ಸಾರಾಂಶ
ಕನ್ನಡಪ್ರಭ ವಾರ್ತೆ ಪರಶುರಾಂಪುರ:
ವ್ಯಾಸಾಂಗದಲ್ಲಿ ಎಷ್ಟೇ ಅಡೆ ತಡೆ ಬಂದರೂ ಕಷ್ಟಪಟ್ಟು ಅಭ್ಯಾಸದ ಮಾಡಿದಾಗ ಮಾತ್ರ ವಿಧ್ಯಾರ್ಥಿಗಳು ಗುರಿ ತಲುಪಲು ಸಾಧ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕರಾದ ಸೀತಾರಾಮಯ್ಯ ತಿಳಿಸಿದರು.ಪರಶುರಾಂಪುರ ಸಮೀಪದ ಟಿಎನ್ ಕೋಟೆ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ 1986 ರಿಂದ 1989ರ ವರೆಗಿನ ಹಳೇ ವಿದ್ಯಾರ್ಥಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಗುರುವಂದನಾ ಅಪೂರ್ವ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಮೊಬೈಲ್ ನೀಡಬೇಡಿ ಅದರ ಬದಲಿಗೆ ಪುಸ್ತಕ ಕೊಡಿ ಇದರಿಂದ ಅವರ ಬುದ್ದಿ ಹೆಚ್ಚಾಗುತ್ತದೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಅವಕಾಸ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಮುದಲಿಂಗಪ್ಪ ಮಾತನಾಡಿ, ದ್ವೇಶ ಅಸೂಯೆ ದೂರಮಾಡಿ ಪೋಷಕರು ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು. ವ್ಯಕ್ತಿ ವ್ಯಕ್ತಿತ್ವದ ಸ್ಥಾನಕ್ಕೆ ಗೌರವ ಕೊಡುವುದನ್ನು ಕಲಿಸಿದಾಗ ಮಕ್ಕಳು ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಹಳೇ ವಿಧ್ಯಾರ್ಥಿ ಎಂ.ಹನುಮಂತರಾಯ, ಮಾಜಿ ಗ್ರಾಪಂ ಅಧ್ಯಕ್ಷ ಗುರುಸ್ವಾಮಿ ಮಾತನಾಡಿದರು. ಈ ವೇಳೆ ನಿವೃತ್ತ ಶಿಕ್ಷಕ ಕಸ್ತೂರಿ ರಂಗಪ್ಪ, ಮಂಜುನಾಥ, ಪಂಚಾಕ್ಷರಯ್ಯ, ಧನಂಜಯ, ಗೋವಿಂದರಾಜ್, ವಿಶ್ವೇಶ್ವರಯ್ಯ ಭಟ್, ಹಳೇಯ ವಿಧ್ಯಾರ್ಥಿಗಳಾದ ಜಿ.ಟಿ. ಮಂಜುಳಾ, ಭೈಲಪ್ಪ, ಎನ್ ಎಂ ಡಿ ಸಿ ಶಾರದಮ್ಮ, ಕಮಲಮ್ಮ, ಸುಮಕ್ಕ, ಎಂ ಹನುಮಂತರಾಯ, ಇನ್ನೂ ಅನೇಕ ಹಳೇಯ ವಿಧ್ಯಾರ್ಥಿಗಳು ಭಾಗವಹಿಸಿ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರ ಆರ್ಶಿವಾದ ಪಡೆದು ಗೌರವ ಸಲ್ಲಿಸಿದರು.