ಇಂದು ಮೂಡುಬಿದಿರೆಯ ಶಿರ್ತಾಡಿಯಲ್ಲಿ ಭುವನ ಜ್ಯೋತಿ ಲಾ ಕಾಲೇಜು ಉದ್ಘಾಟನೆ

| Published : Aug 10 2024, 01:47 AM IST

ಇಂದು ಮೂಡುಬಿದಿರೆಯ ಶಿರ್ತಾಡಿಯಲ್ಲಿ ಭುವನ ಜ್ಯೋತಿ ಲಾ ಕಾಲೇಜು ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಭುವನ ಜ್ಯೋತಿ ಎಜುಕೇಶನ್ ಟ್ರಸ್ಟ್ ಪ್ರಾಯೋಜಿತ ನೂತನ ಕಾನೂನು ಕಾಲೇಜು ಕರ್ನಾಟಕ ರಾಜ್ಯ ಕಾನೂನು ವಿವಿಗೆ ಸಂಯೋಜಿತವಾಗಿ ದೆಹಲಿಯ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮಾನ್ಯತೆ ಪಡೆದಿದೆ.

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಮೊದಲ ಲಾ ಕಾಲೇಜು ಎನ್ನುವ ಹಿರಿಮೆಯ ಭುವನ ಜ್ಯೋತಿ ಇನ್‌ಸ್ಟಿಟ್ಯೂಟ್‌ ಆಫ್‌ ಲೀಗಲ್‌ ಸ್ಟಡೀಸ್ ಶಿರ್ತಾಡಿಯಲ್ಲಿ ಆ.10ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಆಂಧ್ರಪ್ರದೇಶದ ರಾಜ್ಯಪಾಲ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮೂಡುಬಿದಿರೆ ಮೂಲದ ಎಸ್. ಅಬ್ದುಲ್ ನಝೀರ್ ಕಾಲೇಜು ಉದ್ಘಾಟಿಸುವರು. ಭುವನ ಜ್ಯೋತಿ ಎಜುಕೇಶನ್ ಟ್ರಸ್ಟ್ ಪ್ರಾಯೋಜಿತ ನೂತನ ಕಾನೂನು ಕಾಲೇಜು ಕರ್ನಾಟಕ ರಾಜ್ಯ ಕಾನೂನು ವಿವಿಗೆ ಸಂಯೋಜಿತವಾಗಿ ದೆಹಲಿಯ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮಾನ್ಯತೆ ಪಡೆದಿದೆ.

ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ. ಕೃಷ್ಣ ಎಸ್. ದೀಕ್ಷಿತ್, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿಯ ಉಪ ಕುಲಪತಿ ಪ್ರೊ.ಡಾ.ಸಿ. ಬಸವರಾಜು, ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ವಿಶಾಲ್ ರಘು ಎಚ್.ಎಲ್., ದ.ಕ ಜಿಲ್ಲಾ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಮತ್ತು ಸೆಶನ್ಸ್ ಜಡ್ಜ್ ರವೀಂದ್ರ ಜೋಶಿ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಟ್ರಸ್‌ನ ಆರ್. ಪ್ರಶಾಂತ್ ಡಿಸೋಜಾ ತಿಳಿಸಿದ್ದಾರೆ.