ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಡಾ.ಫ.ಗು.ಹಳಕಟ್ಟಿ ಅವರ ಜೀವನ ಎಲ್ಲರಿಗೂ ಆದರ್ಶ ಎಂದು ಎಸ್.ಕೆ.ಕಲಾ ಹಾಗೂ ವಾಣಿಜ್ಯ ವಿಜ್ಞಾನ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ ಹೇಳಿದರು.ಗುರುವಾರ ತಾಳಿಕೋಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪರಿಷತ್ತಿನ ಸಭಾಭವನದಲ್ಲಿ ಏರ್ಪಡಿಸಲಾದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು, ಡಾ.ಫ.ಗು.ಹಳಕಟ್ಟಿಯಂತವರು ಮತ್ತೆ ಮತ್ತೆ ಹುಟ್ಟಿ ಬರಬೇಕಾಗಿದೆ. ಬಸವಣ್ಣನವರ ವಚನಗಳಿಗೆ ಇನ್ನಷ್ಟು ಹೆಚ್ಚಿಗೆ ಬೆಳಕು ನೀಡುತ್ತಾ ಸಾಗಿದ್ದರೆಂದು ಹೇಳಿದರು.
ಇನ್ನೋರ್ವ ಕನ್ನಡ ಸಾಹಿತ್ಯ ಪರಿಷತ್ತಿನ ತಾಳಿಕೋಟೆ ತಾಲೂಕಾಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಮಾತನಾಡಿ, ಪ್ರತಿಭಾವಂತ ಮಕ್ಕಳಿಗೂ ಹಾಗೂ ಪ್ರತಿಯೊಂದು ಶಾಲೆಗೂ ೨೫೦ ವಚನಗಳನ್ನೊಳಗೊಂಡಂತಹ ಪುಸ್ತಕಗಳನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡುವಂತಹ ವ್ಯವಸ್ಥೆ ಕುರಿತು ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗಿದೆ. ಈ ಕಾರ್ಯ ಶೀಘ್ರವೇ ಮಾಡಲು ಮುಂದಾಗಲಿದ್ದೇವೆಂದರು.ಉಪನ್ಯಾಸಕ ಆರ್.ಬಿ.ದಾನಿ ಹಾಗೂ ಅನಿಲ ಇರಾಜ ಅವರು ಮಾತನಾಡಿ, ವಚನಗಳನ್ನು ಮುದ್ರಿಸಿ ಅವುಗಳನ್ನು ಬೆಳಕಿಗೆ ತಂದಂತಹದ್ದು ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಅವರು ಸೈಕಲ್ ಮೇಲೆ ತಿರುಗಾಡಿ ವಚನಗಳನ್ನು ಸಂಗ್ರಹಿಸಿ ಸಾಲ ಮಾಡಿ ವಚನ ಪ್ರಕಟಿಸಿದರು ಎಂದರು.
ಇದೇ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಿವೃತ್ತಿ ಹೊಂದಿದ ಪ್ರೊ.ಆರ್.ವ್ಹಿ.ಜಾಲವಾದಿ ಅವರಿಗೆ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಬಿ.ಭಂಟನೂರ ಹಾಗೂ ಎಂ.ಎ.ಬಾಗೇವಾಡಿ, ಸಿವ್ಹಿ.ಮೆಣಸಿನಕಾಯಿ ಅವರಿಗೆ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಡಾ.ಎ.ಎ.ನಾಲಬಂದ, ಜಿ.ಟಿ.ಘೋರ್ಪಡೆ, ಡಾ.ನಜೀರ ಕೊಳ್ಯಾಳ, ಸಂಗಮೇಶ ಪಾಲ್ಕಿ, ಅಶೋಕ ಚಿನಗುಡಿ, ಸಿದ್ದಾರ್ಥ, ವಿಶ್ವನಾಥ ಗಣಾಚಾರಿ, ಶಿವಾನಂದ ಹೂಗಾರ, ಬಸವರಾಜ ಮದರಕಲ್ಲ, ಎಸ್.ವ್ಹಿ.ಜಾಮಗೊಂಡಿ, ಮಾನಸಿಂಗ್ ಕೊಕಟನೂರ, ಮುತ್ತು ಕಶೆಟ್ಟಿ, ಸಿದ್ದು ಶಿರಶಿ, ಮೊದಲಾದವರು ಉಪಸ್ಥಿತರಿದ್ದರು. ವಿಶ್ವನಾಥ ಗಣಾಚಾರಿ ನಿರೂಪಿಸಿದರು. ಮಹಾಂತೇಶ ಮುರಾಳ ವಂದಿಸಿದರು.