ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಜಾ ಕೈದಿಗಳು ಮೂವರು ಪರಾರಿಯಗಿರುವ ಪ್ರರಣದಲ್ಲಿ ಸಂತೋಷ ಎಂಬ ಕೈದಿಯ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

 ಕಲಬುರಗಿ : ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಜಾ ಕೈದಿಗಳು ಮೂವರು ಪರಾರಿಯಗಿರುವ ಪ್ರರಣದಲ್ಲಿ ಸಂತೋಷ ಎಂಬ ಕೈದಿಯ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಪೊಲೀಸರು ಬುಧವಾರ ನಸುಕಿನಲ್ಲಿ ಕಾಲಿಗೆ ಗುಂಡು ಹೊಡೆದು ಕೈದಿಯೋರ್ವನನ್ನು ಬಂಧಿಸಿದ್ದಾರೆ.

ಮಂಂಳವಾರ ನಸುಕಿನಲ್ಲಿ ಮೂವರು ಕೈದಿಗಳು ಪರಾರಿಯಾಗಿದ್ದರು. ಈ ಪೈಕಿ ಹುಮನಾಬಾದ್‌ನಲ್ಲಿ ಬೀದರ್‌ ಪೊಲೀಸರು ಓರ್ವವನ್ನು ಬಂಧಿಸಿದ್ದರು.

ಇನ್ನೋರ್ವ ಸಜಾ ಕೈದಿ ಸಂತೋಷ ಈತ ಕಪನೂರಲ್ಲಿದ್ದಾನೆಂಬ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಬಂಧನನಕ್ಕೆ ತೆರಳಿದಾಗ ಆತ ಪೊಲೀಸ್‌ ತಂಡದ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ಹಂತದಲ್ಲಿ ಪೊಲೀಸರ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಕೈದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಂದ್ರ ಕಾರಾಗೃಹದಿಂದ ಗೋಡೆಗಳನ್ನು ಹಾರಿ ಮಂಗಳವಾರ ಬೆಳಗ್ಗೆ 4. 35 ರ ಹೊತ್ತಿಗೆ ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಇಸ್ಲಾಂಪುರದ ಮಸ್ತಾನ್, ಔರಾದ್ ತಾಲೂಕಿನ ಸಂತಾಪುರ ಗ್ರಾಮದ ಸಂತೋಷ ಬಸಪ್ಪ ಹಾಗೂ ಬೀದರ್‌ ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ಭೀಮರಾಯ ಪರಾರಿಯಾಗಿದ್ದರು.

ಪರರಾರಿಯಾಗಿದ್ದ ಸಜಾ ಕೈದಿಗಳ ಪತ್ತೆಗೆ ಬೀದರ್‌, ಯಾದಗಿರಿ, ಕಲಬುರಗಿ ಪೊಲೀಸ್‌ ಅಂತರ್‌ ಜಿಲ್ಲಾ ತಂಡ ರಚಿಸಿ ಬೆನ್ನು ಹತ್ತಲಾಗಿತ್ತು. ಇದೀಗ ಕಲಬುರಗಿ ಪೊಲೀಸರಿಗೆ ದೊರಕಿದ ಖಚಿತ ಮಾಹಿತಿಯನ್ನಾಧರಿಸಿ ನಡೆದ ಕಾರ್ಯಾಚರಣೆಯಲ್ಲಿ ಕಪನೂರ್‌ನಲ್ಲಿ ಅವಿತಿದ್ದ ಸಜಾಕೈದಿ ಸಂತೋಷನನ್ನು ಕಾಲಿಗೆ ಗುಂಟು ಹೊಡೆದು ಬಂಧಿಸಲಾಗಿದೆ.

ಮಾರಣಾಂತಿಕ ಹಲ್ಲೆಗೆ ಮುಂದಾದಾಗ ಗುಂಡು

ಪೊಲೀಸ್‌ ತಂಡ ತನ್ನ ಬಂಧನಕ್ಕೆ ಸುತ್ತುವರಿದಿದ್ದನ್ನು ಕಂಡು ಸಂತೋಷ ಹಲ್ಲೆಗೆ ಮುಂದಾಗಿದ್ದಾನೆ. ಪೊಲೀಸ್‌ರು ತಕ್ಷಣ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ನಮ್ಮ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾದಾಗ ನಾವು ಕಾಲಿಗೆ ಗುಂಡು ಹೊಡೆದಿದ್ದಾಗಿ ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡು ಹೊಡೆದ ಸ್ಥಳಕ್ಕೆ ಕಮೀಷನರ್‌ ಡಾ. ಶರಣಪ್ಪ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೈದಿಗಳು ಕೇಂದ್ರ ಕಾರಾಗೃಹದ ಬೃಹದಾಕಾರದ ಹಾಗೂ ಆತೀ ಎತ್ತರದ ಗೋಡೆಯನ್ನು ಬಟ್ಟೆಗಳಿಂದ ಕಟ್ಟಿ ಹಾರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಸಿಸಿಟಿವಿ ಕೆಮೆರಾದಲ್ಲಿ ಸಂಪೂರ್ಣ ಅವರ ಪರಾರಿ ಚಿತ್ರಣ ಸೆರೆಯಾಗಿದೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಜಮಖಾನಿ, ಬಟ್ಟೆ, ದೋತಿ ಇವನ್ನೆಲ್ಲ ಒಂದಕ್ಕೊಂದು ಕಟ್ಟಿ ಕಾರಾಗೃಹ ಗೋಡೆಯ ಬೇಲಿಗೆ ಆನಿಸಿಕೊಂಡು ಕೈದಿಗಳು ಕೆಳಗಿಳಿದು ಪರಾರಿಯಾಗಿರೋದು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೈದಿಗಳು ಜೈಲಿನ ಭದ್ರತಾ ಗೋಡೆ ಹಾರಿ ಪರಾರಿಯಾಗಿರೋದೆ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಹೀಗೂ ಪರಾರಿಯಾಗಬಹುದೆ ಎಂದು ಅಚ್ಚರಿಪಡುವಂತಿದೆ. ಸೆಂಟ್ರಲ್ ಜೈಲಿನಿಂದ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳು ಮಂಗಳವಾರ ನಸುಕಿನ ಜಾವ ಪರಾರಿಯಾಗಿರುವ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವಿಪಕ್ಷಗಳು ಗೃಹ ಸಚಿವರ ಮೇಲೆ ಟೀಕೆ ಮಾಡುತ್ತ ಮುಗಬಿದ್ದಿದ್ದವು. ಸ್ವತಃ ಗೃಹ ಸಚಿವರ ತವರಿನಲ್ಲೇ ಇಂತಹ ಲೋಪ ಎರಡನೇ ಬಾರಿ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜೈಲು ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದ ಕೈದಿಗಳ ಬಂಧನ ಮಾಡಲಾಗಿದ್ದು ಇನ್ನೋರ್ವ ಕೈದಿ ಶೋಧಕ್ಕೆ ಕಾರ್ಯಾಚರಣೆ ತೀವ್ರಗೊಂಡಿದೆ.

 ಕಾರಾಗೃಹಕ್ಕೆ ಕಮೀಷನರ್‌ ಡಾ. ಶರಣಪ್ಪ ಭೇಟಿ- ಪರಿಶೀಲನೆ

ಕಲಬುರಗಿ ಪೊಲೀಸ್ ಆಯುಕ್ತ ಡಾ. ಶರಣಪ್ಪ.ಎಸ್.ಡಿ ಬುಧವಾರ ಮತ್ತೆ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಸುತ್ತಲಿನ ಭದ್ರತೆ ಹಾಗೂ ಕೈದಿಗಳ ಊಟದ ಗುಣಮಟ್ಟ ಕುರಿತು ಪರಿಶೀಲಿಸಿ, ಭದ್ರತೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಕ್ರಮ ಕೈಗೊಳ್ಳುವಂತೆ ಜೈಲಿನ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.