ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತ ಸಶಕ್ತ ಮತ್ತು ಸ್ವಾವಲಂಬಿ ರಾಷ್ಟ್ರವಾಗುವತ್ತ ದಾಪುಗಾಲಿಟ್ಟಿದ್ದು, ಜಾಗತಿಕ‌‌ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನಮಾನ ದೊರೆತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ಪಟ್ಟರು.

ಕನ್ನಡಪ್ರಭ ವಾರ್ತೆ ಯಲಹಂಕ

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತ ಸಶಕ್ತ ಮತ್ತು ಸ್ವಾವಲಂಬಿ ರಾಷ್ಟ್ರವಾಗುವತ್ತ ದಾಪುಗಾಲಿಟ್ಟಿದ್ದು, ಜಾಗತಿಕ‌‌ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನಮಾನ ದೊರೆತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ಪಟ್ಟರು.

ಯಲಹಂಕ ನಗರ ಮಂಡಲ ಬಿಜೆಪಿ ವತಿಯಿಂದ ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ‌ ಆಯೋಜಿಸಿದ್ದ ಸೇವಾ ಸಂಕಲ್ಪ ಮತ್ತು ಸೇವಾ ಸೇತು ಅಭಿಯಾನ ಮತ್ತು ವಿವಿಧ ಪ್ರಕೋಷ್ಟಗಳ ವಿಶೇಷ ಸಭೆ ಉದ್ದೇಶಿಸಿ ಮಾತನಾಡಿದರು. ಗುಜರಾತ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಆರಂಭವಾದ ಮೋದಿ ಅವರ‌ ಆಡಳಿತಾತ್ಮಕ ಪಯಣ ಸುದೀರ್ಘವಾಗಿ ಸಾಗಿ ಬಂದಿದ್ದು, ಅವರ ಸಾರ್ವಜನಿಕ ಜೀವನಕ್ಕೆ ಇದೀಗ 25 ಸಾರ್ಥಕ ವಸಂತಗಳು ತುಂಬುತ್ತಿವೆ ಎಂದು ಹೇಳಿದರು.

ಶಾಸಕ ಎಸ್.ಆರ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ರಕ್ಷಣೆ, ಅಭಿವೃದ್ಧಿ ಮತ್ತು ಬಲಿಷ್ಠ ಭಾರತ ನಿರ್ಮಾಣದ ನಿಟ್ಟಿನಲ್ಲಿ ದೇಶಕ್ಕೆ ಮೋದಿ ಅವರ ನಾಯಕತ್ವ ಮುಂದಿನ ಹತ್ತಾರು ವರ್ಷಗಳ ಕಾಲ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಈ ವೇಳೆ ನಿವೃತ್ತ ಸೈನಿಕರ ಪ್ರಕೋಷ್ಠ, ವೈದ್ಯಕೀಯ ಪ್ರಕೋಷ್ಟ, ಬೀದಿ ಬದಿ ವ್ಯಾಪಾರಿಗಳ ಪ್ರಕೋಷ್ಟ, ಸಾಮಾಜಿಕ ಜಾಲತಾಣ ಪ್ರಕೋಷ್ಟ, ಕಲಾ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ಸೇರಿದಂತೆ ವಿವಿಧ ಪ್ರಕೋಷ್ಟಗಳ ಸಂಚಾಲಕರು ಮತ್ತು ವಿವಿಧ ಮೋರ್ಚಾಗಳ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಫಲಾನುಭವಿಗಳ ಪ್ರಕೋಷ್ಟದ ರಾಜ್ಯ ಸಂಚಾಲಕ ದುರ್ಗೇಶ್, ಜಿಲ್ಲಾ ಸಂಚಾಲಕಿ ಆಶಾಲೋಹಿತ್, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಮುನಿರಾಜು, ಪ್ರಧಾನ ಕಾರ್ಯದರ್ಶಿ ವಿ.ಎಂ.ಈಶ್ವರ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಓಬಿಸಿ‌ ಮೋರ್ಚಾ ಅಧ್ಯಕ್ಷ ವಿ.ಎಂ.ಚಂದ್ರಯ್ಯ, ಎಸ್.ಸಿ.ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಬೃಂದಾವೀರೇಶ್, ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ವಾರ್ಡ್ ಅಧ್ಯಕ್ಷರುಗಳಾದ ವಿ.ವಿ.ರಾಮಮೂರ್ತಿ, ನರಸಿಂಹಮೂರ್ತಿ, ಓಂ ರವೀಂದ್ರ, ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ಮಧುಸೂದನ್, ಎಸ್.ಸೋಮಶೇಖರ್, ಅಟ್ಟೂರು ವಿಶ್ವ, ಸುನಿಲ್ ಕುಮಾರ್, ಪ್ರಭಾ, ಶಿವಕುಮಾರ್‌ ಇದ್ದರು.