ವಿವಿಧೆಡೆ ರಸ್ತೆ, ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ

| Published : Mar 11 2024, 01:18 AM IST

ಸಾರಾಂಶ

ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧೆಡೆ ರಸ್ತೆ, ಸೇತುವೆ ನಿರ್ಮಾಣಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.

ಕನ್ನಡಪ್ರಭವಾರ್ತೆ ಚಾಮರಾಜನಗರ

ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧೆಡೆ ರಸ್ತೆ, ಸೇತುವೆ ನಿರ್ಮಾಣಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಓ.ಆರ್.ಎಫ್‌ ಯೋಜನೆಯಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾ.ಹೆ. 209 ರಸ್ತೆಯಿಂದ ಬೋಗಾಪುರ ಗ್ರಾಮಕ್ಕೆ ಸಂಪರ್ಕಕಲ್ಪಿಸುವ ರಸ್ತೆ ಅಭಿವೃದ್ದಿಗೆ 1.50 ಕೋಟಿ ರು. ರಾ.ಹೆ.209 ಮುಖ್ಯರಸ್ತೆಯಿಂದ ಚಿಕ್ಕಹೊಳೆ ಚೆಕ್‌ಪೋಸ್ಟ್‌ ಮತ್ತು ಎಲೆಕಟ್ಟೆ ಮಾರ್ಗದಿಂದ ತಾಳವಾಡಿಗೆ ಸೇರುವ ಸಂಪರ್ಕರಸ್ತೆ ಅಭಿವೃದ್ದಿಗೆ 2.50 ಕೋಟಿ ರು., ಜ್ಯೋತಿಗೌಡನಪುರ ಗ್ರಾಮದಿಂದ ಕುರುಬರಹುಂಡಿ ಗ್ರಾಮಕ್ಕೆ ಸಂಪರ್ಕಕಲ್ಪಿಸುವ ರಸ್ತೆ ಅಭಿವೃದ್ಧಿಗೆ 3 ಕೋಟಿ ರು., ಹೊಂಡರಬಾಳು ನವೋದಯ ಶಾಲೆಯಿಂದ ಕುಂಟಗುಡಿ ಕಾಲೋನಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ 18 ಲಕ್ಷ ರು. ವೆಚ್ಚದ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಗ್ರಾಮೀಣ ಭಾಗದ ಜೀವನಾಡಿಯಾಗಿದ್ದು, ಜನರ ಸಂಚಾರಕ್ಕೆ ರಸ್ತೆಗಳ ಅಭಿವೃದ್ಧಿ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಿದ್ದು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 7.18 ಕೋಟಿ.ರು.ವೆಚ್ಚದರಸ್ತೆ, ಸೇತುವೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಇದು ಇಲ್ಲಿನ ಸ್ಥಳೀಯ ಜನರ ಒತ್ತಾಯ ಸಹ ಆಗಿತ್ತು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲೆಂದು ಗುಣಮಟ್ಟದ ರಸ್ತೆ ನಿರ್ಮಾಣವನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಇಂಜಿನಿಯರ್‌ಗಳಿಗೆ ಶಾಸಕರು ಸೂಚಿಸಿದರು. ಇದಕ್ಕೆ ನಾಗರೀಕರ ಸಹಕಾರ ಅಗತ್ಯವಾಗಿದ್ದು ನಿಮ್ಮ ಗ್ರಾಮಗಳ ಉತ್ತಮ ರಸ್ತೆ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನಿತ್ಯಾ, ಬೇಬಿ, ಉಪಾಧ್ಯಕ್ಷ ಮಹದೇವಗೌಡ, ಶ್ರೀನಾಥ್, ಸದಸ್ಯರಾದ ನಂಜುಂಡೇಗೌಡ, ನಾಗು, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ನಾಗೇಂದ್ರ, ತಾಪಂ ಮಾಜಿ ಸದಸ್ಯ ಮಹಾಲಿಂಗು, ಎಇಇ ರಮೇಶ್, ಇಂಜಿನಿಯರ್ ಶಾಂತ, ಮುಖಂಡರಾದ ನಾಗವಳ್ಳಿ ನಾಗಯ್ಯ, ದೊರೆಸ್ವಾಮಿ, ಸಿದ್ದರಾಜು, ಮಧುಚಾರ್, ಸೋಮು ಕೆಲ್ಲಂಬಳ್ಳಿ, ರವಿ, ಪಿ.ಮಹದೇವೇಗೌಡ, ಜಯಶಂಖರ್, ರಾಜೇಶ್, ಸ್ಟಾಲಿನ್, ದೊರೆ, ಮಹೇಶ್, ಲಿಂಗರಾಜು, ಶಿವಕುಮಾರ್, ಸೇರಿದಂತೆ ಗ್ರಾಪಂ ಸದಸ್ಯರು ಮತ್ತು ಗ್ರಾಮದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.