ಸಾರಾಂಶ
ತಾಲೂಕಿನ ನವಲಕಲ್ ಬೃಹನ್ಮಠದ ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳ 27ನೇ ಜಾತ್ರಾ ಮಹೋತ್ಸವ ಮತ್ತು ಮಯೂರಶಿಲೆ ನಾಡೋತ್ಸವ ಅಂಗವಾಗಿ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಲಾಯಿತು.
ಸಿರವಾರ: ತಾಲೂಕಿನ ನವಲಕಲ್ ಬೃಹನ್ಮಠದ ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳ 27ನೇ ಜಾತ್ರಾ ಮಹೋತ್ಸವ ಮತ್ತು ಮಯೂರಶಿಲೆ ನಾಡೋತ್ಸವ ಅಂಗವಾಗಿ ಕ್ರಿಕೆಟ್ ಟೂರ್ನಮೆಂಟ್‌ಗೆ ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಶ್ರೀಗಳು ಜಾತ್ರಾ ಮಹೋತ್ಸವದ ಹೆಸರಿನಲ್ಲಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳವುದರಿಂದ ನಮ್ಮ ಭಾಗದ ಯುವಕರಲ್ಲಿ ಒಳ್ಳೆಯ ಭಾಂದವ್ಯ ಬೆಳೆಯಲು ಸಹಕಾರಿಯಾಗಿದ್ದು, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ಜೊತೆಗೆ ದೈಹಿಕವಾಗಿ ಸದೃಢವಾಗಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.ಟೂರ್ನಿಯಲ್ಲಿ 24 ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನ 30 ಸಾವಿರ ರು., ದ್ವಿತೀಯ ಬಹುಮಾನ 20 ಸಾವಿರ ರು. ನಗದು ಜೊತೆಗೆ ಟ್ರೋಫಿ ನೀಡಲಾಗುತ್ತದೆ.
ಬಸವರಾಜ ಮಂತ್ರಿ, ಅರುಣ್ ಕುಮಾರ, ಶಿವಾನಂದ, ರವಿ ಸಾಹುಕಾರ, ಅನೀಲ ಕುಮಾರ ಹೂಗಾರ, ಶಾಂತಪ್ಪ ಪಿತಗಲ, ರಾಮು ದಾಸರ, ಅಮರೇಶ ಉಪ್ಪಾರ ಸೇರಿದಂತೆ ಕ್ರೀಡಾಪಟುಗಳು ಭಾಗವಹಿಸಿದ್ದರು.