ಬಲ್ಲಮಾವಟಿಯಲ್ಲಿ ರಸ್ತೆ ಅಪಘಾತ ಇಬ್ಬರು ಗಂಭೀರ

| Published : May 13 2024, 01:02 AM IST

ಸಾರಾಂಶ

ಬೈಕ್‌ ಟಿಪ್ಪರ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬಲ್ಲಮಾವಟಿ ಗ್ರಾಮದಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಭಾನುವಾರ ಸಂಜೆ ಬೈಕ್ ಮತ್ತೆ ಟಿಪ್ಪರ್‌ಗಳ ನಡುವೆ ನಡೆದ ಅಪಘಾತದಲ್ಲಿ ಬೈಕು ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ನಾಪೋಕ್ಲುವಿನ ಹಳೆ ತಾಲೂಕಿನ ಭಗವತಿ ಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭ ಪೂರೈಸಿ ಅಯ್ಯಂಗೇರಿಯತ್ತ ತೆರಳುತ್ತಿದ್ದ ಇಬ್ಬರು ಸವಾರರಿದ್ದ ಬೈಕು ಅಯ್ಯಂಗೇರಿ ಕಡೆಯಿಂದ ನಾಪೋಕ್ಲುವಿನತ್ತ ಬರುತ್ತಿದ್ದ ಟಿಪ್ಪರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕಲ್ಲಿ ಇದ್ದವರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಅಯ್ಯಂಗೇರಿಯ ತೊತ್ತಿಯಂಡ ಸೋಮಯ್ಯ ಅವರ ಮಗ ಮುಕೇಶ್ (27) ಹಾಗೂ ಅವರ ಚಿಕ್ಕಪ್ಪ ತೊತ್ತಿಯಂಡ ರಾಕೇಶ್ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಬಲ್ಲಮಾವಟಿಯ ಪಡಿಯಾಣಿ ಜಂಕ್ಷನ್ ಬಳಿಯ ತಿರುವಿನಲ್ಲಿ ಎದುರಿನಿಂದ ಬಂದ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದು ಇಬ್ಬರ ಕಾಲು ಹಾಗು ತಲೆಗೆ ಗಂಭೀರ ಗಾಯಗಳಾಗಿದೆ.

ಗಾಯಾಳುಗಳನ್ನು ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪೋಕ್ಲು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಕಾನೂನಿನ ಕ್ರಮ ಕೈಗೊಂಡಿದ್ದಾರೆ.

ಸೋಮವಾರಪೇಟೆ : ಬಾಲಕಿ ಅಂತ್ಯಸಂಸ್ಕಾರ

ಮಡಿಕೇರಿ : ಇತ್ತಿಚೆಗೆ ಹತ್ಯೆಗೀಡಾಗಿದ್ದ ಕುಂಬಾರಗಡಿಗೆ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ಭಾನುವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ಬಾಲಕಿಯ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಗುರುವಾರ ಸಂಜೆ ಆರೋಪಿ ಪ್ರಕಾಶ್ ಎಂಬಾತನಿಂದ ಬಾಲಕಿಯ ಬರ್ಬರ ಹತ್ಯೆ ಆಗಿತ್ತು. ಹತ್ಯೆ ಆರೋಪಿಯನ್ನು ಶನಿವಾರ ಬಂಧಿಸಲಾಗಿತ್ತು. ಅಲ್ಲದೆ ಹತ್ಯೆಯಾದ ಬಾಲಕಿಯ ಶಿರ ಪತ್ತೆಯಾಗಿತ್ತು. ಇದೀಗ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಕುಟುಂಬಸ್ಥರು ಸ್ವಗೃಹದಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಿದರು.