ಸಾರಾಂಶ
ಸಾವಿರಾರು ವರ್ಷಗಳಿಂದ ವರ್ಣ, ವರ್ಗ, ಜಾತಿ, ಲಿಂಗ, ಧರ್ಮ ತಾರತಮ್ಯಗಳಿಂದ ನಡೆದು ಬಂದ ಮಾನವ ಹಕ್ಕುಗಳ ನಿರಂತರ ದಮನ ಇಂದಿಗೂ ಮುಂದುವರಿಯುತ್ತಿದೆ.
ದಾಂಡೇಲಿ:
ವರ್ಣಭೇದ ನೀತಿ, ಜನಾಂಗೀಯ ಹತ್ಯೆ ಮತ್ತು ಯುದ್ಧದಂತಹ ಹಿಂಸೆಗೆ ಜನ ಬಲಿಯಾಗುತ್ತಿರುವಾಗ ಅವುಗಳಿಗೆ ಪರಿಹಾರವಾಗಿ ಮಾನವ ಹಕ್ಕುಗಳು ಹುಟ್ಟಿಕೊಂಡಿವೆ ಎಂದು ನ್ಯಾಯಾಧೀಶೆ ರೋಹಿಣಿ ಬಸಾಪುರ ನುಡಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಕುಲವನ್ನು ಹಿಂಸೆಯಿಂದ ಪಾರು ಮಾಡುವಲ್ಲಿ ಮಾನವ ಹಕ್ಕುಗಳು ಪ್ರಮುಖ ಪಾತ್ರವಹಿಸುತ್ತಿವೆ ಎಂದರು.ವಕೀಲ ಎಸ್. ಸೋಮಕುಮಾರ ಮಾನವ ಹಕ್ಕುಗಳ ಅಗತ್ಯ, ಮಹತ್ವದ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ, ಸಾವಿರಾರು ವರ್ಷಗಳಿಂದ ವರ್ಣ, ವರ್ಗ, ಜಾತಿ, ಲಿಂಗ, ಧರ್ಮ ತಾರತಮ್ಯಗಳಿಂದ ನಡೆದು ಬಂದ ಮಾನವ ಹಕ್ಕುಗಳ ನಿರಂತರ ದಮನ ಇಂದಿಗೂ ಮುಂದುವರಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಕುಲಕರ್ಣಿ, ಐ.ಸಿ. ನಾಯ್ಕ, ಎಂ.ಸಿ. ಹೆಗಡೆ, ವಕೀಲ ಸಂಘದ ಪದಾಧಿಕಾರಿಗಳು, ಸದಸ್ಯರು, ಕಾಲೇಜ್ ಸಿಬ್ಬಂದಿ ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಾವ್ಯಾ ಭಟ್ ಪ್ರಾರ್ಥಿಸಿದರು. ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಸೀರ ಅಹಮ್ಮದ್ ಜಂಗೂಭಾಯಿ ಸ್ವಾಗತಿಸಿದರೆ, ವಕೀಲ ಆರ್.ವಿ. ಹಡೆಪ್ಪನವರ ನಿರೂಪಿಸಿದರು. ಡಾ. ವಿ.ಎನ್. ಅಕ್ಕಿ ವಂದಿಸಿದರು.