ಸಾರಾಂಶ
ಕಡೇಶಿವಾಲಯದ ಮಾತೃಶ್ರೀ ಸಂಜೀವಿನಿ ಒಕ್ಕೂಟದ ಮಹಾಸಭೆ ಹಾಗೂ ಹೊಲಿಗೆ ಉದ್ಯಮ ಮತ್ತು ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಕಡೇಶಿವಾಲಯ ಗ್ರಾಮ ಪಂಚಾಯಿತಿ ಸಂಜೀವಿನಿ ಸಭಾಂಗಣದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಕಡೇಶಿವಾಲಯದ ಮಾತೃಶ್ರೀ ಸಂಜೀವಿನಿ ಒಕ್ಕೂಟದ ಮಹಾಸಭೆ ಹಾಗೂ ಹೊಲಿಗೆ ಉದ್ಯಮ ಮತ್ತು ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಕಡೇಶಿವಾಲಯ ಗ್ರಾಮ ಪಂಚಾಯಿತಿ ಸಂಜೀವಿನಿ ಸಭಾಂಗಣದಲ್ಲಿ ನಡೆಯಿತು.ಒಕ್ಕೂಟ ಅಧ್ಯಕ್ಷೆ ಪ್ರೇಮಾ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್. ರಾವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಕಾರ್ಯಕ್ರಮ ವ್ಯವಸ್ಥಾಪಕರಾದ ಸುಧಾ ಮಾತನಾಡಿದರು.ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನದ ಮಾಹಿತಿ ನೀಡಿ ಪ್ರತಿಜ್ಞೆ ಬೋಧಿಸಲಾಯಿತು. ಒಕ್ಕೂಟ ಅಧ್ಯಕ್ಷೆ ಪ್ರೇಮಾ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ಬಬಿತಾ ಅವರನ್ನು ಆಯ್ಕೆ ಮಾಡಿ, ನೂತನ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಒಕ್ಕೂಟದ ಜವಾಬ್ದಾರಿಯನ್ನು ಪುಸ್ತಕ ಹಸ್ತಾಂತರಿಸುವ ಮೂಲಕ ನೀಡಲಾಯಿತು.
ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಕಣ್ಣೊಟ್ಟು, ಸಂಜೀವಿನಿ ಅಭಿಯಾನ ಘಟಕದ ವಲಯ ಮೇಲ್ವಿಚಾರಕಿ ಕುಸುಮಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಸಂಪನ್ಮೂಲ ವ್ಯಕ್ತಿ ಸುಧಾ ಸ್ವಾಗತಿಸಿದರು. ಮಮತಾ ವರದಿ, ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು. ರೋಹಿಣಿ ಪ್ರಾರ್ಥಿಸಿದರು. ಮಮತಾ ನಿರೂಪಿಸಿದರು. ಕೃಷಿ ಸಖಿ ಶೋಭಾ ವಂದಿಸಿದರು.