ಸಾರಾಂಶ
ಚಿಕ್ಕಮಗಳೂರಿನ ಐಎಂಎ ಹಾಲ್‌ನಲ್ಲಿ ಡಾಕ್ಟರ್ಸ್ ಡೇ,
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುವೈದ್ಯಕೀಯ ಲೋಕದಲ್ಲಿ ಸೇವೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಮಾತ್ರ ಸಾರ್ಥಕ ಬದುಕು ನಮ್ಮದಾಗಲಿದೆ ಎಂದು ಕರ್ನಾಟಕ ಖಾಸಗೀ ವೈದ್ಯಕೀಯ ಸಂಸ್ಥೆ ಅಧ್ಯಕ್ಷ ಡಾ. ಡಿ.ಎಲ್. ವಿಜಯ್‌ಕುಮಾರ್ ಹೇಳಿದರು.
ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಡಾ.ಬಿ.ಸಿ.ರಾಯ್ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ವೈದ್ಯ ವೃಂದ ಬಹಳಷ್ಟು ಸೇವೆ ಸಲ್ಲಿಸುವ ಮೂಲಕ ಅತ್ಯುತ್ತಮವಾಗಿದೆ. ದಾದಿಯರ ಪ್ರೇರಣೆ ಫ್ಲಾರೆನ್ಸ್ ನೈಟಿಂಗೇಲ್ ಎಂದಾದರೆ, ವೈದ್ಯರ ಪಿತಾಮಹ ಡಾ.ಬಿ.ಸಿ.ರಾಯ್ ಎಂದ ಅವರು, ಆ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಅವರ ಸ್ಮರಣಾರ್ಥ ವೈದ್ಯರ ದಿನಾಚರಣೆ ಆಚರಿಸಲಾಗುತ್ತದೆ ಎಂದರು.ಜನಸಾಮಾನ್ಯರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅಪಾರವಾದುದು. ವೈದ್ಯರ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುವವರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ರೋಗಿಗಳನ್ನು ಕಾಳಜಿಯಿಂದ ಆರೈಕೆ ಮಾಡಿ ಮತ್ತೊಮ್ಮೆ ಬದುಕುವಂತೆ ಮಾಡುವ ಶಕ್ತಿ ವೈದ್ಯ ಲೋಕಕ್ಕಿದೆ ಎಂದು ತಿಳಿಸಿದರು.ಭಾರತದಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಡಾ.ಬಿ.ಸಿ.ರಾಯ್ ನೆನಪಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಕುತೂಹಲಕರ ವಿಚಾರವೆಂದರೆ ಅವರ ಜನನ ಹಾಗೂ ಮರಣ ಜುಲೈ 1 ಒಂದೇ ದಿನ ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್‌ಬಾಬು ಮಾತನಾಡಿ, ಆಕಸ್ಮಿಕ ಅಥವಾ ಅಪಘಾತ ಗಳಿಂದ ಸಂಭವಿಸುವ ಪ್ರಕರಣಗಳಿಂದ ಮನುಷ್ಯನ ಅಂಗಾಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಉದ್ಭವಿಸಲಿದೆ. ಇಂತಹ ತುರ್ತು ಪರಿಸ್ಥಿತಿಗಳಲ್ಲಿ ವೈದ್ಯರು ಸ್ಪಂದಿಸಿ ಪ್ರಾಣ ಉಳಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಚೈತನ್ಯ ಸವೂರ್, ಸಂಘದಿಂದ ವೈದ್ಯರ ಕುಟುಂಬ ಗಳಿಗೆ ಕ್ರೀಡಾಕೂಟ ಆಯೋಜಿಸಿ ಯಶಸ್ವಿಗೊಂಡಿದೆ. ಸಾಂಸ್ಕೃತಿಕ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.ಇದೇ ವೇಳೆ ವೈದ್ಯಕೀಯ ವೃತ್ತಿ ಹಲವಾರು ದಶಕಗಳಿಂದ ಸೇವೆ ಸಲ್ಲಿಸಿರುವ ಹಿರಿಯ ವೈದ್ಯ ಡಾ. ಟಿ.ವಿ.ರಾಮಕೃಷ್ಣ, ಡಾ. ಎಂ.ಜಿ.ಶ್ರೀಧರ್, ಡಾ. ಎಲ್.ವಿ.ಚಂದ್ರಕಾಂತ್ ಅವರಿಗೆ ಸಂಘದಿಂದ ದಿನಾಚರಣೆ ಪ್ರಯುಕ್ತ ಗೌರವಿಸಲಾಯಿತು. ಬಳಿಕ ಮಕ್ಕಳಿಂದ ಭರತನಾಟ್ಯ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆ ಜರುಗಿತು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕಾರ್ತೀಕ ವಿಜಯ್, ವೈದ್ಯರಾದ ಡಾ. ಶಶಿಕಲಾ, ಡಾ. ಪ್ಯಾಟ್ರಿಕ್, ತ್ರಿವೇಣಿ ಅಶ್ವಥ್ ಬಾಬು ಹಾಗೂ ವೈದ್ಯರು ಕುಟುಂಬದವರು ಭಾಗಿಯಾಗಿದ್ದರು. 1 ಕೆಸಿಕೆಎಂ 2ಚಿಕ್ಕಮಗಳೂರಿನ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಡಾ.ಬಿ.ಸಿ.ರಾಯ್ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಡಾ. ಡಿ.ಎಲ್. ವಿಜಯಕುಮಾರ್ ಉದ್ಘಾಟಿಸಿದರು. ಡಾ. ಅಶ್ವತ್ ಬಾಬು, ಕಾರ್ತಿಕ್ ವಿಜಯ್ ಇದ್ದರು.