ಸಾರಾಂಶ
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಅರಣ್ಯ ಕಾಯುವ ಹೊರಗುತ್ತಿಗೆಗೆ ಸಿಬ್ಬಂದಿಗಳಿಗೆ ವೇತನ ಪಾವತಿ ವಿಚಾರದಲ್ಲಿ ಹಿಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಾ.ನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮೈಸೂರು ಗುತ್ತಿಗೆದಾರರ ಲೋಪದ ಕುರಿತು ಹಾಗೂ ನೌಕರರಿಗೆ ಮಾರ್ಚ್‌ನಲ್ಲೂ ವೇತನ ಪಾವತಿಯಾಗಿಲ್ಲ ಎಂಬದನ್ನು ಮರೆಮಾಚಿ ತನಿಖೆಗಾಗಿ ನೇಮಕಗೊಂಡ ಉನ್ನತ ತನಿಖಾ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ನಾನಾ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಹೊರಗುತ್ತಿಗೆ ಸಿಬ್ಬಂದಿಗಳಿಗೆ ಕಳೆದ 2023 ಮತ್ತು 2024ನೇ ಸಾಲಿನಿಂದ ಕ್ರಮವಾಗಿ ₹30 ಲಕ್ಷ, ₹31 ಲಕ್ಷಸೇರಿ ₹61 ಲಕ್ಷ ಅಧಿಕ ಬಾಕಿ ಮೊತ್ತವನ್ನು ಗುತ್ತಿಗೆದಾರರಿಗೆ ಸರ್ಕಾರ, ಹಿರಿಯ ಅಧಿಕಾರಿಗಳು ಸಕಾಲದಲ್ಲಿ ಪಾವತಿಸಿದ್ದರೆ ಹೊರಗುತ್ತಿಗೆ ನೌಕರರು ಅರಣ್ಯ ಕಾಯುವುದನ್ನ ಬಿಟ್ಟು ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸುತ್ತಿರಲಿಲ್ಲ. ಗುತ್ತಿಗೆದಾರರು ಕರಾರು ಒಪ್ಪಂದದ ಪ್ರಕಾರ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದು ವಿಳಂಬವಾದಲ್ಲಿ 6 ತಿಂಗಳು 10ರೊಳಗೆ ಸಂಬಳ ನೀಡಬೇಕು ಎಂಬ ಷರತ್ತುಗಳೊಂದಿಗೆ ಹಿಂದಿನ ಡಿಸಿಎಫ್ ಸಂತೋಷ್ ಕುಮಾರ್ ಮೈಸೂರಿನ ರಂಗನಾಥ್‌ಗೆ 2024ರ ಆಗಸ್ಟ್16 ರಲ್ಲಿ ಷರತ್ತು ಬದ್ದ ಟೆಂಡರ್ ನೀಡಲಾಗಿತ್ತು. ಗುತ್ತಿಗೆದಾರರು ನಿಯಮ ಉಲ್ಲಂಘಿಸಿದ್ದು, ನೌಕರರು ಸಂಕಷ್ಟಕ್ಕಿಡಾಗುವಂತಾದರೂ ತನಿಖಾ ಸಮಿತಿ ಇದನ್ನು ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ,
ತನಿಖೆ ಸಮಿತಿ ಎಪ್ರಿಲ್, ಮೇನಲ್ಲಿ ಸಂಬಳವಾಗಿಲ್ಲ, ಅನುದಾನ ಲಭ್ಯತೆ ಇದ್ದರೂ ವೇತನ ಪಾವತಿಗೆ ವಿಳಂಬ ನೀತಿ ಎಂದು ಉಲ್ಲೇಖಿಸಿದ್ದು ಮಹದೇಶ್ವರ ವನ್ಯಧಾಮಕ್ಕೆ ಏಪ್ರಿಲ್ ಅಂತ್ಯಕ್ಕೆ ಹಣ ಬಿಡುಗಡೆ ಪತ್ರ ಬಂದಿದ್ದರೂ ಹಣ ಖಾತೆಗೆ ಸಂದಾಯವಾಗಿರುವುದು ಮೇ 2ರಂದು. ₹61 ಲಕ್ಷಕ್ಕೂ ಅಧಿಕ ಬಾಕಿ ಹೊರಗುತ್ತಿಗೆ ನೌಕರರಿಗೆ ಸಂಬಳ ಬಾಕಿ ಇದೆ. 2025-26ನೇ ಸಾಲಿಗೂ ಹಣ ಬಿಡುಗಡೆ ಮಾಡಿಸಿಕೊಡಬೇಕೆಂದು ಈಗಿನ ಅಧಿಕಾರಿಗಳು ಮೇ 12ರಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. ಆ ಪತ್ರ ಸದರಿ ಕಚೇರಿಯಲ್ಲಿ ಜೂನ್ 5ರಂದು ಸ್ವೀಕೃತಿ ಮಾಡಿಕೊಂಡ ವಿಚಾರ ಪರಿಗಣಿಸಿಲ್ಲ, ಅರಣ್ಯ ಸಂಕ್ಷಣಾಧಿಕಾರಿಗಳು ಮಾಚ್ 13ರಂದು ಗುತ್ತಿಗೆದಾರರಿಗೂ ನೋಟಿಸ್ ಜಾರಿಗೊಳಿಸಿ ಏಪ್ರಿಲ್‌ನಲ್ಲಿ 7 ವಲಯ ಅರಣ್ಯಾಧಿಕಾರಿ ಖಾತೆಗೆ ಹೊರಗುತ್ತಿಗೆ ನೌಕರರ ಸಂಬಳದ ಬಿಲ್ ಪಾವತಿಸಲು ಸೂಚಿಸಿದ್ದು ಗುತ್ತಿಗೆದಾರರು ಈ ನಿಯಮ ಪಾಲಿಸದಿರುವುದನ್ನು ಮರೆಮಾಚಿದೆ.ಚಾ.ನಗರ ಅಧಿಕಾರಿ ಹಾಗೂ ಹಿಂದಿನ ಮಹದೇಶ್ವರ ವನ್ಯಧಾಮದ ಅಧಿಕಾರಿಗಳ ಲೋಪದ ಕುರಿತುಸರ್ಕಾರಕ್ಕೆ ವರದಿ ಸಲ್ಲಿಸದೆ ಸತ್ಯ ಮರೆಮಾಚಿದ ಬಗ್ಗೆ ತನಿಖಾ ಸಮಿತಿಯಲ್ಲಿ ಚಾ.ನಗರ ಅಧಿಕಾರಿಯನ್ನೇ ನೇಮಿಸಿದ ಬಗ್ಗೆ ಹಾಗೂ ಹಿಂದಿನ ಅಧಿಕಾರಿಗೆ ಪುನಃ ಪ್ರಭಾರಿವಹಿಸಿ ಮಹದೇಶ್ವರ ವನ್ಯಧಾಮಕ್ಕೆ ಕಳುಹಿಸಿರುವುದು ಯಾರನ್ನು ರಕ್ಷಿಸಲು ಹಾಗೂ ಯಾರ ತಪ್ಪನ್ನು ಮರೆಮಾಚಲು ಎಂದು ಖುದ್ದು ಶಾಸಕರೇ ಆಕ್ಷೇಪ ವ್ಯಕ್ತಪಡಿಸಿರುವುದು ಚರ್ಚೆಗೆ ಕಾರಣವಾಗಿದೆ.ಗಸ್ತು ಸಂಚರಿಸಿದ 1 ವರ್ಷದ ಡೈರಿ ಸಮೇತ ಹಲವು ದಾಖಲೆ ಕೋರಿದ ಕಾರ್ಯದರ್ಶಿ:
ಪ್ರಕರಣದ ಸಂಪೂರ್ಣ ತನಿಖೆಗಾಗಿ ನೇಮಕಗೊಂಡ ತನಿಖಾ ತಂಡ ಸರ್ಕಾರದ ನಿಯಮವನ್ನೇ ಸಮರ್ಪಕ ರೀತಿ ಪಾಲಿಸಿಲ್ಲ. ಒಂದೆಡೆ ಸಂಬಳ ಪಾವತಿ, ₹61 ಲಕ್ಷ ಹಣ ನೀಡದ ಬಗ್ಗೆ, ಮಹದೇಶ್ವರ ವನ್ಯಧಾಮದಲ್ಲಿ ಇರುವ ಗುತ್ತಿಗೆ ನೌಕರರ ಸಂಖ್ಯೆ, ಅವರಿಗೆ ಯಾವ ಯಾವ ತಿಂಗಳ ವೇತನ ನೀಡಬೇಕು ಎಂಬದರ ಬಗ್ಗೆ ಬ್ಯಾಂಕ್ ದಾಖಲೆ ಒದಗಿಸುವಂತೆ ಬೀಟ್ ಫಾರೆಸ್ಟರ್, ಎಸಿಎಫ್ , ಆರ್ ಎಫ್ ಹಾಗೂ ಡಿಸಿಎಫ್ 1 ವರ್ಷದ ಡೈರಿ, 1 ವರ್ಷದಲ್ಲಿ ಗಸ್ತು ನಡೆಸಿದ್ದ ತಜ್ಞರ ಕುರಿತ ಸ್ವಿಪ್ಟ್ ಮಾಹಿತಿ ದತ್ತಾಂಶ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಡ್ರಾಯಿಂಗ್ ಆಫೀಸರ್ ಗಳಿಗೆ ಹಣ ಬಿಡುಗಡೆಯಾದ ದಿನಾಂಕ, ಹೊರಗುತ್ತಿಗೆ ನೌಕರರಿಗೆ ಸಂಬಳ ತಲುಪಿದ ದಿನಾಂಕ ಮತ್ತು ಕೆ 2ನಲ್ಲಿ ಹಣ ಬಿಡುಗಡೆಯಾದ ದಾಖಲೆ ಸಮೇತ, ಮೊಬೈಲ್ ಟವರ್ ಸಂಪರ್ಕ ಕುರಿತು ಮತ್ತು ಕಳ್ಳಬೇಟಿ ಶಿಬಿರಗಳ ಜಿಪಿಎಸ್ ಮಾಹಿತಿ ಸಹಿತ ವರದಿಯನ್ನು 10 ದನದೊಳಗೆ ಸಲ್ಲಿಸಿ ಎಂದು ಜೂನ್ 30ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಶಿವಪ್ರಕಾಶ್ ಪತ್ರ ಬರೆದಿದ್ದರೂ ಸಹ ತನಿಖಾ ತಂಡ ಕೆಲ ಮಾಹಿತಿಯನ್ನು ಮರೆಮಾಚಿ ವರದಿ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.ಹಿಂದಿನ ಡಿಸಿಎಫ್‌ಗೆ ಪ್ರಭಾರಿ ಹೊಣೆ ಬಗ್ಗೆ ಆಕ್ಷೇಪಹಿಂದಿನ ಡಿಸಿಎಫ್ ಅವಧಿಯಲ್ಲಿಯೂ ₹61 ಲಕ್ಷ ಸಂಬಳ ಹೊರಗುತ್ತಿಗೆ ನೌಕರರಿಗೆ ಪಾವತಿಸಬೇಕಿತ್ತು. ಹಾಗಾಗಿ ಇದನ್ನು ಮರೆಮಾಚಿರುವ ಅಧಿಕಾರಿ ಸಂತೋಷ್ ಕುಮಾರ್‌ರನ್ನು ಪುನಃ ಮಹದೇಶ್ವರ ವನ್ಯಧಾಮದ ಪ್ರಭಾರಿಯಾಗಿ ನೇಮಕಗೊಳಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಹೈಲೆವಲ್ ತನಿಖಾ ತಂಡದ ವಿಚಾರಣೆಯಲ್ಲಿ ಮೇ 14, 27ರಂದು 2 ಪತ್ರಗಳನ್ನು ಕಡ್ಡಾಯ ರಜೆ ಮೇಲೆ ತೆರಳಿರುವ ಡಿಸಿಎಫ್ ಚಾ.ನಗರ ಮುಖ್ಯ ಅರಣ್ಯಾಧಿಕಾರಿ ಹೀರಲಾಲ್‌ಗೆ ಬರೆದಿರುವ ವಿಚಾರ ಹಾಗೂ ಆ ಪತ್ರದಲ್ಲಿ ನೌಕರರ ಸಂಬಳ ವಿತರಣೆಗೆ ಅನುಮೋದನೆ ಹಾಗೂ ₹61 ಲಕ್ಷ ಬಿಡುಗಡೆಗೆ ಕ್ರಮಕ್ಕೆ ಮನವಿ ಮಾಡಿದ್ದರೂ ಪ್ರಸ್ತುತ ಪ್ರಭಾರಿಯಾಗಿ ಮಹದೇಶ್ವರ ವನ್ಯಧಾಮದ ಡಿಸಿಎಫ್ ಸಂತೋಷ್ ಕುಮಾರ್ ಚಾರ್ಜ್ ಪಡೆಯವವರೆಗೂ ನೌಕರರ ಸಂಬಳಕ್ಕೆ ಕ್ರಿಯಾ ಯೋಜನೆ ಅನುಮೋದನೆ ನೀಡದಿರುವುದನ್ನ ಉನ್ನತ ತನಿಖಾ ಸಮಿತಿಯ ಸರ್ಕಾರಕ್ಕೆ ಬಹಿರಂಗಪಡಿಸಿಲ್ಲ. ವರದಿಯಲ್ಲಿ ಈ ಅಂಶ ಉಲ್ಲೇಖಿಸಿಲ್ಲ. ಕೆಡಿಪಿ ಸಭೆಯಲ್ಲೂ ಶಾಸಕ ಕೃಷ್ಣಮೂರ್ತಿ ಪ್ರಸ್ತಾಪಿಸಿದ್ದಾರೆ.