ಶುದ್ಧ ನೀರು ಉಳಿಸುವುದು ನಮ್ಮೆಲ್ಲರ ಕರ್ತವ್ಯ: ಎಚ್.ವಿಶ್ನನಾಥ್

| Published : Mar 07 2024, 01:51 AM IST

ಶುದ್ಧ ನೀರು ಉಳಿಸುವುದು ನಮ್ಮೆಲ್ಲರ ಕರ್ತವ್ಯ: ಎಚ್.ವಿಶ್ನನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಪೀಳಿಗೆಗೆ ಶುದ್ಧವಾದ ನೀರನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ರಂಗೇನಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೌರವ ಕಾರ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

ರಂಗೇನಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್.ನಲ್ಲಿ ಕುಡಿಯುವ ನೀರಿನ ಘಟಕ ಉದ್ಗಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಮುಂದಿನ ಪೀಳಿಗೆಗೆ ಶುದ್ಧವಾದ ನೀರನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ರಂಗೇನಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೌರವ ಕಾರ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಸಂಸ್ಥೆಯಿಂದ ಸಮೀಪದ ರಂಗೇನಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರಾಥಮಿಕ ವಿಭಾಗ) ಶಾಲೆಗೆ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತ ನಾಡುತ್ತಿದ್ದರು. ನೀರು ಅಮೂಲ್ಯವಾದದ್ದು, ಒಂದು ಹನಿ ನೀರಿಗೂ ಬೆಲೆ ಇದೆ. ನಮ್ಮ ಶಾಲೆಗೆ ಇಂತಹ ಕೊಡುಗೆಯನ್ನು ನೀಡಿರುವ ಈ ಸಂಸ್ಥೆಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

ರಂಗೇನಹಳ್ಳಿ ಪಶುವೈದ್ಯಾಧಿಕಾರಿ ಚಂದ್ರೇಗೌಡ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ ರೋಗಗಳು ಮನುಷ್ಯನಿಗೆ ಗಾಳಿ ಮತ್ತು ನೀರಿನ ಮೂಲಕ ಬೇಗ ಹರಡುತ್ತದೆ, ಅಶುದ್ಧವಾದ ನೀರಿನಲ್ಲಿ ರೋಗಾಣುಗಳು ಮತ್ತು ಕ್ಲೋರೈಡ್ ಅಂಶದಿಂದಾಗಿ ಮಕ್ಕಳಲ್ಲಿ ಜ್ವರ ಮತ್ತು ಮೂಳೆಗಳ ಮೇಲೆ ಬೇಗ ಪರಿಣಾಮ ಉಂಟುಮಾಡುತ್ತದೆ. ಮುಗ್ದ ಮನಸ್ಸು ಹೊಂದಿರುವ ಈ ಮಕ್ಕಳಿಗೆ ನಮ್ಮ ಸಂಸ್ಥೆ ಶುದ್ಧ ಕುಡಿಯುವ ನೀರಿನ ಘಟಕ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು,

ನಾನೂ ಸಹ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ನಾವು ಓದುವ ಸಮಯದಲ್ಲಿ ಇಂತಹ ಸೌಲಭ್ಯಗಳ ವ್ಯವಸ್ಥೆ ಇರಲಿಲ್ಲ, ಈ ಶಾಲೆ ವಿದ್ಯಾರ್ಥಿಗಳು ಇದರ ನು ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಶಾಲೆ ಮುಖ್ಯ ಶಿಕ್ಷಕ ಶಿವಾನಂದ್ ಮಾತನಾಡಿ ನಮ್ಮ ಶಾಲೆ ಮಕ್ಕಳಿಗೆ ಇದರ ಅಗತ್ಯತೆ ತುಂಬಾ ಇತ್ತು ಅದರ ಕೊರತೆ ಯನ್ನು ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಸಂಸ್ಥೆ ನಿವಾರಣೆ ಮಾಡಿದೆ, ಈ ಸಂಸ್ಥೆಗೆ ನಾವು ಅಬಾರಿಗಳಾಗಿರುತ್ತೇವೆ ಎಂದು ತಿಳಿಸಿದರು.

ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಸಂಸ್ಥೆ ಮಂಜುನಾಥ್, ಪಶು ವೈದ್ಯಕೀಯ ಸಹಾಯಕ ಕಲ್ಲೇಶಪ್ಪ, ಏರಿಯಾ ಮ್ಯಾನೇಜರ್ ಸುರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

6ಕೆಟಿಆರ್.ಕೆ.1ಃ

ತರೀಕೆರೆಯ ರಂಗೇನಹಳ್ಳಿ ಪಬ್ಲಿಕ್ ಶಾಲೆಯಲ್ಲಿ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಸಂಸ್ಥೆಯಿಂದ ಕೊಡುಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ರಂಗೇನಹಳ್ಳಿ ಪಶುವೈದ್ಯಾಧಿಕಾರಿ ಚಂದ್ರೇಗೌಡ ಉದ್ಘಾಟಿಸಿದರು.ಶಾಲೆ ಗೌರವ ಕಾರ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತಿತರರು ಇದ್ದರು.