ಅಂಕೋಲಾದಲ್ಲಿ ಸಂಭ್ರಮದ ಸುಗ್ಗಿ ಹಬ್ಬದ ಕಲರವ

| Published : Mar 14 2025, 12:37 AM IST

ಸಾರಾಂಶ

ಈ ವಿಶಿಷ್ಟ ಹೋಳಿ ಹಬ್ಬದ ಆಚರಣೆಯನ್ನು ಸಾವಿರಾರು ಜನರು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಅಂಕೋಲಾ:ಹಾಲಕ್ಕಿಗಳ ಜಾನಪದ, ಸಾಂಸ್ಕೃತಿಕ ವೈಭವ ಪರಿಚಯಿಸುವ ಐತಿಹಾಸಿಕ ಸಾಂಪ್ರದಾಯಿಕ ಸುಗ್ಗಿ ಕುಣಿತವು ಸಂಭ್ರಮ ಸಡಗರದಿಂದ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಗುರುವಾರ ಸಂಜೆ ಅನಾವರಣಗೊಂಡಿತು.

ಇಲ್ಲಿಯ ಕಡಲ ಕಿನಾರೆಯಲಿ ಭಾಸ್ಕರ ಅಸ್ತಂಗತನಾಗುತ್ತಿದ್ದಂತೆ ಹಾಲಕ್ಕಿಗಳ ಸುಗ್ಗಿಯ ಕಲರವದೊಂದಿಗೆ, ಹೋ ಹೋ ಚೋ ... ಎಂಬ ಕುಣಿತದ ಧಾಟಿಯೊಂದಿಗೆ ಬಣ್ಣ ಬಣ್ಣದ ತುರಾಯಿ ಕಟ್ಟಿಕೊಂಡು, ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಮುಖವಾಡ ಧರಿಸಿದ ಕರಡಿಗಳು, ರೂಪಕಗಳು ಪರಿಚಿತರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಾ ಗಮನ ಸೆಳೆದರು.

ಈ ವಿಶಿಷ್ಟ ಹೋಳಿ ಹಬ್ಬದ ಆಚರಣೆಯನ್ನು ಸಾವಿರಾರು ಜನರು ಕಣ್ತುಂಬಿಕೊಂಡು ಸಂಭ್ರಮಿಸಿದರು.

ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯವರು ಊರ ಗೌಡರಾದ ಷಣ್ಮುಖ ಗೌಡ ಅವರಿಂದ ತಾಮ್ರ ಫಲಕದ ಗೌರವ ಪಡೆದು ಗೌರವಿಸಿದರು.

ಅಂಕೋಲಾದಲ್ಲಿ ನಡೆದ ಹೋಳಿ ಸಂಭ್ರಮದ ಮೆರವಣಿಗೆಯಲ್ಲಿ ಕೇಣಿ ಬಂದರು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶಿರೂರು ಗುಡ್ಡ ದುರಂತದ ರೂಪಕ, ರೈತ ಬಂಧು ರೂಪಕ, ದಕಗಷ ಯಜ್ಞ ರೂಪಕ, ಮೂಢನಂಬಿಕೆ ವಿರುದ್ಧ ಜಾಗೃತಿ, ಅಂಕೋಲಾದಲ್ಲಿ ಗೋಗಳ್ಳರ ಅಟ್ಟಹಾಸ, ಸಾಂಬಾಜಿಯ ಕೊನೆಯ ಕ್ಷಣಗಳು ರೂಪಕ, ಅಂಕೋಲಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆ, ಭಾರತಕ್ಕೆ ಕಿರೀಟ, ಕುಂಭಮೇಳಕ್ಕೆ ಬಂದ ನಾಗಾ ಸಾಧುಗಳು, ಕಾಲ್ನಡಿಗೆಯ ರೂಪಕದಲ್ಲಿ ಅಂಕೋಲಾಕ್ಕೆ ಬಂದ ಬೃಹತ್ ಡ್ಯಾಗನ್, ಆದಿ ಮಾನವರು, ಮರಕಾಲು ಕುಣಿತ ಗಮನ ಸೆಳೆದವು.