ಜೆಪಿಹೆಗ್ಡೆ, ಅಂಶುಮಂತ್, ಈಗ ಡಿವಿಎಸ್ : ಕಾಂಗ್ರೆಸ್‌ನಲ್ಲಿ ಗೊಂದಲ

| Published : Mar 19 2024, 12:47 AM IST

ಜೆಪಿಹೆಗ್ಡೆ, ಅಂಶುಮಂತ್, ಈಗ ಡಿವಿಎಸ್ : ಕಾಂಗ್ರೆಸ್‌ನಲ್ಲಿ ಗೊಂದಲ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಕಾರ್ಯಕರ್ತರು ಯಾರ ಹೆಸರಿನಲ್ಲಿ ಮತಯಾಚಿಸುವುದು ಎಂಬ ಗೊಂದಲದಲ್ಲಿ ಇದ್ದಾರೆ. ಟಿಕೇಟ್‌ಗಾಗಿ ತೀವ್ರ ಲಾಬಿ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಳೆದ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಗೊಂದಲದ ನಡುವೆ ಅಭ್ಯರ್ಥಿ ಘೋಷಿಸಿದ್ದ ಕಾಂಗ್ರೆಸ್ (ಜೆಡಿಎಸ್ ಮೈತ್ರಿ) ಸೋತಿದ್ದು ಈಗ ಇತಿಹಾಸ, ಈ ಬಾರಿ ಮತ್ತೆ ಅದೇ ಗೊಂದಲ ಕಾಂಗ್ರೆಸ್ ನಲ್ಲಿ ಮುಂದುವರಿದಿದೆ.ಚುನಾವಣೆ ದಿನ ಘೋಷಣೆಗೆ ಮೊದಲೇ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಘೋಷಿಸಿದ್ದು, ಅವರು ಮತಯಾಚನೆಯನ್ನೂ ಆರಂಭಿಸಿಯಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಮಾತ್ರ ಕಾರ್ಯಕರ್ತರು ಯಾರ ಹೆಸರಿನಲ್ಲಿ ಮತಯಾಚಿಸುವುದು ಎಂಬ ಗೊಂದಲದಲ್ಲಿದ್ದಾರೆ.ವಿಧಾನಸಭೆಯಲ್ಲಿ ಉಡುಪಿ ವ್ಯಾಪ್ತಿಯ ಎಲ್ಲಾ 4 ಕ್ಷೇತ್ರಗಳಲ್ಲಿ ಸೋತಿರುವ ಉಡುಪಿ ಕಾಂಗ್ರೆಸ್ ನಲ್ಲಿ ಲೋಕಸಭೆಗೆ ಅಭ್ಯರ್ಥಿ ಇಲ್ಲದೇ, ಚಿಕ್ಕಮಗಳೂರಿನ ಜಿಲ್ಲಾಧ್ಯಕ್ಷ ಡಾ.ಅಂಶುಮತ್, ನ್ಯಾಯವಾದಿ ಸುದೀರ್ ಮರೋಳಿ, ಆರತಿ ಕೃಷ್ಣ ಅವರು ಟಿಕೆಟ್ ಗಾಗಿ ತೀವ್ರ ಲಾಭಿ ನಡೆಸುತಿದ್ದರು.ಹೆಗ್ಡೆಗೆ ಯಾಕಿಲ್ಲ ಟಿಕೆಟ್: ಆದರೆ ಕಾಂಗ್ರೆಸ್ ನಿಂದಲೇ ಬಿಜೆಪಿ ಸೇರಿದ್ದ, ಈಗ ಹಿಂ.ವ.ಗಳ ಆಯೋಗದ ಮಾಜಿ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಮತ್ತೆ ಕಾಂಗ್ರೆಸ್ ಸೇರಿದ್ದು, ಅವರಿಗೇ ಟಿಕೆಟ್ ಎನ್ನಲಾಗುತ್ತಿತ್ತು. ಆದರೆ ಅವರ ವಿರುದ್ಧ ಚಿಕ್ಕಮಗಳೂರಿನಲ್ಲಿ ಆರಂಭವಾದ ಗೋಬ್ಯಾಕ್ ಕೂಗು, ಹೆಗ್ಡೆ ಅವರಿಗೆ ಚುನಾವಣೆಗೆ ಬೇಕಾದ ಆರ್ಥಿಕ ಸಂಪನ್ಮೂಲ ಕೊರತೆ ಅವರಿಗೆ ಟಿಕೆಟ್ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ಹೈಕಮಾಂಡ್ ಅಳ‍ೆದುತೂಗುತ್ತಿದೆ.ಅಂಶುಮಂತ್ ಲಾಬಿ: ಚಿಕ್ಕಮಮಗಳೂರು ವ್ಯಾಪ್ತಿಯ ಎಲ್ಲಾ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಡಾ.ಅಂಶುಮಂತ್ ಅವರಿಗೆ ಅಲ್ಲಿನ ಕಾರ್ಯಕರ್ತರ ಒಲವು ಮತ್ತು ಆರ್ಥಿಕ ಶಕ್ತಿ, ಕಳೆದೆರಡು ದಿನಗಳಿಂದ ಅವರೇ ಅಭ್ಯರ್ಥಿ ಎಂದು ಸುದ್ದಿ ಬಲವಾಗಿತ್ತು. ಅವರೂ ಬೆಂಗಳೂರಿನಲ್ಲಿಯೇ ಇದ್ದು ಟಿಕೆಟ್ ಗಾಗಿ ಬಲವಾದ ಲಾಬಿಯನ್ನೂ ನಡೆಸುತಿದ್ದಾರೆ.ಈಗ ಡಿವಿಎಸ್ ಸರದಿ: ಇದೀಗ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಡಿ.ವಿ.ಸದಾನಂದ ಗೌಡರನ್ನು ಕಾಂಗ್ರೆಸ್ ವರಿಷ್ಠರು ಸಂಪರ್ಕಿಸಿದ್ದಾರೆ. ಉಡುಪಿ - ಚಿಕ್ಕಮಗಳೂರು ಅಥವಾ ಮೈಸೂರು ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ. ಡಿವಿಎಸ್ ತಮ್ಮ ಹುಟ್ಟೂರು ಮಂಗಳೂರಿನ ಟಿಕೆಟ್ ನೀಡಿದ್ರೆ ಓಕೆ ಎಂದು ಹೇಳುತ್ತಿದ್ದಾರೆ.

ಕಾರ್ಯಕರ್ತರ ಮುಜುಗರ: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ಅವರ ಪರ ತೆನೆಹೊತ್ತ ಮಹಿಳೆಗೆ ಮತ ಹಾಕಿ ಎಂದು ಕೇಳುವುದಕ್ಕೆ ಮುಜುಗರ ಅನುಭವಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಈ ಬಾರಿ ಟಿಕೆಟಿಗಾಗಿ ಬಿಜೆಪಿಯಿಂದ ಬಂದವರಿಗೆ ಮತ ಹಾಕಿ ಎಂದು ಕೇಳುವ ಮುಜುಗರಕ್ಕೆ ಒಳಗಾಗುವ ಗೊಂದಲದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಬಿಜೆಪಿ ಮತಗಳನ್ನು ಬಿಜೆಪಿಯಿಂದ ಬಂದ ಅಭ್ಯರ್ಥಿಗಳಿಂದ ಒಡೆದು ಗೆಲ್ಲುವುದಕ್ಕೆ ಯೋಜನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿವಿಎಸ್ ಕಾಂಗ್ರೆಸ್ ಸೇರುವುದು ಖಚಿತ ಆದಲ್ಲಿ ಅವರು ಉಡುಪಿ - ಚಿಕ್ಕಮಗಳೂರಿನಿಂದ ಸ್ಪರ್ಧಿಸುವುದೂ ಖಚಿತವಾಗಿದೆ.