ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ ಗುರು ಹಾಗೂ ಗೋವಿಂದ ಮುಂದೆ ಬಂದರೂ ಮೊದಲು ಗುರುವಿಗೆ ನಮಿಸಬೇಕು. ಯಶಸ್ಸು ಸಿಗಬೇಕಾದರೆ ಮುಂದೆ ಗುರಿ ಹಿಂದೆ ಗುರು ಇರಬೇಕೆಂದು ಜ್ಯೋತಿಷ್ಯಶಾಸ್ತ್ರ ಪರಿಣಿತ ವೇ.ವಸಂತಬಟ್ ಜೋಶಿ ನುಡಿದರು. ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯಿಂದ ಆಶ್ರಯ ಬಡಾವಣೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಗುರು ಎಂದರೆ ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ತೋರುವವನು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಗುರು ಹಾಗೂ ಗೋವಿಂದ ಮುಂದೆ ಬಂದರೂ ಮೊದಲು ಗುರುವಿಗೆ ನಮಿಸಬೇಕು. ಯಶಸ್ಸು ಸಿಗಬೇಕಾದರೆ ಮುಂದೆ ಗುರಿ ಹಿಂದೆ ಗುರು ಇರಬೇಕೆಂದು ಜ್ಯೋತಿಷ್ಯಶಾಸ್ತ್ರ ಪರಿಣಿತ ವೇ.ವಸಂತಬಟ್ ಜೋಶಿ ನುಡಿದರು. ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯಿಂದ ಆಶ್ರಯ ಬಡಾವಣೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಗುರು ಎಂದರೆ ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ತೋರುವವನು. ಶ್ರೇಷ್ಠ ಸ್ಥಾನಮಾನ ಹೊಂದಿದ ಗುರುವಿಗಾಗಿ ಮೀಸಲು ಸ್ಥಾನ ಇಟ್ಟಿದ್ದೇ ಗುರುಪೂರ್ಣಿಮೆಯಾಗಿದೆ ಎಂದರು.ವೇ.ತಿರುಪತಿ ಆಚಾರ್ಯ ಗ್ರಾಂಪೊರೊಹಿತ ಮಾತನಾಡಿ, ಬೌದ್ಧ ಧರ್ಮ ಸಂಸ್ಥಾಪಕ ಗೌತಮ್ಮ ಬುದ್ದ ಅವರು ಜ್ಞಾನೋದಯವನ್ನು ಗುರುಪೂರ್ಣಿಮೆಯ ದಿನವನ್ನು ನೀಡಿದ್ದು, ಇದೇ ದಿನದಂದು ಮಹಾವೀರರು ಗುರು ಸ್ಥಾನಕ್ಕೇರಿದ್ದು ಇದೆ ದಿನವಾಗಿದೆ. ಹಿಂದೂ-ಬೌದ್ಧ-ಜೈನ ಧರ್ಮಿಯರು ಮಹತ್ವದ ಗುರು ಪೂರ್ಣಿಮೆ ಎಂದು ಕರೆಯುತ್ತಾರೆ ಎಂದು ತಿಳಿಸಿದರು.ಶಿರಡಿ ಸಾಯಿ ಸೇವಾ ಟ್ರಸ್ಟ್ ಮಾಜಿ ಅಧ್ಯಕ್ಷ ಜಿ.ಜಿ.ಕಾದಳ್ಳಿ ಮಾತನಾಡಿ, ಬ್ರಹ್ಮ-ವಿಷ್ಣು, ಮಹೇಶ್ವರ ಸ್ವರೂಪಿಗಳಾದಂತಹ ಗುರುವಿನ ಮೇಲೆ ನಂಬಿಕೆ ಹಾಗೂ ಭಕ್ತಿ ಇಟ್ಟು ನಡೆದರೆ ಸನ್ಮಾರ್ಗ ದೊರೆಯಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.ಭಜನಾ ಮಂಡಳಿ ಅಧ್ಯಕ್ಷೆ ಭೋರಮ್ಮ ಕುಂಬಾರ, ಕಾರ್ಯದರ್ಶಿ ಆನಂದ ಕುಲಕರ್ಣಿ, ಅಮೋಘ ಕುಲಕರ್ಣಿ, ಎಲ್.ವ್ಹಿ.ಮಹೇಂದ್ರಕರ, ಡಿ.ಎಲ್.ಹಂಚಾಟೆ, ಸತೀಶ ದಪ್ತೇದಾರ, ಕಾಶಿನಾಥ ಪಾಟೀಲ, ಸಿದ್ದು ನಿಡಗುಂದಿ, ಶಿವಾನಂದ ಸಜ್ಜನ, ಭಜನಾ ಮಂಡಳಿಯ ಶಾರದಾ ಕಸಬೇಗೌಡರ, ಕಾಶಿಬಾಯಿ ಆಲೂರ, ಪದ್ಮಾವತಿ ಹಜೇರಿ, ಕಸ್ತೂರಿಬಾಯಿ ಕುಂಬಾರ, ಮೀನಾಕ್ಷಿ ಕೊಳಕೂರ, ಲಕ್ಷ್ಮೀ ಬಾಯಿ ಸಜ್ಜನ, ಯಮನವ್ವ ದನ್ನೂರ ಮೊದಲಾದವರು ಉಪಸ್ಥಿತರಿದ್ದರು.ಅಮೋಘ ಕುಲಕರ್ಣಿ ಸ್ವಾಗತಿಸಿ, ನಿರೂಪಿಸಿದರು.