ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಇದೇ ವರ್ಷದಿಂದ ಎಸ್‍ಎನ್ ರೆಸಾರ್ಟ್‍ನಲ್ಲಿ ಕೆಎಎಸ್, ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸುವ ಮೂಲಕ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಎಸ್.ಎನ್.ರೆಸಾರ್ಟ್‍ನಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅವರೆಲ್ಲಾ ಕೆಎಎಸ್, ಐಎಎಸ್ ಕೋಚಿಂಗ್ ಪಡೆಯಲು ಬೆಂಗಳೂರಿಗೆ ಹೋಗುವಂತಾಗಿದೆ, ಈ ಹಿನ್ನೆಲೆ ಪಟ್ಟಣದಲ್ಲೆ ಅವರಿಗೆಲ್ಲಾ ಕೋಚಿಂಗ್ ಸೆಂಟರ್ ತೆರೆಯಲಿದ್ದು, ಈ ವರ್ಷವೇ ತರಬೇತಿ ತರಗತಿಗಳನ್ನು ಆರಂಭಿಸಲಾಗುವುದು ಎಂದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳಿಸಿಶಿಕ್ಷಕರು ಮಕ್ಕಳಿಗೆ ಜ್ಞಾನ ತುಂಬಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಲ್ಪಿಗಳು, ಅವರಿಗೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ, ಆದರೆ ತಾಲೂಕಿನಲ್ಲಿ ಯಾಕೋ ಎಸ್‍ಎಸ್‍ಎಲ್ಸಿ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ, ಶಿಕ್ಷಕರು ಗ್ರಾಮೀಣ ಮಕ್ಕಳನ್ನು ತಮ್ಮ ಮಕ್ಕಳೆಂದು ತಿಳಿದು ಅವರಲ್ಲಿ ಆತ್ಮವಿಶ್ವಾಸ ತುಂಬಿ ಕೌಶಲ್ಯಗಳನ್ನು ವೃದ್ದಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಿ ಕ್ಷೇತ್ರದಲ್ಲಿ ಕುಸಿದಿರುವ ಫಲಿತಾಂಶವನ್ನು ಹೆಚ್ಚಿಸಲು ಪ್ರಾಮಾಣಿಕ ಯತ್ನ ಮಾಡಬೇಕೆಂದು ಸೂಚಿಸಿದರು.ತಾಲೂಕು ಕಚೇರಿ ಆವರಣದಲ್ಲಿ ಈ ಹಿಂದಿನ ತಹಸೀಲ್ದಾರ್ ರೊಬ್ಬರು ಅನಗತ್ಯವಾಗಿ ಗಿಡಗಳನ್ನು ಬೆಳೆಸಿದ್ದರು. ಆದರೆ ಅಲ್ಲಿ ಸ್ವಚ್ಛತೆ ಮಾಡದ ಕಾರಣ ಹಾವುಗಳ ತಾಣವಾಗಿ ಮಾರ್ಪಟ್ಟಿದ್ದರಿಂದ ಆ ಸಣ್ಣ ಗಿಡಗಳನ್ನು ತೆರವುಗೊಳಿಸಿ ಅಲ್ಲಿ ಉಪ ನೋಂದಣಾಧಿಕಾರಿ ಕಚೇರಿ ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಂಡಿದ್ದರೆ ಮಾಜಿ ಸಂಸದರು ತಾಲೂಕು ಕಚೇರಿ ಆವರಣದಲ್ಲಿದ್ದ ಲಕ್ಷಾಂತರ ಮರಗಿಡಗಳ ಮಾರಣ ಹೋಮ ಮಾಡಲಾಗಿದೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆಂದು ಖಂಡಿಸಿದರು.
ಮಾಜಿ ಸಂಸದರ ಕೊಡುಗೆ ಏನು?ಕಳೆದ 12 ವರ್ಷಗಳಿಂದ ಉಪ ನೋಂದಣಿ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ, ನನ್ನ 12 ವರ್ಷಗಳ ಸಾಧನೆ ಪ್ರಶ್ನೆ ಮಾಡಿರುವ ನೀವು ಸಂಸದರಾಗಿ ನಿಮ್ಮದೇ ಸರ್ಕಾರವಿತ್ತು, ನೀವು ಕ್ಷೇತ್ರದಲ್ಲಿ ಏನು ಮಾಡಿದ್ದಾರೆಂದು ಲೆಕ್ಕ ಕೊಡಲಿ, ನಿಂದಕರಿರಬೇಕು ಹಂದಿಗಳಂತೆ. ನಿಂದಕರಿಲ್ಲದಿದ್ದರೆ ನಾವು ಸೋಮೇರಿಗಳಾಗುತ್ತೆವೆ,ಅವರು ನಿಂದನೆ ಮಾಡಿದಷ್ಟು ನಾನು ಅಭಿವೃದ್ದಿ ಮೂಲಕ ಉತ್ತರ ಕೊಡುವೆ ಎಂದು ಹೇಳಿದರು. ಇದೆ ವೇಳೆ ಉತ್ತಮ ಶಿಕ್ಷಕರನ್ನು ಹಾಗೂ ನಿವೃತ್ತಿ ಹೊಂದಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಗೋವಿಂದ,ಗ್ರೇಡ್ 2 ತಹಸೀಲ್ದಾರ್ ಗಾಯತ್ರಿ,ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯಗೌಡ, ಹಿಂದುಳಿದ ವರ್ಗಗಳ ಅಧ್ಯಕ್ಷ ಕುಂಬಾರಪಾಳ್ಯ ಮಂಜುನಾಥ್, ಇಒ ರವಿಕುಮಾರ್, ಪ್ರಭಾರ ಬಿಇಒ ಶಶಿಕಲಾ, ಅಪ್ಪಯ್ಯಗೌಡ, ಎಲ್.ರಾಮಕೃಷ್ಣ, ಅ.ನಾ.ಹರೀಶ್, ಸುಜಾತ, ಇತರರು ಇದ್ದರು.