ಸಾರಾಂಶ
ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲೂ ನಾಗರಪಂಚಮಿ ಆಚರಿಸಲಾಯಿತು.
ಉಪ್ಪಿನಂಗಡಿ: ನಾಗರಪಂಚಮಿಯ ಶುಕ್ರವಾರದಂದು ಉಪ್ಪಿನಂಗಡಿಯ ವಿವಿದೆಡೆ ನಾಗಬನಗಳಲ್ಲಿ ಶ್ರದ್ಧಾಭಕ್ತಿಯಿಂದ ನಾಗದೇವರನ್ನು ಆರಾಧಿಸಲಾಯಿತು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ನಾಗಬನದಲ್ಲಿ ಭಾರೀ ಸಂಖ್ಯೆಯ ಭಕ್ತಾದಿಗಳಿಂದ ಶ್ರೀ ನಾಗದೇವರಿಗೆ ಸಿಯಾಳಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಆಶ್ಲೇಷ ಬಲಿ ಪೂಜೆ ನೆರವೇರಿತು. ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ವನಭೋಜನದಲ್ಲಿರುವ ನಾಗಬನದಲ್ಲಿಯೂ ನೂರಾರು ಭಕ್ತರ ಉಪಸ್ಥಿತಿಯಲ್ಲಿ ನಾಗ ದೇವರಿಗೆ ವಿವಿಧ ಅಭಿಷೇಕಾಧಿ ಪೂಜೆ ಪುನಸ್ಕಾರಗಳು ನೆರವೇರಿತು. ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲೂ ನಾಗರಪಂಚಮಿ ಆಚರಿಸಲಾಯಿತು.