ಪತ್ರಕರ್ತರ ಲೇಖನಿಗಿದೆ ಸಮಾಜ ಸುಧಾರಿಸುವ ಶಕ್ತಿ: ವಿಜಯಾನಂದ ಕಾಶಪ್ಪನವರ

| Published : Jul 29 2025, 02:08 AM IST

ಸಾರಾಂಶ

ಪತ್ರಕರ್ತರ ಕೈಯಲ್ಲಿರುವ ಲೇಖನಿ ತಪ್ಪು ಮಾಡುವವರಿಗೆ ಖಡ್ಗ ಆಗಬಹುದು. ಕಾರಣ ಪತ್ರಕರ್ತರ ಪೆನ್ನು ಸಮಾಜ ಸುಧಾರಿಸುವ ಖಡ್ಗವಿದ್ದಂತೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಪತ್ರಕರ್ತರ ಕೈಯಲ್ಲಿರುವ ಲೇಖನಿ ತಪ್ಪು ಮಾಡುವವರಿಗೆ ಖಡ್ಗ ಆಗಬಹುದು. ಕಾರಣ ಪತ್ರಕರ್ತರ ಪೆನ್ನು ಸಮಾಜ ಸುಧಾರಿಸುವ ಖಡ್ಗವಿದ್ದಂತೆ ಎಂದು ಶಾಸಕ ವಿಜಯಾನಂದ ಕಆಶಪ್ಪನವರ ತಿಳಿಸಿದರು.

ನಗರದ ಸ್ಬೇಹರಂಗದ ಸಂಸ್ಕಥಿಕ ಭವನದಲ್ಲಿ ಇಳಕಲ್ಲ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದವರು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪತ್ರಿಕಾ ರಂಗ ಮೂರನೇ ಅಂಗವಾಗಿದ್ದು, ಇತರ ಮೂರು ರಂಗಗಳು ಮಾಡುವ ತಪ್ಪನ್ನು ಎತ್ತಿ ತೋರಿಸಿ ಆ ಮೂರು ಅಂಗಗಳು ಸರಿಯಾಗಿ ಕಾರ್ಯ ಮಾಡುವಂತೆ ನೊಡಿಕೊಳ್ಳುತ್ತದೆ. ಪತ್ರಿಕಾ ರಂಗ ಸಮಾಜ ಸೇವೆಯ ಪವತ್ರ ಕಾರ್ಯ. ಅದನ್ನು ಉಳಿಸಿಕೊಂಡು ಹೋಗುವುದು ಪತ್ರಕರ್ತರ ಕರ್ತವ್ಯವಾಗಿದೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಸಿದ್ದನಕೋಳ್ಳದ ಶಿವಕುಮಾರ ಶ್ರೀಗಳು ಆಶೀರ್ವಚನ ನೀಡಿ, ಸಮಾಜ ಮಾಡುವ ತಪ್ಪುಗಳನ್ನು ಗುರುತಿಸುವ ನೀವು ಜನರು ನಿಮ್ಮ ತಪ್ಪಗಳನ್ನು ಎತ್ತಿ ತೊರಿಸುವಂತೆ ಮಾಡಿಕೋಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾದ ಬಾಗಲಕೋಟೆ ಜಿಲ್ಲಾ ಕಾನಿಪ ಅದ್ಯಕ್ಷರಾದ ಆನಂದ ದಲಬಂಜನ ಮಾತನಾಡಿದರು. ನಿವೃತ್ತ ಶಿಕ್ಷಕ ವಿಜಯ ಗದ್ದನಕೇರಿ ಉಪನ್ಯಾಸ ನೀಡಿದರು. ಶಾಸಕರು, ಗಣ್ಯರನ್ನು ಸತ್ಲರಿಸಲಾಯಿತು. ಇಳಕಲ್ಲ ತಾಲೂಕು ಕಾನಿಪ ಸಂಘದ ಅಧ್ಯಕ್ಷ ವಿನೋದ ಬಾರಿಗಿಡದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಮುರ್ತುಜಾ ಖಾದರಿ ದರ್ಗಾ ಗುರಗಳು ಹಾಗೂ ನಗರ ಸಭೆಯ ಅಧ್ಯಕ್ಷೆ ಸುಧಾರಾಣಿ ಸಂಗಮ, ಹುನಗುಂದ ಕಾನಿಪ ಅಧ್ಯಕ್ಷ ಅಮರೇಶ ನಾಗೂರ ಹಾಗು ಇತರರು ಉಪಸ್ಥಿತರಿದ್ದರು. ವಿರೇಶ ಸಿಂಪಿ ಕಾರ್ಯಕ್ರಮ ನಡೆಸಿದರು.