ಹಾನಗಲ್ಲದಲ್ಲಿ ಡಿ. 7ರಂದು ರೈತ ಚಿಂತನ ಮಂಥನ, ರೈತ ಜಾಗೃತಿ ಕಾರ್ಯಕ್ರಮಡಿ. ೭ರಂದು ಹಾನಗಲ್ಲ ತಾಲೂಕು ಮಟ್ಟದ ರೈತ ಚಿಂತನ ಮಂಥನ, ರೈತ ಜಾಗೃತಿ, ಪ್ರಗತಿಪರ ರೈತರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗಾಗಿ ನಡೆದ ಸಾಮಾನ್ಯ ಲಿಖಿತ ಪರೀಕ್ಷೆ ವಿಜೇತರಿಗೆ ಸನ್ಮಾನ, ಬಹುಮಾನ ವಿತರಣೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಸಂಘಟನೆ) ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಬಳಿಗಾರ ತಿಳಿಸಿದರು.