ಕುಂಚಿಟಿಗರ ಸಂಘಟನೆಯಿಂದ ಡಿ. ಬನುಮಯ್ಯ ಜಯಂತಿ ಆಚರಣೆ

| Published : Jul 06 2024, 12:49 AM IST

ಕುಂಚಿಟಿಗರ ಸಂಘಟನೆಯಿಂದ ಡಿ. ಬನುಮಯ್ಯ ಜಯಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಸಹ ಇದೇ ಸಂಸ್ಥೆಯ ವಿದ್ಯಾರ್ಥಿ. ಡಿ. ಬನುಮಯ್ಯ ಅವರು ಹುಟ್ಟಿನಿಂದ ಕಡು ಬಡವರು, ಹೀಗಾಗಿ ಅವರ ವಿದ್ಯಾಭ್ಯಾಸ ಅರ್ಧಕ್ಕೆ ನಿಂತು ಹೋಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಕುಂಚಿಟಿಗರ ಸಂಘಟನಾ ಸಭಾ ವತಿಯಿಂದ ಡಿ. ಬನುಮಯ್ಯ ಅವರ 164 ನೇ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.

ನಗರದ ಡಿ. ಬನುಮಯ್ಯ ವಿದ್ಯಾಸಂಸ್ಥೆಯ ಆವರಣದಲ್ಲಿರುವ ಪುತ್ಥಳಿಗೆ ನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್ ಮಾಲಾರ್ಪಣೆ ಮಾಡಿ ಸಿಹಿ ವಿತರಿಸಿದರು. ಬಳಿಕ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ನಂತರ ಬಿ.ವಿ. ಮಂಜುನಾಥ್ ಮಾತನಾಡಿ, ನಾನು ಸಹ ಇದೇ ಸಂಸ್ಥೆಯ ವಿದ್ಯಾರ್ಥಿ. ಡಿ. ಬನುಮಯ್ಯ ಅವರು ಹುಟ್ಟಿನಿಂದ ಕಡು ಬಡವರು, ಹೀಗಾಗಿ ಅವರ ವಿದ್ಯಾಭ್ಯಾಸ ಅರ್ಧಕ್ಕೆ ನಿಂತು ಹೋಗಿತ್ತು. ಆ ನಂತರ ಕಷ್ಟ ಪಟ್ಟು ಸಂಪಾದಿಸಿ ಬಂದ ಹಣವನ್ನು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು. ಇಂತಹ ವ್ಯಕ್ತಿಯ ಜಯಂತಿ ಆಚರಣೆ ನಮ್ಮೆಲ್ಲರ ಕರ್ತವ್ಯ ಎಂದರು.

ಕುಂಚಿಟಿಗರ ಸಂಘಟನಾ ಸಭಾದ ಅಧ್ಯಕ್ಷ ಗಣೇಶ್ ಮಾತನಾಡಿ, ಬನುಮಯ್ಯ ಅವರ ಆದರ್ಶ ಪಾಲನೆಯಾಗಬೇಕು. ಮೈಸೂರಿನ ಅಭಿವೃದ್ಧಿಗೆ ಅವರ ಕೊಡುಗೆ ಮಾದರಿಯಾಗಿದೆ ಎಂದು ಸ್ಮರಿಸಿದರು.

ಕುಂಚಿಟಿಗರ ಸಂಘಟನಾ ಸಭಾದ ಮಾಜಿ ಅಧ್ಯಕ್ಷ ಎಂ.ಪಿ. ನಾಗರಾಜ್, ನಿರ್ದೇಶಕರಾದ ಚಂದ್ರು, ದಿನೇಶ್, ಚಂದ್ರು, ದೀಪಕ್ ಮೊದಲಾದವರು ಇದ್ದರು.