ದೇವರಿಗಿಂತಲೂ ತಾಯಿ ದೊಡ್ಡವಳು : ಶಿವಪ್ರಸಾದ ದೇವರು.

| Published : Mar 19 2024, 12:47 AM IST

ಸಾರಾಂಶ

ರಬಕವಿ-ಬನಹಟ್ಟಿ: ತಾಯಿಗೆ ಸಮನಾದ ಸಂಬಂಧ ಜಗದಲ್ಲಿ ಯಾವುದು ದೊಡ್ಡದಿಲ್ಲ. ನಮಗೆ ದೇವರನ್ನು ತೋರಿಸುವ ತಾಯಿ ಆತನಿಗಿಂತ ದೊಡ್ಡವಳು ಎಂದು ಯರನಾಳದ ಸಂಸ್ಥಾನ ಹಿರೇಮಠದ ಶಿವಪ್ರಸಾದ ದೇವರು ಹೇಳಿದರು. ತಾಲೂಕಿನ ಸಸಾಲಟ್ಟಿ ಗ್ರಾಮದ ಶಿವಲಿಂಗೇಶ್ವರರ 66ನೇ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನಡೆಸಿಕೊಟ್ಟು ಅವರು ಆಶೀರ್ವಚಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಯಿಗೆ ಸಮನಾದ ಸಂಬಂಧ ಜಗದಲ್ಲಿ ಯಾವುದು ದೊಡ್ಡದಿಲ್ಲ. ನಮಗೆ ದೇವರನ್ನು ತೋರಿಸುವ ತಾಯಿ ಆತನಿಗಿಂತ ದೊಡ್ಡವಳು ಎಂದು ಯರನಾಳದ ಸಂಸ್ಥಾನ ಹಿರೇಮಠದ ಶಿವಪ್ರಸಾದ ದೇವರು ಹೇಳಿದರು. ತಾಲೂಕಿನ ಸಸಾಲಟ್ಟಿ ಗ್ರಾಮದ ಶಿವಲಿಂಗೇಶ್ವರರ 66ನೇ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನಡೆಸಿಕೊಟ್ಟು ಅವರು ಆಶೀರ್ವಚಿಸಿದರು. ದೇವರ ಇರುವಿಕೆಯನ್ನು ತಿಳಿಸಿಕೊಟ್ಟು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ತಾಯಿ ಕರ್ತವ್ಯ ಎಂದರು. ಬೆಳಗಾವಿ ಜಿಲ್ಲೆ ಶಿರಗೂರಿನ ಕಲ್ಮೇಶ್ವರ ಆಶ್ರಮದ ಅಭಿನವ ಕಲ್ಮೇಶ್ವರ ಶ್ರೀ, ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ, ಧಾರವಾಡ ಜಿಲ್ಲೆ ಕಮಡೊಳ್ಳಿಯ ಲೋಚನೇಶ್ವರ ಮಠದ ರಾಚೋಟೇಶ್ವರ ಶ್ರೀ ಪ್ರವಚನ ನಡೆಸಿಕೊಟ್ಟರು. ಮಹಾಂತ ದೇವರು, ದಾನೇಶ್ವರ ಶ್ರೀ, ಮಹೇಶ ಹಿರೇಮಠ ಇದ್ದರು. ಗವಾಯಿಗಳಾದ ಕೃಷ್ಣಾ ಹಾಗೂ ಮಲ್ಲಿಕಾರ್ಜುನ ಸಂಗೀತ ಸೇವೆ ನಡೆಸಿಕೊಟ್ಟರು.