂಜಿತ್, ಪ್ರೊಫೆಸರ್ ಕವಿತಾ ಹಾಗೂ ಪ್ರೊಫೆಸರ್ ಪ್ರಭುದೇವರವರು ಸುಮಾರು ೪೦೦ ಮಕ್ಕಳ ದಂತವನ್ನು ಪರೀಕ್ಷೆ ಮಾಡಿ ಚಿಕಿತ್ಸೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಬಿ. ವಿ. ವಿಜಯ್, ಕಾರ್ಯದರ್ಶಿ ಡಾ.ಕುಮುದ, ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಗಿರೀಶ್ ಮತ್ತು ಪದಾಧಿಕಾರಿಗಳು ಹಾಜರಿದ್ದರು.