ಯುವಜನರಲ್ಲಿ ಆವಿಷ್ಕಾರ ಮನೋಭಾವ ಅಗತ್ಯ: ಅರುಣ್‌ ಭಾಸ್ಕರ್

| Published : Nov 11 2025, 03:00 AM IST

ಸಾರಾಂಶ

ಎಂಜಿಎಂ ಕಾಲೇಜಿನ ಎಂಎಸ್ಸಿ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ತಾಂತ್ರಿಕ ಸಾಂಸ್ಕೃತಿಕ ಉತ್ಸವ - ಪ್ರದೀಪ್ತ ಇತ್ತೀಚೆಗೆ ಸಂಪನ್ನಗೊಂಡಿತು.

ಉಡುಪಿ: ವೇಗವಾಗಿ ಬದಲಾಗುತ್ತಿರುವ ಪ್ರಪಂಚದ ಸವಾಲುಗಳನ್ನು ಎದುರಿಸಲು ಯುವಕರು ನಾವೀನ್ಯತೆ ಅಳವಡಿಸಿಕೊಳ್ಳಬೇಕು. ಸೃಜನಶೀಲ ಚಿಂತನೆ ಮತ್ತು ಹೊಸ ಆಲೋಚನೆಗಳು ಅವರನ್ನು ಚುರುಕಾದ ಮತ್ತು ಹೆಚ್ಚು ಸುಸ್ಥಿರ ಭವಿಷ್ಯ ರೂಪಿಸಲು ಸಬಲಗೊಳಿಸುತ್ತದೆ ಎಂದು ಮಣಿಪಾಲ್ ಟೆಕ್ನಾಲಜೀಸ್‌ನ ಸೈಬರ್ ಸೆಕ್ಯುರಿಟಿ ಚೀಫ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರುಣ್ ಭಾಸ್ಕರ್ ಹೇಳಿದರು.

ಅವರು ಎಂಜಿಎಂ ಕಾಲೇಜಿನ ಎಂಎಸ್ಸಿ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ತಾಂತ್ರಿಕ ಸಾಂಸ್ಕೃತಿಕ ಉತ್ಸವ - ಪ್ರದೀಪ್ತದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಶ್ರೀಧರ್ ರಂಗನಾಥ ಪೈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಾಂಶುಪಾಲೆ, ಪ್ರೊ. ವನಿತಾ ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಉಪ ಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ, ಐಕ್ಯೂಎಸಿ ಸಂಯೋಜಕಿ ಪ್ರೊ.ಶೈಲಜಾ ಎಚ್., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ವೀರಾ ಐಡಾ ಪಿಂಟೋ ಶುಭ ಹಾರೈಸಿದರು. ವಿಭಾಗದ ಮುಖ್ಯಸ್ಥೆ ಡಾ.ರೇಖಾ ಎನ್. ಚಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪ್ರದೀಪ್ತ ಸಂಯೋಜಕಿ ಪ್ರೊ.ಪವಿತ್ರಾ ಸ್ಪರ್ಧೆಗಳ ವರದಿ ವಾಚಿಸಿದರು. ಪ್ರಾಧ್ಯಾಪಕರಾದ ಶಿಲ್ಪಾ ಶಾನ್‌‌ಭಾಗ್, ಭಾರತಿ ಶೆಣೈ ಮತ್ತು ದಾಮೋದರ್ ಪೈ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರಾಧ್ಯಾಪಕರಾದ ಜಯಂತಿ ಪ್ರಭು ಮತ್ತು ಪಲ್ಲವಿ ಸಹಕರಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ್ ರಾವ್, ವೈಷ್ಣವಿ, ಸಾಕ್ಷಿ, ಆಶಿಶ್, ಆಕಾಶ್, ರುತು, ವಿಧಾತ್ರಿ ಮತ್ತು ರಿಶಾ ನಿರೂಪಿಸಿದರು. ಪ್ರದೀಪ್ತಾದ 13 ಕಾರ್ಯಕ್ರಮಗಳಲ್ಲಿ ಒಟ್ಟು 318 ಜನ ಭಾಗವಹಿಸಿದರು.