ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರುಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲೂಕಿನ ಕೆ ಗುಂಡಾಪುರದ ರೈತನ ಜಮೀನಿನಲ್ಲಿ ನಡೆದಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಬಫರ್ ಜೋನ್ ವಲಯದ ಕೆ ಗುಂಡಾಪುರ ಗ್ರಾಮದ ರೈತ ಪರಮೇಶ್ ಜಮೀನಿನಲ್ಲಿ ಸಾಕಣೆ ಮಾಡಲಾಗಿದ್ದ ಮೇಕೆಯನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿ ಜಮೀನಿನಲ್ಲಿ ಇದ್ದ ನಾಯಿಯನ್ನು ಸಹ ಹೊತ್ತೊಯ್ದಿದೆ. ಅರಣ್ಯಾಧಿಕಾರಿಗಳ ದೌಡು:
ಘಟನೆ ವಿಚಾರ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿಗಳು ಸಿಬ್ಬಂದಿ ವರ್ಗದವರು ರೈತ ಪರಮೇಶ್ ಜಮೀನಿಗೆ ಭೇಟಿ ನೀಡಿ ತೋಟದ ಮನೆಯಲ್ಲಿ ಮೇಕೆಯನ್ನು ಬಲಿ ಪಡಿದಿರುವ ಬಗ್ಗೆ ಹಾಗೂ ಉಳಿದಂತ ಮೇಕೆಗಳಿಗೂ ಗಾಯಗೊಳಿಸಿರುವ ಬಗ್ಗೆ ಮಾಹಿತಿ ಪಡೆದು ತೋಟದ ಮನೆಯಲ್ಲಿದ್ದ ನಾಯಿಯನ್ನು ಹೊತ್ತೊಯ್ದಿರುವ ಬಗ್ಗೆ ರೈತನಿಂದ ಅರಣ್ಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಭಯದ ವಾತಾವರಣ:ಕೆ ಗುಂಡಾಪುರ ತೋಟದ ಮನೆಗಳಲ್ಲಿ 30ಕ್ಕೂ ಹೆಚ್ಚು ರೈತರು ವಾಸವಾಗಿರುವ ತೋಟದ ಮನೆಗಳ ಮೇಲೆ ರಾತ್ರಿ ವೇಳೆ ಚಿರತೆ ದಾಳಿ ನಡೆಸಿ ಸಾಕುಪ್ರಾಣಿಗಳನ್ನ ಒಂದು ತಿಂಗಳಿಂದ ಈ ಭಾಗದಲ್ಲಿ ಚಿರತೆ ದಾಳಿ ಮಾಡಿರುವ ಬಗ್ಗೆ ನಿವಾಸಿಗಳಲ್ಲಿ ಭಯದ ವಾತಾವರಣ ಉಂಟಾಗಿದೆ. ರಾತ್ರಿ ವೇಳೆ ಕಾವಲಿನಲ್ಲಿ, ಫಸಲಿಗೆ ನೀರು ಹಾಯಿಸುವ ವೇಳೆಯಲ್ಲಿ ಚಿರತೆ ದಾಳಿ ನಡೆಸಿ ಜೀವ ಹಾನಿ ಉಂಟು ಮಾಡಿದರೆ ಏನು ಮಾಡುವುದು ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಜೊತೆಗೆ ರೈತನಿಗೆ ನಷ್ಟ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕೆ ಗುಂಡಾಪುರದಲ್ಲಿ ಚಿರತೆ ದಾಳಿ ಮಾಡಿ ಮೇಕೆ ಕೊಂದಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತನಿಗಾಗಿರುವ ನಷ್ಟ ಪರಿಹಾರ ನೀಡಲು ಅರ್ಜಿ ನೀಡುವಂತೆ ರೈತನಿಗೆ ಸಲಹೆ ನೀಡಲಾಗಿದೆ. ಜೊತೆಗೆ ಈ ಭಾಗದಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ರೈತರು ಅರಣ್ಯ ಅಧಿಕಾರಿಗಳಿಗೆ ಸಹಕಾರ ನೀಡಬೇಕು.
ಪ್ರವೀಣ್, ವಲಯ ಅರಣ್ಯಾಧಿಕಾರಿ